ಮನೆಗೊಂದು ಗ್ರಂಥಾಲಯದ ಮೂಲಕ ಮನೆಯೊಳಗೆ ಜ್ಞಾನದ ಗುಡಿ ಕಟ್ಟಿದ ಮಕ್ಕಳು: ಶ್ರೀ ಮರಿಶಾಂತವೀರ ಸ್ವಾಮೀಜಿ
ದೊಡ್ಡವರು ಊರಿಗೊಂದು ಗುಡಿ ಕಟ್ಟಿದರೆ, ಮಕ್ಕಳು ‘ಮನೆಗೊಂದು ಗ್ರಂಥಾಲಯ’ ಮಾಡುವ ಮೂಲಕ ತಮ್ಮ ಮನೆಯೊಳಗೇ ಜ್ಞಾನದ ಗುಡಿ ಕಟ್ಟಿದ್ದಾರೆ ಎಂದು ಶ್ರೀ ಗವಿಮಠ ಸಂಸ್ಥಾನದ ಕಡಲಬಾಳು ಶಾಖಾ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಹೇಳಿದರು.

