ದೇಹ, ಮನಸ್ಸು ಗಟ್ಟಿಗೊಳಿಸಕೊಳ್ಳಲು ಕರಾಟೆ ಕಲೆ ಮುಖ್ಯ: ಮೋಟ್ಲಾ ನಾಯಕ

0

Get real time updates directly on you device, subscribe now.

ಕನ್ನಡನೆಟ್ ನ್ಯೂಸ್

ರಾಜ್ಯ ಮಟ್ಟದ ದಸರಾ ಮಟ್ಟದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕಕ್ಕೆ ಕೀತಿ ತರಲಿ: ದಶರತ್, ಡಿ.

ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಮೋಟ್ಲಾ ನಾಯಕ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು, ಜೆಸ್ಕಾಂ ಕೊಪ್ಪಳ, ಮಾತನಾಡುತ್ತಾ ಕರಾಟೆ ಕಲೆಯುವುದ ಇಂದಿನ ದಿನಮಾನಗಳಲ್ಲಿ ಬಹಳ ಮುಖ್ಯ ದೇಹ, ಮನಸ್ಸು ಗಟ್ಟಿಗೊಳಿಸಕೊಳ್ಳಲು ಮತ್ತು ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲೆಯನ್ನು ಕಲಿಯಬೇಕು ವಿಶೇಷವಾಗಿ ಹೆಣ್ಣು ಮಕ್ಕಳು ಕಲಿಯಲೇಬೇಕು. ಈ ದಸರಾ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು.
ಅಧ್ಯಕ್ಷತೆಯನ್ನು ವಹಿಸಿದ ದಶರತ್, ಡಿ. ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಸ್ಪೋರ್ಟ್ ಕರಾಟೆ ಅಸೋಸಿಯೇಸನ್ ಕಲಬುರಗಿ ಮಾತನಾಡುತ್ತಾ 13 ವರ್ಷಗಳ ನಂತರ ಕರಾಟೆ ದಸರಾ ಕ್ರೀಡಾಕೂಟದಲ್ಲಿ ಮರು ಸೇರ್ಪಡೆಗೆ ಪ್ರಯತ್ನಿಸಿದ ಎಲ್ಲರಿಗೂ ಕೃತಜ್ಞಿಸುತ್ತಾ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಉತ್ತಮ ತಯಾರಿಯೊಂದಿಗೆ ರಾಜ್ಯ ಮಟ್ಟದ ದಸರಾ ಮಟ್ಟದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ ತರಲೇಂದು ಹಾರೈಸುತ್ತೇನೆ.
30-09-2026 ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ನ್ಯಾಷನಲ್ ಸ್ಪೀರಿಟ್ ಕರಾಟೆ ಅಕಾಡೆಮಿ ಹಾಗೂ ಕೊಪ್ಪಳ ಡಿಸ್ಟಿçÃಕ್ಟ್ ಸ್ಪೋರ್ಟ್ಸ ಕರಾಟೆ ಅಸೋಸಿಯೇಷನ್ ಇವರುಗಳ ಸಹಯೋಗದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಕರಾಟೆ ಕ್ರೀಡಾ ಕೂಟ-2026 ರಲ್ಲಿ ಮಾತನಾಡಿದರು. ಕಲಬುರಗಿ ವಿಭಾಗದ 7 ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕೆ,ಪಿ, ಜೋಶ್ ರೇಪ್ರೀ ಕಮಿಷನ್ ಚೇರ್‌ಮನ್, ಕಲಬುರಗಿ ವಿಭಾಗ ಕಾರ್ಯದರ್ಶಿ ಕೃಷ್ಣ ಗೌಳಿ, ಶಾಹೀದ ಹುಸೇನ ತಹಶೀಲ್ದಾರ ಕಲಬುರಗಿ ವಿಭಾಗ ಮಟ್ಟದ ಅನುದಾನ ರಹಿತ ಶಾಲಾ ಮಂಡಳಿ ಒಕ್ಕೂಟದ ಉಪಾಧ್ಯಕ್ಷರು, ಹನುಮೇಶ ಬಾರಕೇರ, ಡಿ, ಬಾಷಾ ಸಾಹೆಬ್ ರೇಫ್ರಿ ಕಮಿಷನ್ ಉಪಾಧ್ಯಕ್ಷರು, ಬೀದರ್ ಜಿಲ್ಲಾ ಅಧ್ಯಕ್ಷರಾದ ಲಕ್ಷಿö್ಮÃಕಾಂತ, ಡಿ. ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮನೋಹರ ಬಿರನೂರು, ರಾಯಚೂರು ಜಿಲ್ಲಾ ಅಧ್ಯಕ್ಷರಾದ ಅನೀರುದ್ದ ಪಾತ್ರೆ, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಮರಿಸ್ವಾಮಿ, ಬಳ್ಳಾರಿ ಹಿರಿಯ ಕರಾಟೆ ಶಿಕ್ಷಕರಾದ ಪ್ರಸಾದ, ಶಹಪೂರ ಹಿರಿಯ ಕರಾಟೆ ಶಿಕ್ಷಕರಾದ ಭೀಮಾ ಶಂಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜಾಬಕ್ಷಿ ಎಚ್, ವಿ, ಪ್ರಾಸ್ತಾವಿಕ ಮಾತನಾಡಿದರು, ರಾಕೇಶ್ ಕುಂಬಾರ ಮತ್ತು ದೇವಪ್ಪ ಕಲ್ಲನವರ ಸ್ವಾಗತ ಕೋರಿದರು, ಮಹಾಂತೇಶ ಮಂಗಳೂರು ನಿರುಪಣೆ ಮಾಡಿದರು, ಚಾಂದಪಾಷಾ ವಂದನಾರ್ಪಣೆಯನ್ನು ಮಾಡಿದರು.
ರಾಜಾಬಕ್ಷಿ, ಎಚ್, ವಿ.
9448183708

Get real time updates directly on you device, subscribe now.

Leave A Reply

Your email address will not be published.

error: Content is protected !!