ಕನ್ನಡ ಪತ್ರಿಕೋದ್ಯಮದ ಹುಟ್ಟು ಮತ್ತು ಬೆಳವಣಿಗೆ

0

Get real time updates directly on you device, subscribe now.

(ಜುಲೈ ೧ ಕನ್ನಡ ಪತ್ರಿಕಾ ದಿನಾಚÀರಣೆಯ ಪ್ರಯುಕ್ತ ಲೇಖನ)
ಪತ್ರಿಕಾ ಮಾಧ್ಯಮಅತ್ಯಂತ ಶಕ್ತಿಯುತವಾದುದು.‘ಸೈನಿಕನ ಬಂದೂಕಿಗಿAತ ಪತ್ರಕರ್ತನ ಲೇಖನಿ’ ಹೆಚ್ಚು ಪ್ರಬಲವಾದುದುಎಂದು ನೆಪೊಲೀಯನ್ ಹೇಳಿದ್ದಾರೆ.ಮಾಧ್ಯಮಗಳು ಸಮಾಜದಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮಾಧ್ಯಮಗಳು ಓದುಗರಿಗೆಜ್ಞಾನಾರ್ಜನೆ, ಮಾಹಿತಿ ಹಾಗೂ ಮನರಂಜನೆಯದಾಹವನ್ನು ನಿರಂತರವಾಗಿ ನೀಗಿಸುತ್ತಾ ಬಂದಿವೆ. ಜನಾಭಿಪ್ರಾಯವನ್ನುರೂಪಿಸುವಲ್ಲಿ ಪತ್ರಿಕೆಯಷ್ಟು ಪರಿಣಾಮಕಾರಿ ಮಾಧ್ಯಮ ಬೇರೊಂದಿಲ್ಲ. ಇಪ್ಪತ್ತೊಂದುನೆಯ ಶತಮಾನದಆರಂಭದಲ್ಲಿ ಆಸ್ತಿತ್ವಕ್ಕೆ ಬಂದ ಸಮೂಹ ಮಾಧ್ಯಮಗಳಲ್ಲಿ ಪತ್ರಿಕೆಗಳಿಗೆಅಗ್ರಸ್ಥಾನ. ಪತ್ರಿಕೆಗಳು ಜನರಿಗೆ ಸಮೂಹ ಶಿಕ್ಷಣ, ಮಾರ್ಗದರ್ಶನ, ಜಾಹಿರಾತು, ಮನರಂಜನೆ ಮೊದಲಾದ ಸೇವಾ ಸೌಲಭ್ಯಗಳನ್ನು ಒದಗಿಸುವ ಸಂಪರ್ಕ ಮಾಧ್ಯಮಗಳ ಒಂದು ಅವಿಭಾಜ್ಯಅಂಗವಾಗಿವೆ.
ಕನ್ನಡ ಪತ್ರಿಕೋದ್ಯಮ
ಭಾರತೀಯಪತ್ರಿಕೋದ್ಯಮದಇತಿಹಾಸದಲ್ಲಿಕನ್ನಡ ಪತ್ರಿಕೋದ್ಯಮದಕೊಡುಗೆಗಮನಾರ್ಹವಾದುದು.ರಾಜ್ಯದರಾಜಕೀಯ, ಸಾಮಾಜಿಕ ಮತ್ತುಆರ್ಥಿಕ ಬೆಳವಣಿಗೆಯಲ್ಲಿ ಕನ್ನಡ ಪತ್ರಿಕೋದ್ಯಮತನ್ನದೇಆದಕೊಡುಗೆ ನೀಡಿದೆ. ಕರ್ನಾಟಕದಲ್ಲಿಕ್ರೆöÊಸ್ತ ಪಾದ್ರಿಗಳು ನೀಡಿದ ಪ್ರೋತ್ಸಾಹದಿಂದಾಗಿಕನ್ನಡ ಪತ್ರಿಕೋದ್ಯಮವನ್ನು ಆರಂಭಿಸಿದ್ದು ಮಂಗಳೂರಿನ ಬಾಸೆಲ್ ಮಿಷನ್ನಿನ ಪಾದ್ರಿ ಹರ್ಮನ್ ಮೋಗ್ಲಿಂಗ್‌ರವರು.ಇವರ ಸಂಪಾದತ್ವದಲ್ಲಿಜುಲೈ ೧, ೧೮೪೩ ರಂದು ‘ಮಂಗಳೂರ ಸಮಾಚಾರ’ ಕನ್ನಡದ ಪ್ರಥಮ ಪತ್ರಿಕೆ ಪ್ರಕಟವಾಯಿತು.ಅದ್ದರಿಂದ  ಮಂಗಳೂರ ಸಮಚಾರ ಪತ್ರಿಕೆ ಪ್ರಾರಂಭವಾದ ದಿನವನ್ನುಕರ್ನಾಟಕದಲ್ಲಿಜುಲೈ ೧ ರಂದುಕನ್ನಡ ಪತ್ರಿಕ ದಿನಾಚರಣೆಯನ್ನುಅಚರಿಸಲಾಗುತ್ತಿದೆ.
ಮಂಗಳೂರ ಸಮಚಾರ ನಂತರ ಧಾರವಾಡ ಮತ್ತುಹಳೇ ಮೈಸೂರು ಪ್ರಾಂತ್ಯಗಳಲ್ಲಿ ಪತ್ರಿಕೆಗಳು ಜನ್ಮತಾಳಿದವು. ಬೆಳಗಾವಿಯಲ್ಲಿ ೧೮೪೯ ರಲ್ಲಿ ಪ್ರಾರಂಭವಾದ  ‘ವೃತ್ತಾಂತ ಬೋದಿನಿ’, ತಾಯಿನಾಡು, ಪ್ರಜಾಮತ, ಜನವಾಣಿ, ಕರ್ನಾಟಕ ವೈಭವ, ನವಭಾರತ, ವೃತ್ತಂತಚಿAತಾಮಣಿ ಮುಂತಾದವು ಪ್ರಮುಖವಾದವು.
ಸ್ವಾತಂತ್ರö್ಯ ಪೂರ್ವದ ಪತ್ರಿಕೆಗಳನ್ನು ಗಮನಿಸಿದರೆ ಅವು ಉದ್ಯಮವಾಗಿರಲಿಲ್ಲ. ಪತ್ರಿಕೆಯ ವೃತ್ತಿಒಂದು ಸೇವೆಯಾಗಿತ್ತು.ನಮ್ಮ ದೇಶ ಸ್ವಾತಂತ್ರö್ಯಪಡೆಯುವುದುಅAದಿನ ಪತ್ರಿಕೆಗಳ ಗುರಿಯಾಗಿತ್ತು.ಅದಕ್ಕಾಗಿ ಪತ್ರಿಕೆಗಳು ತಮ್ಮಿಂದಾದ ಸಮಾಜ ಪರ ಕೆಲಸ ಮಾಡುವುದು ಬಿಟ್ಟರೆ ಹಣ ಮಾಡುವ ಮಾಧ್ಯಮವಾಗಿ ಪತ್ರಿಕೆಗಳು ಕಂಡಿರಲಿಲ್ಲ. ನಮ್ಮ ದೇಶ ಸ್ವಾತಂತ್ರö್ಯಗಳಿಸಿದ  ಮೇಲೆ ೧೯೫೬ರ ವರೆಗೆ ಈ ಭಾವನೆಯಲ್ಲಿತೀವ್ರತರ ಬದಲಾವಣೆಯೇನೂ ಸಂಭವಿಸಲಿಲ್ಲ. ಮನೆ-ಮಠಗಳನ್ನು ಒತ್ತೆಯಿಟ್ಟು ಸಮಾಜಕ್ಕಾಗಿ ಮತ್ತು ಕನ್ನಡಕ್ಕಾಗಿ ಪತ್ರಿಕೆಗಳು ನಡೆಸಿದ ಉದಾಹರಣೆಗಳು ಇವೆ. ಕನ್ನಡರಾಜ್ಯೋದಯಕ್ಕಾಗಿ ಹೋರಾಡಿದಂತ ಪತ್ರಿಕಾ ಮಾಲಿಕರುಇದ್ದರು.ಎಂ.ವೆAಕಟಕೃಷ್ಣಯ್ಯವರು ಪತ್ರಿಕೋದ್ಯಮಕ್ಕೆತಮ್ಮದೇಆದಕೊಡುಗೆ ನೀಡಿದ್ದಾರೆ.ಡಿ.ವಿ. ಗುಂಡಪ್ಪ, ತಿರುಮಲೆತಾತಚಾರ್ಯ, ಸಿದ್ದವನಹಳ್ಳಿ ಕೃಷ್ಣಶರ್ಮ, ಟಿ.ಎಸ್.ರಾಮಚಂದ್ರರಾವ್(ಟಿಎಸ್ಸಾರ್) ಮತ್ತುಖಾದ್ರಿಶಾಮಣ್ಣ, ನಂಜನಗೂಡ ತಿರುಮಲಾಂಬ, ಆರ್ ಕಲ್ಯಾಣಮ್ಮ ಮೊದಲಾದವರುಕನ್ನಡ ಪತ್ರಿಕೋದ್ಯಮದ ಮಹಾನ್ ದಿಗ್ಗಜರು.
ಸ್ವಾತಂತ್ರö್ಯ ಪೂರ್ವದಲ್ಲೇಆರಂಭವಾದ ಹುಬ್ಬಳಿಯ ಲೋಕ ಶಿಕ್ಷಣ ಸಂಸ್ಥೆಯ ಸಂಯುಕ್ತಕರ್ನಾಟಕ (೧೯೩೩) ಕರ್ಮವೀರ, ಕಸ್ತೂರಿ ಪತ್ರಿಕೆಗಳು ಸ್ವಾತಂತ್ರö್ಯನAತರವೂ ಈ ಪತ್ರಿಕೆಗಳು ಈಗಲೂ ಪ್ರಕಟವಾಗುತ್ತಿವೆ. ಸ್ವಾತಂತ್ರö್ಯ ನಂತರ ಬಂದ ಪತ್ರಿಕೆಗಳಲ್ಲಿ  ಪ್ರಜಾವಾಣಿ (೧೯೪೮), ಕನ್ನಡ ಪ್ರಭ (೧೯೬೨), ಉದಯವಾಣಿ (೧೯೭೦), ವಿಶಾಲ ಕರ್ನಾಟಕ (೧೯೪೭), ಪಾಟೀಲ ಪುಟ್ಟಪ್ಪನವರ ಪ್ರಪಂಚ (೧೯೫೪), ವಿಜಯಕರ್ನಾಟಕ (೨೦೦೦) ವಾರ್ತಾಭಾರತಿ (೨೦೦೧) ಮತ್ತು  ವಿಜಯವಾಣಿ (೨೦೧೨), ವಿಶ್ವವಾಣಿ(೨೦೧೪) ಪ್ರಮುಖವಾಗಿವೆ.  ಕನ್ನಡ ಪತ್ರಿಕೋದ್ಯಮಕ್ಕೆ ೧೭೫ ವರ್ಷಗಳ ಇತಿಹಾಸಇದೆ.ಕನ್ನಡ ಪತ್ರಿಕೋದ್ಯಮಕ್ಕೆ ಬದ್ರವಾದ ಬುನಾದಿ ಹಾಕಿದವರು ಸಾಹಿತಿಗಳು ಮತ್ತು ಹೋರಾಟಗಾರರು.ಇವರೇ ಹೆಚ್ಚು ಪತ್ರಿಕೆಗಳನ್ನು ಪ್ರಾರಂಭ ಮಾಡಿದ್ದಾರೆ.ಇವರು ಪತ್ರಿಕೆಗಳನ್ನು ಸ್ವಾತಂತ್ರö್ಯ ಹೋರಾಟ ಮತ್ತು ಕರ್ನಾಟಕ  ಏಕೀಕರಣಹೋರಾಟಕ್ಕೆ ಮತ್ತು ಸಾಹಿತ್ಯ ಪ್ರಸಾರಕ್ಕೆ ಬಳಸಿಕೊಂಡಿದ್ದಾರೆ.
ಕರ್ನಾಟಕದ ಪ್ರಮುಖ ವಾರಪತ್ರಿಕೆಗಳು 
ಸ್ವಾತಂತ್ರö್ಯ ಪೂರ್ವದಲ್ಲೇಆರಂಭವಾದಕರ್ಮವೀರ (೧೯೨೧)ಮತ್ತು  ಕಸ್ತೂರಿ (೧೯೨೧) ಇವು ಇಂದು ಸಹ  ಪ್ರಕಟವಾಗುತ್ತಿದೆ ವಿಶಾಲ ಕರ್ನಾಟಕ  (೧೯೪೭), ಪಾಟೀಲ ಪುಟ್ಟಪ್ಪನವರ ಪ್ರಪಂಚ (೧೯೫೪), ಸುಧಾ(೧೯೬೫), ತರಂಗ(೧೯೮೩), ಮಂಗಳ (೧೯೮೩), ಲಂಕೇಶ್ ಪತ್ರಿಕೆ(೧೯೮೦), ಹಾಯ್ ಬೆಂಗಳೂರು (೧೯೯೫) ಇವು ಕನ್ನಡದ  ಪ್ರಮುಖ ವಾರಪತ್ರಿಕೆಗಳು.
ಕರ್ನಾಟಕದ ಪ್ರಮುಖ ಮಾಸ ಪತ್ರಿಕೆಗಳು
ಚಂದಮಾಮ (೧೯೨೮),  ಕಸ್ತೂರಿ ((೧೯೫೬), ಮಯೂರ (೧೯೬೮), ತುಷಾರ (೧೯೮೩), ಮಲ್ಲಿಗೆ (೧೯೬೨), ರೂಪತಾರ (೧೯೭೬), ಗೃಹಶೋಬಾ (೧೯೯೨) ಇವು ಪ್ರಮುಖಕನ್ನಡದ ಮಾಸ ಪತ್ರಿಕೆಗಳು.
ಭಾರತೀಯ ಪತ್ರಿಕೋದ್ಯಮ
ಭಾರತದ ಪತ್ರಿಕೋದ್ಯಮದಇತಿಹಾಸವುರೋಚಕವಾದುದು.ಭಾರತದಲ್ಲಿ ಪತ್ರಿಕೋದ್ಯಮವು ಸ್ವಾತಂತ್ರö್ಯ ಪೂರ್ವದಲ್ಲಿಯೇ ಪ್ರಾರಂಭಗೊAಡಿತ್ತು.ಯೂರೋಪ್ ನಲ್ಲಿ ಜಾನ್ ಹುಟೆನ್ ಬರ್ಗ್ ಅವರು ೧೪೫೬ ರಲ್ಲಿ ಮುದ್ರಣಯಂತ್ರವನ್ನು ಕಂಡುಹಿಡಿದರು.ಭಾರತದಲ್ಲಿ ಮುದ್ರಣಯಂತ್ರವನ್ನು ಮೊದಲು ಬಾರಿಗೆ ಕ್ರಿಶ್ಚಿಯನ್ ಮಿಷನರಿಯವರುಗೋವಾದಲ್ಲಿ ೧೫೫೬ ರಲ್ಲಿ ಸ್ಥಾಪಿಸಿದರು. ಹೀಗೆ ಮುದ್ರಣಯಂತ್ರ ಸ್ಥಾಪನೆಯಾದ ೨೦೦ ವರ್ಷಗಳ ನಂತರ ಭಾರತದಲ್ಲಿ ಮೊದಲು ಪತ್ರಿಕೆ ಪ್ರಾರಂಭವಾಯಿತು.
ಭಾರತದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ನಿಯತಕಾಲಿಗಳ ಮೂಲಕ.ಬ್ರಿಟೀಷ್‌ಈಸ್ಟ್ಇಂಡಿಯಾಕAಪನಿಯ ಮಾಜಿ ನೌಕರ ಹಾಗೂ ನಿರ್ಭಿತ ಹೋರಾಟಗಾರಜೇಮ್ಸ್ಅಗಸ್ಟಸ್ ಹಿಕ್ಕಿ ೧೮೭೦ ರಜನವರಿ ೨೦ ರಂದುಕಲ್ಕತ್ತದಿAದ ಹೊರಡಿಸಿದ ‘ದಿ ಬೆಂಗಾಲ್‌ಗೆಜೆಟ್’ ಭಾರತದಲ್ಲಿ ಪ್ರಕಟವಾದ ಪ್ರಪಥಮ ಪತ್ರಿಕೆ.ನಂತರದ ದಿನಗಳಲ್ಲಿ ‘ಇಂಡಿಯಾಗೆಜೆಟ್’ ಎಂಬ ಎರಡನೆಯ ಪತ್ರಿಕೆಯು ಬರ್ನಾಡ್ ಮೆಸಿಂಕ್ ಪೀಟರ್‌ರಿಂದಆರAಭವಾಯಿತು. ಹೀಗೆ ಆಂಗ್ಲರ ಮೂಲಕ ಪ್ರಾರಂಭವಾದ ಈ ನಿಯತಕಾಲಿಕೆಗಳು  ಮುಂದೆದೇಶದ ಪ್ರಮುಖನಗರಗಳಾದ ಮುಂಬಯಿ, ಮದ್ರಾಸ್ ಮತ್ತುಕಲ್ಕತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ಪತ್ರಿಕೆಗಳ ಉಗಮಕ್ಕೆ ಕಾರಣವಾಯಿತು.ಭಾರತದ ಪ್ರಥಮ ಪತ್ರಿಕೆಗಳು ಸ್ಥಳೀಯ ವಿದ್ಯಮಾನ ಅಥವಾ ಸುದ್ದಿ ಮಾಹಿತಿ ಕೊಡುವ ಸಾಧನವಾಗಿರಲಿಲ್ಲ. ಹೇಳಿಕೆಗಳ ಸುದ್ದಿಯನ್ನೋ, ಗಾಳಿ ವರ್ತಮಾನವನ್ನೋ ಪ್ರಕಟಿಸುತ್ತಿತ್ತು.ಪ್ರಮುಖ ವ್ಯಕ್ತಿಗಳ ಖಾಸಗಿ ಜೀವನದಕುರಿತು  ಲೇಖನಗಳನ್ನು ಪ್ರಕಟಿಸುವುದು ವಾಡಿಕೆಯಾಗಿತ್ತು.
ಸ್ವಾತಂತ್ರö್ಯ ಪೂರ್ವದಲ್ಲಿ ಭಾರತೀಯ ಪತ್ರಿಕೋದ್ಯಮ
ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ  ಪ್ರಮುಖವಾದದ್ದು. ಭಾರತದ ಪ್ರಥಮ ಸ್ವಾತಂತ್ರö್ಯ ಸಂಗ್ರಾಮ ಪ್ರಾರಂಭವಾದಗಲುದೇಶದ ಭಾಷಾ ಪತ್ರಿಕೆಗಳು ಬಹಳಮಟ್ಟಿಗೆ ಕಾರಣವಾದವು.ರಾಜರಾಮ ಮೊಹನರಾಯರಿಂದ ಭಾರತದಲ್ಲಿ ಆನೇಕ ಸ್ವತಂತ್ರö್ಯವಾದದೇಶ ಭಾಷಾ ಪತ್ರಿಕೆಗಳು ಮತ್ತು ಶ್ರೇಷ್ಟ ಮಟ್ಟದ ಭಾರತೀಯಇಂಗ್ಲಿಷ್ ಪತ್ರಿಕೆಗಳು ಪ್ರಾರಂಭಕ್ಕೆ ನಾಂದಿಯಾಯಿತು.
ಭಾರತೀಯ ಪತ್ರಿಕೋದ್ಯಮದಲ್ಲಿರಾಷ್ಟಿçÃಯತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಪತ್ರಿಕೆಗಳು ಹುಟ್ಟಿದ್ದು ೧೯ನೆಯ ಶತಮಾನದಉತ್ತರಾರ್ಧದಲ್ಲಿ. ಬಾಲಗಂಗಧರ್‌ತಿಲಕರ ‘ಕೇಸರಿ’(ಮರಾಠಿ) ಹಾಗೂ ‘ಮಾರಾಠ’ (ಇಂಗ್ಲಿಷ್). ಲಾಲ್‌ದೇಶ ಬಂಧುಗುಪ್ತಾರವರ ‘ತೇಜ’, ಅಬ್ದುಲ್ ಕಲಾಂ ಅಜಾದ್‌ರ ‘ಆಲ್ ಹಿಲಾಲ್’, ಜೆ.ಸುಬ್ರಮಣ್ಯಅಯ್ಯರ್‌ಅವರ ‘ಹಿಂದೂ’ ಹಾಗೂ ಹಿಂದೂಸ್ಥಾನಟೈಮ್ಸ್’ ಮತ್ತು ‘ಟೈಮ್ಸ್ಅಫ್‌ಇಂಡಿಯಾ’ ಮೊದಲಾದ ಪ್ರಮುಖ ಪತ್ರಿಕೆಗಳು.ಗಾಂಧೀಜಿಯವರು ಹರಿಜನ, ನವಜೀವನ, ಯಂಗ್ ಇಂಡಿಯಾ ಮತ್ತುಅಂಬೇಡ್ಕರ್ ಅವರು ಮೂಕನಾಯಕ, ಬಹಿಸ್ಕೃತ ಭಾರತ, ಜನತಾ ಮತ್ತು ಸಮಾತ ಪತ್ರಿಕೆಳನ್ನು ಪ್ರಾರಂಭ ಮಾಡುವುದರ ಮೂಲಕ  ಭಾರತೀಯ ಪತ್ರಿಕೋದ್ಯಮದ ಸಾರಥ್ಯವಹಿಸಿದ ಪ್ರಮುಖ ಗಣ್ಯರು.
ಭಾರತದಲ್ಲಿ ನಿಧಾನವಾಗಿ ಭಾಷಾ ಪತ್ರಿಕೋದ್ಯಮ ಬೆಳೆಯಿತು.ಆದರೆ ಬ್ರಿಟೀಷ್ ಸರ್ಕಾರವು ಪೂರ್ಣವಾಗಿ ಪತ್ರಿಕಾ ಸ್ವಾತಂತ್ರö್ಯ ನೀಡಿರಲಿಲ್ಲ. ತಮ್ಮ ವಿರುದ್ಧ ಸುದ್ದಿ ಪ್ರಕಟಿಸುವ ಪತ್ರಿಕೆಯ ಸಂಪಾದಕರಿಗೆ ಶಿಕ್ಷೆ ನೀಡುತ್ತಿದ್ದರು.ಪತ್ರಿಕೆಗಳು ನೈಜಕಾಲದ ಸುದ್ದಿ ಪ್ರಕಟಿಸಿದರೆ ಕ್ರಮೇಣಇಲ್ಲಿ ಆಡಳಿತ ನಡೆಸುವುದಕ್ಕೆತೊಂದರೆಯಾಗುತ್ತದೆಎAದು ನಂಬಿದ್ದರು.ಆದ್ದರಿAದ ಪ್ರತಿ ಹೆಜ್ಜೆ-ಹೆಜ್ಜೆಗೂ ಪತ್ರಿಕೆಗಳ ಪೂರ್ವ ಪರಿಶೀಲನೆ, ಅನುಮತಿ ಪತ್ರ ಹಿಂಪಡೆಯುವಿಕೆ ಮತ್ತು ಮುಟ್ಟುಗೋಲು ಹಾಕುವ ಕಠೋರ ಶಾಸನಗಳನ್ನು ಜಾರಿಗೆತಂದಿದ್ದರು.
ಸ್ವಾತAತ್ರö್ಯ ನಂತರ ಭಾರತೀಯ ಪತ್ರಿಕೋದ್ಯಮ
ಸ್ವಾತಂತ್ರö್ಯ ಬರುವುದಕ್ಕಿಂತ ಮೊದಲು ಸ್ವಾತಂತ್ರö್ಯಗಳಿಸುವ ದೃಷ್ಟಿಯಿಂದಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಗಳು ಸ್ವಾತಂತ್ರö್ಯ ನಂತರಆರ್ಥಿಕ ಸ್ವಾತಂತ್ರö್ಯವನ್ನು ಸಾಧಿಸುವತ್ತ ಗಮನ ಹರಿಸಿದವು.ಈಗ ಪತ್ರಿಕೋದ್ಯಮವು ಸೇವೆ ಮಾಡುವ ಮನೋವೃತ್ತಿಯ ವ್ಯವಸಾಯವೂ ಹೌದು.ಈ ಪತ್ರಿಕೆಗಳಿಗೆ ದೇಶವನ್ನು ಪ್ರಗತಿ ಪಥದಲ್ಲಿಕೊಂಡೊಯ್ಯುವ ವಿವಿಧ ಹೊಣೆಗಾರಿಕೆಯೂಇದೆ.ಇಂದು ಭಾರತದಲ್ಲಿ ಪತ್ರಿಕಾ ವೃತ್ತಿಯು ಬೃಹತ್‌ಉದ್ಯಮವಾಗಿ ಪರಿಣಮಿಸಿ ಪೈಪೋಟಿ ಪ್ರಾರಂಭವಾಗಿದೆ.
ಸ್ವಾತAತ್ರö್ಯ ನಂತರ ಭಾರತೀಯ ಪತ್ರಿಕಾರಂಗದಲ್ಲಿಅಮೂಲಾಗ್ರವಾದ ಬದಲಾವಣೆಯಾಯಿತು.ವೃತ್ತಿನಿರತ ಸಂಘಟನೆಗಳು ಹುಟ್ಟಿಕೊಂಡವು.ತಾAತ್ರಿಕವಾಗಿ ಮುದ್ರಣಕ್ಷೇತ್ರದಲ್ಲಿಅಪಾರ ಪ್ರಗತಿಯಾಯಿತು.ಪತ್ರಕರ್ತರಿಗೆ ಸೇವಾ ಸೌಲಭ್ಯಗಳು, ನೀತಿಸಂಹಿತೆ, ಪತ್ರಿಕಾ ಕಾನೂನುಗಳಿಗೆ ಸೂಕ್ತ ತಿದ್ದುಪಡಿ, ಪತ್ರಿಕೋದ್ಯಮ ಶಿಕ್ಷಣ ಮುಂತಾದ ವಿಷಯಗಳಿಗೆ ಸಂಬAಧಿಸಿದAತೆ ಶಿಫಾರಸ್ಸು ಮಾಡಲು ೧೯೫೨ ರಲ್ಲಿ ಪ್ರಥಮ ಪತ್ರಿಕಾಆಯೋಗವನ್ನು ಸರ್ಕಾರ ನೇಮಿಸಿತು.ಇಂದು ಭಾರತೀಯ ಪತ್ರಿಕೆಗಳು ತಮ್ಮಗುಣಮಟ್ಟ ಪ್ರಸಾರ, ಮುದ್ರಣ, ವಿನ್ಯಾಸ ಮತ್ತುತಂತ್ರಜ್ಞಾನಎಲ್ಲದರಲ್ಲಿಯೂ ಮುನ್ನಡೆ ಸಾಧಿಸಿದೆ.ಇದರ ಜೊತೆಗೆ ಭಾರತೀಯ ಪತ್ರಿಕೋದ್ಯಮವು ವೃತ್ತಿಉದ್ಯಮವಾಗಿ ಬೆಳೆಯಲಾರಂಭಿಸಿತು.
ಪತ್ರಿಕೋದ್ಯಮ ಶಿಕ್ಷಣದ ಮಹತ್ವ
ವಿಚಾರ ಶಕ್ತಿಯು ಪ್ರತಿಯೊಂದು ಕೆಲಸಗಳನ್ನು ಹಗುರಗೊಳಿಸುತ್ತದೆ.ಇಂತಹ ವಿಚಾರ ಶಕ್ತಿಯು ಪತ್ರಿಕೋದ್ಯಮ ವಿಷಯ ಅಧ್ಯಯನ ಮಾಡುವುದರಿಂದ ಬರುತ್ತದೆ ಅಂತ ಹೇಳಿದರೆ ತಪ್ಪಲ್ಲ ಅಂತ ಅನಿಸುತ್ತದೆ.ಭಾರತದ ಪ್ರಥಮ ರಾಷ್ಟçಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಪತ್ರಿಕೋದ್ಯಮ ಎಂಬ ಪದ ಕೇಳಿದಾಗ ನಮಗೆ ನೆನಪಾಗುವುದು ಸುದ್ದಿ ಪತ್ರಿಕೆ, ನ್ಸೂಸ್ ಚಾನಲ್,  ಪತ್ರಕರ್ತರು ಮತ್ತು  ವರದಿಗಾರರು.  ಆದರೆ ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿ ಬರೆಯುವ ಕಲೆ ಮಾತ್ರವಲ್ಲ. ಅದು ಒಂದು ಸಮಾಜಿಕ ಜವಾಬ್ದಾರಿಯುತ ಕ್ಷೇತ್ರ.
ಮಾಧ್ಯಮವು  ಜನಸಾಮನ್ಯರ ಧ್ವನಿಯಾಗಿ, ಸಮಾಜದಲ್ಲಿ ನೈತಿಕತೆ ಮತ್ತು ನಿಷ್ಟೆಯ ಬೆಳಕನ್ನು ಹಬ್ಬುವ ಕಾರ್ಯ ಮಾರ್ಗವಾಗಿದೆ. ಇತ್ತಿಚಿನ ದಿನಗಳಲ್ಲಿ ಪತ್ರಿಕೋದ್ಯಮ ಶಿಕ್ಷಣವು ಯುವಜನತೆಯ ಪ್ರೀತಿಯ ಮತ್ತು ಇಷ್ಟವಾದ ವಿಷಯವಾಗಿದೆ.ಪತ್ರಿಕೋದ್ಯಮವು ಯುವಜನತೆಯ ಕ್ರೀಯಶೀಲತೆಯನ್ನು ಉತ್ತೇಜಿಸುವದರ ಜೊತೆಗೆ ಅವರಲ್ಲಿ ಸಾಮಾಜಿಕ ಜವಬ್ದಾರಿಯ ಭಾವನೆ ಮೂಡಿಸುವಂತೆ ಮಾಡುತ್ತದೆ.
ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಜ್ಞಾನಯುಗದಲ್ಲಿ ಮಾಧ್ಯಮಗಳ ಪಾತ್ರ ಅತೀ ಮಹತ್ವಪೂರ್ಣವಾಗಿದೆ.ಮಾಧ್ಯಮಗಳು ಯಾವುದಾದರೂ ಒಂದು ವಿಷಯದ ಕುರಿತು ಸಮಾಜದಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬದಲಾವಣೆಗಳು ಹಾಗೂ ಸತ್ಯಾಂಶಗಳನ್ನು ಜನರ ಮುಂದಿಡುವಲ್ಲಿ ಮಾಧ್ಯಮ ಕ್ಷೇತ್ರ ಅಗ್ರಗಣ್ಯವಾಗಿದೆ.
ಪತ್ರಕರ್ತರ ವೃತ್ತಿಯು ಕೇವಲ ಉದ್ಯೋಗವಲ್ಲದೆ ಸಮಾಜ ಸೇವೆಯ ಭಾಗವಾಗಿದೆ.ಪತ್ರಿಕೋದ್ಯಮದಿಂದ ವ್ಯಕ್ತಿಗತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಅರಿವು, ರಾಜಕೀಯ ಜ್ಞಾನ, ಭಾಷಾ ನೈಪುಣ್ಯತೆ ಮತ್ತು ನಿರ್ಧಾರಾತ್ಮಕ ಚಿಂತನೆಗಳಿಗೂ ಉತ್ತೇಜನ ಸಿಗುತ್ತದೆ.ಸಮಾಜದ ಸುತ್ತಾ ಮುತ್ತಾ ಏನಾಗುತ್ತಿದೆ ಎಂಬುದನ್ನು ಸಮಗ್ರವಾಗಿ ತಿಳಿದುಕೊಂಡು ಅದನ್ನು ಜನತೆಗೆ ತಿಳಿಸುವ ಜವಾಬ್ದಾರಿಯನ್ನು ಮಾಧ್ಯಮಗಳಿಗಿದೆ.ಆದ್ದರಿಂದ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇಯ ಸ್ತಂಭವಾಗುವುದರ ಜೊತೆಗೆ ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿದೆ.
ಪತ್ರಿಕೋದ್ಯಮದ ಉದ್ಯೋಗ ಅವಕಾಶಗಳು
ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣದ ಕೋರ್ಸ್ ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ವ್ಯಾಪಕ ಉದ್ಯೋಗಾವಕಾಶಗಳು ಲಭ್ಯವಿವೆ. ದಿನಪತ್ರಿಕೆಗಳು, ಟಿವಿ ಚಾನಲ್‌ಗಳು, ಆನ್ ಲೈನ್ ಮಾಧ್ಯಮಗಳು, ರೇಡಿಯೋ ಕೇಂದ್ರ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ   ರಿಪೋರ್ಟರ್, ಸಬ್ ಎಡಿಟರ್, ಟಿವಿಗಳಲ್ಲಿ ಕಾಪಿ ಎಡಿಟರ್, ನ್ಯೂಸ್ ರೀಡರ್, ಕಂಟೆAಟ್ ಬರಹಗಾರರ, ಟಿವಿ ಆಂಕರ್, ವರದಿಗಾರರು ಇತ್ಯಾದಿ ವಿವಿದ ಹುದ್ದೆಗಳಿವೆ. ಹಾಗೇಯೇ ಸಿನಿಮಾ ಮತ್ತು ಜಾಹಿರಾತು ಸಂಸ್ಥೆಗಳಲ್ಲಿ ಉದ್ಯೋಗಳು  ಸಿಗುತ್ತವೆ.
ಕಂಪನಿಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗಳಿರುತ್ತವೆ. ಇದಲ್ಲದೇ ರಾಜಕೀಯ ನಾಯಕರ, ಆಟಗಾರರ ಮತ್ತು ಉದ್ಯಮಿಪತಿಗಳ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಮಾಡುವ ಹುದ್ದೆಗಳಿರುತ್ತವೆ. ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲೂ ಕಾರ್ಯನಿರ್ವಹಿಸಬಹುದಾಗಿದೆ.ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಪತ್ರಿಕೋದ್ಯಮ ವಿಷಯದ ಉಪನ್ಯಾಸಕರು ಆಗಬಹುದು.ಪತ್ರಿಕೋದ್ಯಮ ಪದವಿಯ ಶಿಕ್ಷಣ ಅಧ್ಯಯನ ಮಾಡುವುದರಿಂದ ಬಹಳಷ್ಟು ಉಪಯೋಗಗಳು ಇವೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಸಮಾಜವು ಇದರಿಂದ ಲಾಭ ಪಡೆಯುತ್ತದೆ.
ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ ಪದವಿ ಪಡೆದವರು ತಮ್ಮದೇ ಯೂಟ್ಯೂಬ್ ಚಾನಲ್, ಪಾಡ್ ಕಾಸ್ಟ್, ವೆಬ್‌ಕಾಸ್ಟ್ ಆರಂಬಿಸಿ ಸ್ವತಂತ್ರö್ಯ ಮಾಧ್ಯಮವು ಪ್ರಾರಂಭ ಮಾಡಬಹುದು.ಪತ್ರಿಕೋದ್ಯಮವು ಬರವಣಿಗೆಯ ಕೌಶಲ್ಯ ಸಂವಹನ ನೈಪುಣ್ಯತೆ ವಿಶ್ಲೇಷಣಾತ್ಮಕ ಚಿಂತನ ಸಮಾಲೋಚನೆಯ ದೃಷ್ಠಿಕೋನ ಹಾಗೂ ಸಾಮಾಜಿಕ ಜವಬ್ದಾರಿಯನ್ನು ರೂಪಿಸುವಲ್ಲಿಯೂ ಸಹಾಯಕವಾಗುತ್ತದೆ.
ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚಿದಂತೆ ಡಿಜಿಟಲ್ ಪತ್ರಿಕೋದ್ಯಮದ ಅಗತ್ಯವೂ ಏರಿದೆ.ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರು ಇದರ ಜೊತೆಗೆ ತಂತ್ರಜ್ಞಾನ ತಿಳಿದವರು ತಮ್ಮದೇ ಡಿಜಿಟಲ್ ಮಾಧ್ಯಮ ಚಾನಲ್, ಯುಟ್ಯೂಬ್ ಆರಂಭಿಸಬಹುದು.ಪತ್ರಿಕೋದ್ಯಮ ಕ್ಷೇತ್ರವು ಯುವಜನತೆಯ ಕ್ರೀಯಾಶೀಲತೆಯನ್ನು ಉತ್ತೇಜಿಸುತ್ತ ಅವರಲ್ಲಿ ಸಾಮಜಿಕ ಜವಾಬ್ದಾರಿಯ ಭಾವನೆ ಮೂಡಿವಂತೆ ಮಾಡುತ್ತದೆ.ಪತ್ರಕರ್ತರ ವೃತ್ತಿಯು ಕೇವಲ ಉದ್ಯೊಗವಲ್ಲದೆ ಅದೊಂದು ಸಮಾಜ ಸೇವೆಯ ಭಾಗವಾಗಿದೆ.
ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ
ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರತುಂಬ ಮಹತ್ವದ್ದು.ಪ್ರಜಾಪ್ರಭುತ್ವದರಕ್ಷಣೆಯಲ್ಲಿ ಪತ್ರಿಕೆಗಳು ಕಾವಲು ನಾಯಿಯಿದ್ದಂತೆ.ಅAತೆಯೇ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪತ್ರಿಕೆಗಳು ಸಾಮಾಜಿಕ ಮತ್ತುಆರ್ಥಿಕಅಭಿವೃದ್ಧಿಗೆ ಪ್ರೇರಕ ಶಕ್ತಿ ಇದ್ದಂತೆ.ಮುಖ್ಯವಾಗಿ ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ಪ್ರಜೆಗಳ ಧ್ವನಿ ಆಗಿ ಕೆಲಸ ಮಾಡಬೇಕು.ಪ್ರಜಾಪ್ರಭುತ್ವದಲ್ಲಿಜನತೆಗೆ ಸಾಮಾಜಿಕ, ಆರ್ಥಿಕ ಮತ್ತುರಾಜಕೀಯ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು, ಆರೊಗ್ಯಕರ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿ ರಕ್ಷಿಸುವುದು ಪತ್ರಿಕೆಗಳ ಕರ್ತವ್ಯವೆಂದು ಪ್ರಥಮ ಭಾರತೀಯ ಪತ್ರಿಕಾಆಯೋಗದ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ವೈಖರಿ, ಹೊಣೆಗಾರಿಕೆ ಮತ್ತು ಕರ್ತವ್ಯಗಳ ನಿರ್ವಹಣೆಗಳ ಮೇಲೆ ನಿಗಾ ವಹಿಸುವುದುಮಾಧ್ಯಮಗಳ ಆಧ್ಯಕರ್ತವ್ಯ.
ರಾಷ್ಟಿçÃಯ ಅಶೋತ್ತರಗಳು, ಸಾಮಾಜಿಕ, ಆರ್ಥಿಕ, ನ್ಯಾಯ, ಜಾತ್ಯಾತೀತ ನೀತಿ, ರಾಷ್ಟçಸಮಗ್ರತೆ ಮತ್ತು ಸಂಹಿಷ್ಣತೆ ಇವೇ ಮೊದಲಾದ ವಿಚಾರಗಳಲ್ಲಿ ಜನತೆಗೆ ಮಾರ್ಗದರ್ಶಿಯಾಗಿ ಜನಾಭಿಪ್ರಾಯರೂಪಿಸುವುದು ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪರಮೊಚ್ಚಧ್ಯೇಯವಾಖ್ಯಾವಾಗಿದೆ. ಹಾಗೆಯೇ ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ದೀನದಲಿತರ, ಬಡಬಗ್ಗರು ಹಾಗೂ ತುಳಿತಕ್ಕೊಳಗಾದವರ ಮತ್ತುಧ್ವನಿ ಇರಲಾಗದ ನಿರ್ಭಾಗ್ಯರದನಿಯಾಗಬೇಕಾಗಿದೆ. ರಾಷ್ಟಿçÃಯ ಮುಖ್ಯ ವಿಷಯಗಳಲ್ಲಿ ಜನಾಭಿಪ್ರಾಯರೂಪಿಸುವುದು ಪ್ರಜಾಪ್ರಭುತ್ವದಲ್ಲಿ ಪತ್ರಿಕಗಳ ಕರ್ತವ್ಯ.ಜನರ ಬೇಕು-ಬೇಡ, ಆಸೆ-ಆಕಾಂಕ್ಷೆ, ಜನರ ಭಾವನೆಗಳು ಮತ್ತುಜನರ ಇಂಗಿತಗಳು ಇವೇ ಮೊದಲಾದಗಳನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ತಿಳಿಸುವುದು ಪತ್ರಿಕೆಗಳ ಕರ್ತವ್ಯವಾಗಿದೆ.
ಒಂದು ಪ್ರಜಾ ಪ್ರಭುತ್ವದ ಯಶಸ್ವಿ ಆಥಾವ ವಿನಾಶಕ್ಕೆ ಪತ್ರಿಕೆಗಳು ಕಾರಣವಾಗಬಲ್ಲವು.ಆದ್ದರಿಂದ ಈ ಪತ್ರಿಕಾ ಲೋಕವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆAದುಕರೆಯುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಜನಾಂದೋಲನವನ್ನುರೂಪಿಸುವಲ್ಲಿ ಪತ್ರಿಕೆಗಳು ನಿರ್ಣಯಕ ಪಾತ್ರವಹಿಸಿವೆ. ಹೀಗೆ ಪತ್ರಿಕೆಗಳು ಸಾರ್ವಜನಿಕ ಸಂಪರ್ಕವನ್ನು ಹೆಚ್ಚಾಗಿ ಹೊಂದಿ ಅವರ ಭಾವನೆಗಳ ಮೇಲೆ ಪ್ರಭಾವವನ್ನು ಬೀರುತ್ತವೆ. ಮೌಲ್ಯಗಳನ್ನು ಪುನರುತ್ಥಾನಗೊಳಿಸುವ, ಸದಾಭಿರುಚಿಯನ್ನು ಮೂಡಿಸುವ, ಆರೋಗ್ಯವಂತ ಸಮಾಜವನ್ನು ನಿರ್ಮಿಸುವಜವಾಬ್ದಾರಿ ಮಾಧ್ಯಮಗಳಿಗಿದೆ.ಇದೆ.ಈ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಿದರೆ ದೇಶವುಅಭಿವೃದ್ಧಿ ಹೊಂದುವುದರಲ್ಲಿಎರಡು ಮಾತಿಲ್ಲ.
ನಿಜವಾದ ಪತ್ರಕರ್ತರು ಹೇಗಿರಬೇಕು ?
ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತೆಯನ್ನು ಅನುಸರಿಸಬೆಕು.ಪತ್ರಕರ್ತರು ತಮ್ಮ ಸುತ್ತ ಮುತ್ತಲಿನ ಸಮಾಜವನ್ನು ಪ್ರೀತಿಸಬೇಕು.ಬಡವರ, ರೈತರ, ದಲಿತರ ಮತ್ತು ಮಹಿಳೆಯರ ಬಗ್ಗೆ ಅಪಾರವಾದ ಗೌರವನ್ನು ಹೊಂದಿರಬೇಕು.ಇನ್ನೊಬ್ಬರ ಹಸಿವೇ ನನ್ನ ಹಸಿವೇ ಅಂತ ಭಾವಿಸಬೇಕು.ಮಾಧ್ಯಮಗಳು ಸಮಾಜದಲ್ಲಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಕಾರಣಗಳನ್ನು ಹುಡುಕಿ ಆ ಸಮಸ್ಯೆಗಳು ಸಮಾಜದಲ್ಲಿ ಯಾವ ರೀತಿ ಪರಿಣಾಮ ಭೀರುತ್ತವೆ ಅಂತ ತಿಳಿಸಬೇಕು.ಆ ಸಮಸ್ಯೆಗಳಿಗೆ ಪರಿಹಾರಗಳನ್ನು ಮತ್ತು ಸಲಹೆಗಳನ್ನು ಸೂಚಿಸಿಬೇಕು.ಪತ್ರಕರ್ತರು ಜಾತಿ ಭೇಧ ಭಾವ, ಧರ್ಮ ಬೇಧ ಭಾವ ಮಾಡಬಾರದು.ಪತ್ರಕರ್ತರು ಪ್ರಾಮಾಣಿಕರಾಗಿರಬೇಕು.ವಸ್ತುನಿಷ್ಠವಾಗಿ ಸತ್ಯ ಮತ್ತು ವಾಸ್ತವ ವರದಿಗಳನ್ನು ಬರೆಯಬೇಕು.ಕಾಲ್ಪನಿಕವಾಗಿ ಬರೆಯಬಾರದು.ಸುದ್ದಿ ಯತವತ್ ಆಗಿರಬೇಕು.ಅದಕ್ಕೆ ಉಪ್ಪು ಖಾರ ಹಚ್ಚಿ ಟಿವಿ ಗಳಲ್ಲಿ ಪ್ರಸಾರ ಮಾಡಬಾರದು.ಇಂದು ಸಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದಿಗಳು ಹೆಚ್ಚು ಪ್ರಕಟವಾಗುತ್ತವೆ. ಅವುಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಅಂತ ಪತ್ತೆ ಹಚ್ಚಿ ಪ್ರಸಾರ ಮಾಡಬೇಕು.ಈ ಎಲ್ಲ ಗುಣಲಕ್ಷಣಗಳು ಮಾಧ್ಯಮಗಳು ಹೊಂದಿದರೆ  ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು.
-ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ
ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
ಮೋಬೈಲ್. ೯೯೦೨೯೨೭೯೪೫

Get real time updates directly on you device, subscribe now.

Leave A Reply

Your email address will not be published.

error: Content is protected !!