ಕುಷ್ಟಗಿ ಮದ್ದಾನೇಶ್ವರ ಮಠದಲ್ಲಿ ರಜತ ಮಹೋತ್ಸವದ ಪೂರ್ವ ಬಾವಿ ಸಭೆ

Get real time updates directly on you device, subscribe now.

.

೨೦೨೭ ಮಾರ್ಚಿನಲ್ಲಿ,ಶಿಲಾ ಮಂಟಪದ ಲೋಕಾರ್ಪಣೆ,     ಶ್ರೀ ಗಳ ಪಟ್ಟಾಧಿಕಾರ ಮಹೋತ್ಸವ, ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ,೨೧ ದಿನಗಳ ಕಾಲ ಪುರಾಣ ಸೇರಿದಂತೆ ೨೫ ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಸಿದ್ದತೆ.

 

ಪಟ್ಟಣದ ಭವ್ಯ ಪರಂಪರೆ ಹೊಂದಿದ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳವರ ೨೫ ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಹಿನ್ನೆಲೆಯಲ್ಲಿ ನೂತನ ಶಿಲಾ ಮಂಟಪದ ಲೋಕಾರ್ಪಣೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಠದ ಭಕ್ತರು ತನು ಮನ ಧನ ದಿಂದಾ ಸಹಕಾರ ನೀಡಬೇಕು ಎಂದು ನಿಡಸೇಸಿ ಮಠದ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ಮದ್ದಾನೇಶ್ವರ ಮಠದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಠದ ಭಕ್ತರ ಪೂರ್ವ ಬಾವಿ ಸಭೆಯಲ್ಲಿ ಭಾಗವಹಿಸಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಚೆಂದದ ಶಿಲಾ ಮಂಟಪದ ಲೋಕಾರ್ಪಣೆ ಬರುವ ೨೦೨೭ ಮಾರ್ಚಿನಲ್ಲಿ ಮಾಡುವ ಬಗ್ಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಬಳ್ಳಾರಿ ವಿಭಾಗದ ಕಾನೂನು  ಹಿರಿಯ ಅಧಿಕಾರಿಗಳಾದ ಬಿ.ಎಸ್ ಪಾಟೀಲ ಧಾರ್ಮಿಕ ಕಾರ್ಯಕ್ರಮದ ಜೋತೆಗೆ ಆರೋಗ್ಯ ತಪಾಸಣೆ, ರೈತ ಪರ ಚಿಂತನೆಯ ಕುರಿತು ವಿಚಾರ ಗೋಷ್ಠಿ ಮಾಡಲು ಸಲಹೆ ನೀಡಿದರು.

 

ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಮಾಡಲು ಕುಷ್ಟಗಿ ಪಟ್ಟಣದ ರಸ್ತೆ ಗಳು ಸಮರ್ಪಕವಾಗಿಲ್ಲಾ ಅವ್ಯವಸ್ಥೆ ಆದರೆ ಊರಿನ ಗೌರವಕ್ಕೆ ಚ್ಯೂತಿ ಮರು ಪರಿಶೀಲನೆ ಮಾಡಿ.

ವೀರಶೈವ ಲಿಂಗಾಯತರಿಗೆ ಲಿಂಗ ಪೂಜೆ ಮತ್ತು ಲಿಂಗ ದೀಕ್ಷೆಯ ಅರಿವು ಮೂಡಿಸಿದರೆ ಸಾರ್ಥಕ

ಕೆ.ಶರಣಪ್ಪ ವಕೀಲರು ಮಾಜಿ ಶಾಸಕರು ಕುಷ್ಟಗಿ

 

ಸಭೆಯ ಸಾನಿದ್ಯವಹಿಸಿದ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಇಲ್ಲಿಯವರೆಗೆ ಯಾವ ಭಕ್ತರನ್ನು ಕಾಡಿ ಬೇಡಿ ದೇಣಿಗೆ ಪಡೆಯದೆ ಜೋಳಿಗೆಗೆ ಹಾಕಿದ ಸುಮಾರು ಒಂದು ಕೋಟಿ ರೂಪಾಯಿ ಸಂಗ್ರಹಿಸಿ ಬೃಹತ್ ಶಿಲಾ ಮಂಟಪ ನಿರ್ಮಾಣ ಮಾಡಲಾಗಿದೆ.ಇದರ ಉದ್ಘಾಟನಾ ಸಮಾರಂಭಕ್ಕೆ ಹಾಗೂ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಮಹೋತ್ಸವ, ೨೧ ದಿನಗಳ ಕಾಲ ಪುರಾಣ, ೨೫ ಸಾವಿರ ಮುತ್ತೈದೆಯರಿಗೆ ಉಡಿ ತುಂಬುವುದು, ೨೫ ಜನ ಪೂಜ್ಯ  ಶ್ರೀಗಳಿಂದಾ ಶಿಲಾ ಮಂಟಪದಲ್ಲಿ  ಧಾರ್ಮಿಕ ವಿಧಿ ವಿಧಾನಗಳ ಮಹಾ ಪೂಜೆ ಹೋಮ ಹವನ ಸೇರಿದಂತೆ ೨೫ ಸಾವಿರ ಕುಂಬ ಮೆರವಣಿಗೆ ,ಮಹಾರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ಸಾಧನೆ ಗೈದ ಮಠದ ಭಕ್ತರಿಗೆ ದಾನಿ ಗಳಿಗೆ ಗೌರವಾರ್ಪಣೆ, ನಿರಂತರವಾಗಿ ಪ್ರಸಾದದ ವ್ಯವಸ್ಥೆಗೆ ಸುಮಾರು ಮೂರು ಕೋಟಿ ರೂಪಾಯಿ ಅಗತ್ಯವಿದೆ. ಕಾರಣ ಪ್ರತಿಯೊಬ್ಬ ಭಕ್ತರು ಸೇವೆಯನ್ನು ಸಲ್ಲಿಸಿ ಯಶಸ್ವಿಗೋಳಿಸಲು ಕರೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಠದ ಭಕ್ತರಾದ ರವಿಕುಮಾರ್ ಹಿರೇಮಠ, ವೀರೇಶ ಬಂಗಾರ ಶೆಟ್ಟರ್, ಶೇಖರಗೌಡ ಮಾ.ಪಾ, ಬಸವರಾಜ ಹಳ್ಳೂರು,ದೇವೇಂದ್ರಪ್ಪ ಬಳೋಟಗಿ, ಬಸವರಾಜ ಕುದರಿಮೋತಿ,ಶಶಿಧರ ಕವಲಿ,ಟಿ ಬಸವರಾಜ, ಮರಸಣ್ಣ ತಾಳದ,ಕಂದಕೂರಪ್ಪ ವಾಲ್ಮೀಕಿ, ಸಿ.ಎಮ್ ಹಿರೇಮಠ, ಶಿವಕುಮಾರ್ ಗಂಧದಮಠ ಸೇರಿದಂತೆ ಅನೇಕರು ತನು ಮನ ಧನದ ಸಹಕಾರ ನೀಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದು ಅಭಿಪ್ರಾಯ ಪಟ್ಟರು.

ವೇದಿಕೆ ಮೇಲೆ ಶ್ರೀ ಚಂದ್ರಶೇಖರ ದೇವರು ದೋಟಿಹಾಳ,ತಾವರಗೇರಿ,ಗುಡದೂರಿನ ಶ್ರೀ ಗಳು ಉಪಸ್ಥಿತರಿದ್ದರು. ಉಮೇಶ್ ಮಂಗಳೂರು ನಿರೂಪಿಸಿ ವಂದಿಸಿದರು.

 

 

೨೧ ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಶ್ರೀ ಗಳು,ಹಾಗೂ ಸೂತ್ತೂರಿನ ಶ್ರೀಗಳನ್ನು ಆಹ್ವಾನಿಸಲಾಗುವದು.

ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನೇಶ್ವರ ಮಠ ಕುಷ್ಟಗಿ

 

ಮದ್ದಾನೇಶ್ವರ ಮಠದಲ್ಲಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕುಷ್ಟಗಿ ,ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ನಿಡಸೇಸಿ, ಶ್ರೀ ಚಂದ್ರಶೇಖರ ದೇವರು ದೋಟಿಹಾಳ, ಮಾಜಿ ಶಾಸಕ ಕೆ ಶರಣಪ್ಪ ವಕೀಲರು, ಸೇರಿದಂತೆ ತಾವರಗೇರಿ,ಗುಡದೂರಿನ ಪೂಜ್ಯರು ಇದ್ದರು. kustagi news

Get real time updates directly on you device, subscribe now.

Comments are closed.

error: Content is protected !!