ಜೀವನತ್ಸಾಹಕ್ಕೆ ಚುಟುಕು ಸಾಹಿತ್ಯ ಪ್ರೇರಣೆ : ಡಾ. ಎಂ. ಜಿ.ಆರ್. ಅರಸು
ಕೊಪ್ಪಳ : ಮಾನಸಿಕ ನೆಮ್ಮದಿ ಹಾಗೂ ವಿಕಾಸಕ್ಕೆ ಚುಟುಕು ಸಾಹಿತ್ಯ ಪ್ರೇರಣೆ ನೀಡುತ್ತದೆ ಸಾಹಿತ್ಯ ಆಸಕ್ತರಿಗೆ ಸೂಕ್ತ ವೇದಿಕೆ ದೊರೆತಾಗ ಪ್ರತಿಯೊಬ್ಬರೂ ಕವಿಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕ ಡಾ. ಎಂಬ. ಜೀ. ಅರ್ ಅರಸು ಹೇಳಿದರು. ಅವರು ಭಾನುವಾರ ಭಾಗ್ಯನಗರದ ನಿಮಿಷಷಾ oಬಾ ದೇವಿ ಸಭಾ ಭವನದಲ್ಲಿ ಸಾಹಿತಿ, ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಅವರ ಸವಾ೯ಧ್ಯಕ್ಷ್ಯತೆಯಲ್ಲಿ ಕೊಪ್ಪಳ ತಾಲೂಕು 2 ನೆಯ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.



ಬೀದಿಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುವವರು ಹಾಗೂ ಸುಖದ ಸುಪ್ಪತ್ತು ಸಂಪತ್ತೀಗಾಗಿ ಕೆಲಸ ಮಾಡುವವರಲ್ಲಿಯೂ ಸಹ ಸಾಹಿತ್ಯ ಅಭಿರುಚಿ ಇದ್ದೆ ಇರುತ್ತದೆ ಆ ಎಲ್ಲರ ಅಭಿವ್ಯಕ್ತಿ ಚುಟುಕು ಬರಹಗಳ ಮೂಲಕ ಹೊರ ಬಂದಾಗ ದೇಶ ಮತ್ತು ರಾಜ್ಯಗಳಲ್ಲಿ ಕ್ರಾಂತಿ ಸಾಧ್ಯ ವಾಗುತ್ತದೆ, ಅಷ್ಟೊಂದು ಪರಿಣಾಮಕಾರಿ ಶಕ್ತಿ ಚುಟುಕು ಸಾಹಿತ್ಯದಲ್ಲಿ ಇದೆ ಎಂದು ಹೇಳಿದರು.
ಶ್ರೀನಿವಾಸ ಚಿತ್ರಗಾರ ಅವರ ಎಳೆಯರಿಗಾಗಿ ಒತ್ತಕ್ಷರ ಇಲ್ಲದ ಕಥೆಗಳು ಕೃತಿ, ಈರಪ್ಪ ಬಿಜಲಿ ಅವರ ನಿಖಿಲ್ ನ ಬಣ್ಣದ ಕೊಡೆ ಕೃತಿ ಹಾಗೂ ಎ.ಪಿ ಅಂಗಡಿ ಅವರ 156ನೇ ಕಲಾ ಕ್ರತಿ ಬಿಡುಗಡೆ ಗೊಳಿಸಿದ ಎಂಎಲ್ಸಿ ಹೇಮಲತಾ ನಾಯಕ ಅವರು ಮಾತನಾಡಿ, ತಿರುಳಗನ್ನಡ ನಾಡು ಸಾಹಿತ್ಯ ಸಂಗೀತಕ್ಕೆ ಕೊರತೆಯಿಲ್ಲ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ಹೊಂದಿದ್ದಾರೆ, ಅವರಿಗೆಲ್ಲ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ, ಸಮಾಜ ಸೇವೆ ಹೆಸರಿನಲ್ಲಿ ನಿತ್ಯ 24 ತಾಸು ರಾಜಕಾರಣ ಮಾಡುವ ಪದ್ಧತಿ ಕೈಬಿಟ್ಟಾಗ ಸೇವೆಗೆ ಮಹತ್ವ ಸಿಗುತ್ತದೆ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು ಅಸಮತೋಲ ಎದುರಿಸುತ್ತಿದೆ, ಶಿಕ್ಷಣ, ವಿಶ್ವ ವಿದ್ಯಾಲಯ ಹಾಗೂ ಮಹಿಳಾ ಸಬಲೀಕರಣ ಪ್ರಗತಿ ಯಶಸ್ವಿಯಾಗುತ್ತಿಲ್ಲ, ತುಂಗ ಭದ್ರ ಡ್ಯಾಮ್ ಕ್ರೇಸ್ಟ್ ಗೆಟ್ಗೆ 50 ಕೋ. ರೂಪಾಯಿಗಳನ್ನು ಸರಕಾರ ಬಳಕೆ ಮಾಡಿದೆ, ದುರಂತ ವೆಂದರೆ ಮಳೆಯಾಗುತ್ತಿಲ್ಲ, ರೈತರಿಗೆ ಗೊಬ್ಬರ ಕ್ರಿಮಿನಾಶಕ ಗೊಬ್ಬರ ಸಲುವಾಗಿ ಪರದಾಟ ಎದ್ದಿದೆ ಕೊಪ್ಪಳದಲ್ಲಿ ಕಳಪೆ ಗೊಬ್ಬರ ಮಾರಾಟ ಹಾವಳಿ ಎದ್ದಿದೆ ಸಾಹಿತಿಗಳೂ ಲೇಖನಿ ಜೊತೆಗೆ ಜನಪರ ಕೆಲಸ ಮಾಡಲು ಸಿದ್ದರಾಗಿರಿ ಎಂದು ತಿಳಿಸಿದರು. ಪರಿಷತ್ ತಾಲೂಕು ಅಧ್ಯಕ್ಷ ಮೈಲಾರಪ್ಪ ಉಂಕಿ ಅಧ್ಯಕ್ಷತೆ ವಹಿಸಿದ್ದರು.ನಂತರ ಗೋಷ್ಠಿ ೧ರಲ್ಲಿ ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಶಿ. ಕಾ.ಬಡಿಗೇರ ಅವರು ಉಪನ್ಯಾಸ ನೀಡಿದರು. ಸಾಹಿತಿಗಳಾದ ವೀರಣ್ಣ ಹುರಕಡ್ಲಿ, ಎಪಿ ಅಂಗಡಿ, ಕೋಮಲಾ ಕುದರಿಮೋತಿ ,ಡಾ.ಫಕೀರಪ್ಪ ವಜ್ರಬಂಡಿ, ಎಸ್. ಎಂ. ಕಂಬಾಳಿಮಠ, ವಿದ್ಯಾವತಿ ಚಿತ್ರಗಾರ, ಮುಖoಡರಾದ ಮುದಕಪ್ಪ ಹೊಸಮನಿ, ಬಸವರಾಜ್ ಕೊಡ್ಲಿ, ಸರೋಜಾ ಬಾಕಳೆ ಇದ್ದರು. ಗೋಷ್ಠಿ ೨ ರಲ್ಲಿ ಕೊಪ್ಪಳ ತಾಲ್ಲೂಕು ಅಭಿವೃದ್ದಿ ಒಂದು ಅವಲೋಕನ ಕುರಿತು ಹೋರಾಟಗಾರ ಗಾಳೆಪ್ಪ ಕಡೆಮನಿ ವಿಷಯ ಮಂಡಿಸಿದರು. ಹಿರಿಯ ಚಿಂತಕ ವೀರಣ್ಣ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಮಂಜುನಾಥ್ ಸೊರಟೂರ ಉಪಸ್ಥಿತರಿದ್ದರು. ನಂತರ ನಡೆದ ಚುಟುಕು ಕವಿಗೋಷ್ಠಿಯನ್ನು ಹಿರಿಯ ಕವಿ ವಿ.ಬೀ.ಪಟ್ಟಣಶೆಟ್ಟಿ ಉದ್ಘಾಟಿಸಿದರು.ಕವಿ ಯಲ್ಲಪ್ಪ ಮಲ್ಲಪ್ಪ ಹರನಾಳಗಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸಪ್ಪ ಬಿಳಿಯಲಿ ಅವರು ಆಶಯ ನುಡಿ ಹೇಳಿದರು. ಸಾಹಿತಿಗಳಾದ ಅರುಣಾ ನರೇಂದ್ರ ಪಾಟೀಲ್, ಶಾಂತ ಕನಕಗಿರಿ ಮಠ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಕವಿಗಳು ಚುಟುಕು ವಾಚಿಸಿದರು. ನಂತರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತಿ,ಚಿಂತಕ ಗಿರಿಜಾ ಶಂಕರ್ ಪಾಟೀಲ್ ಅವರು ಸಮಾರೋಪ ನುಡಿ ಹೇಳಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರಮುಖರಾದ ಜಿ.ಎಸ್.ಗೋನಾಳ, ಪರಶುರಾಮಪ್ಪ ಚಿತ್ರಗಾರ, ವಿಶ್ವನಾಥ ಚಿತ್ರಗಾರ, ನಾಗರಾಜ್ ದಂಡೋತಿ,ಅಮೀನ ಸಾಬ್ ಮುಲ್ಲಾ, ಅನ್ನಪೂಣಮ್ಮ ಮನ್ನಾಪುರ,ನಾಗರಾಜ್ ಕುರಗೋಡ್ ಸೇರಿದಂತೆ ಚುಟುಕು ಸಾಹಿತ್ಯ ಪರಿಷತ್ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ವೇದಿಕೆ ಯಲ್ಲಿದ್ದರು. ನಂತರ ಇಡೀ ದಿನ ನಡೆಯುವ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಸಾಯಿಬಾಬಾ ದೇವಸ್ಥಾನದಿಂದ ನಿಮಿಷಾಂಬ ದೇವಸ್ಥಾನ ವರೆಗೆ ಸಮ್ಮೇಳ ನಾಧ್ಯಕ್ಷರ ಮೆರವಣಿಗೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ ನೇಲಾಗಣಿ ಹಾಗೂ ಶಿವ ಪ್ರಸಾದ್ ಹಾದಿಮನಿ ಅವರು ನಿರೂಪಿಸಿದರು.