ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ 

0

Get real time updates directly on you device, subscribe now.

ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಕಲಾಪ ಬಹಿಷ್ಕಾರ
ಕೊಪ್ಪಳ : ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಾಗೂ ವಕೀಲರ ರಕ್ಷಣೆಗೆ ಸಂಬAಧಿಸಿದ ಕಾಯ್ದೆ ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೊಪ್ಪಳ  ಜಿಲ್ಕಾವಕೀಲರ ಸಂಘದ ಅಧ್ಯಕ್ಷರಾದ   ಪ್ರಕಾಶ ಆನಂದಳ್ಳಿ  ಇವರ ನೇತೃತ್ವದಲ್ಲಿ ಇಂದು ಕೊಪ್ಪಳದಲ್ಲಿ ಬೃಹತ ಪ್ರತಿಭಟನೆ ನಡೆಸಿ , ಸರಕಾರಕ್ಜೆ ಮನವಿ ಸಲ್ಲಿಸಲಾಯಿತು.
 ನಗರದ ಬಸವೇಶ್ವರ ವೃತ್ತದಲ್ಲಿ ಭಾರಿ ಸಂಖ್ಯೆಯ ವಕೀಲರೊಂದಿಗೆ ಈ ಪ್ರತಿಭಟನೆ ಮಾಡಿದರು. ವಕೀಲರ ಮೇಲಿನ ಅನ್ಯಾಯ, ದೌರ್ಜನ್ಯವನ್ನು ಈ ವೇಳೆ ತೀವ್ರವಾಗಿ ಖಂಡಿಸಲಾಯಿತು. ಇಂದುಕೋರ್ಟ ಕಲಾಪ ಬಹಿಷ್ಕರಿಸಲಾಗಿತ್ತು. ವಕೀಲರು ತಮ್ಮ ವೃತ್ತಿಯನ್ನು ನಿರ್ಭಿತಿಯಿಂದ ಹಾಗೂ ಸುರಕ್ಷಿತವಾಗಿ ನಿರ್ವಹಿಸಲು ಅಗತ್ಯವಾದ ಭದ್ರತೆ ಕೊರತೆ ಹಾಗೂ ವಕೀಲರಿಗೆ ಗೌರವ, ಘನತೆ, ಸ್ವಾಭಿಮಾನ, ಸುರಕ್ಷತೆ ಮತ್ತು ವೃತ್ತಿಪರ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾದ್ಯವಿಲ್ಲ. ಹಿಗಿದ್ದರೂ ವಕೀಲರ ಮೇಲೆ ವಿನಾ ಕಾರಣ ಹಲ್ಲೆ, ದೌರ್ಜನ್ಯ, ಅನ್ಯಾಯಗಳು ನಡೆಯುತ್ತಲಿವೆ. ಬೆಂಗಳೂರಿನ ವೈಟ್ ಫೀಲ್ಡನ್ ವಕೀಲರಾದ  ಮಂಜುನಾಥ ಹಾಗೂ ಅನ್ನಪ್ರರ್ಣೆಶ್ವರಿ ನಗರದ ಶ್ರೀರಾಮ್ ರವರ ಹತ್ಯೆ ಹಾಗೂ ಗೌರಿಬಿಧನೂರಿನ ವಕೀಲರಾದ  ವೆಂಕಟರಮಣ ಸನ್ನಕ್ಕಿ ರವರ ಮೇಲೆ ಕೊಲೆ ಯತ್ನದ ಘಟನೆಯನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘವು ತಿವ್ರವಾಗಿ ಖಂಡಿಸಿದ.  ವಕೀಲರ ರಕ್ಷಣೆಗೆ ಸಂಬAಧಿಸಿದ ಕಾಯ್ದೆಯನ್ನು ಮತ್ತುಷ್ಟು ಬಲಪಡಿಸಿ, ಸಮಗ್ರವಾದ ವಕೀಲರ ರಕ್ಷಣಾ ಕಾಯ್ದೆಯನ್ನು ತರಬೇಕಾಗಿದೆ. ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ ಮುಷ್ಕರ ಹಾಗೂ ಪ್ರತಿಭಟನೆಯನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘವು ಬೆಂಬಲ ಸೂಚಿಸುತ್ತದೆ. ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಅನ್ಯಾಯಗಳು ಹೆಚ್ಚುತ್ತಿದ್ದು, ವಕೀಲರ ರಕ್ಷಣೆಗೆ ಸಂಬAಧಿಸಿದ ಕಾಯ್ದೆಯನ್ನು ಮತ್ತುಷ್ಟು ಬಲಪಡಿಸಿ, ಶೀಘ್ರವಾಗಿ ಸಮಗ್ರವಾದ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಕೊಪ್ಪಳ ಜಿಲ್ಲಾ ವಕೀಲರ ಸಂಘವ ಆಗ್ರಹಿಸಿದೆ.
ಸ್ಥಳಕ್ಕೆ ಆಗಮಿಸಿದ ಎಸಿ ಮೆಹಬೂಬ ಜೀಲಾನಿರವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷರಾದ ಅಂದಾನಗೌಡರ್, ಪ್ರಧಾನ ಕಾರ್ಯದರ್ಶಿ ಬಿ.ವಿ ಸಜ್ಜನ್, ಜಂಟಿ ಕಾರ್ಯದರ್ಶಿ ಬಸವರಾಜ, ಖಜಾಂಚಿ ಶ್ರೀಮತಿ ಪುಷ್ಪಾ, ಹಿರಿಯರಾದ ಶ್ರೀಮತಿ ಸಂಧ್ಯಾ ಮಾದಿನೂರ, ಮಾಜಿ ಅಧ್ಯಕ್ಷರಾದ ಎ.ವಿ.ಕಣವಿ, ಪೀರಾಹುಸೇನ ಹೊಸಳ್ಳಿ,   ಆಸೀಫ ಅಲಿ ಮಂಜುನಾಥ ಗಡಾದ ಇನ್ನಿತರ ಹಿರಿಯ, ವಕೀಲರ ನೇತೃತ್ವದಲ್ಲಿ ನೂರಾರು ವಕೀಲರು  ಪಾಲ್ಗೊಂಡಿದ್ದರು
koppal advocates
Bar association koppal

Get real time updates directly on you device, subscribe now.

Leave A Reply

Your email address will not be published.

error: Content is protected !!