ಕೋವಿಡ್ ಸಮಯದಲ್ಲಿ ಸಾವಿರಾರು ಜನರ ಹಸಿವು ನೀಗಿಸಿದ ಸಾದಿಕ್ ಖಾನ್ ಸೇವೆ ಮಾದರಿ: ಸಾಯಿ ಕಿರಣ್ ಆದೋನಿ ಗುರೂಜಿ

ರಾಯಚೂರು,ಜೂ.29- ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರೊಂದಿಗೆ ಇದ್ದ ಸಂಬಂಧಿಕರಿಗೆ ಡಾ. ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್, ರಾಯಚೂರು ಹಾಗೂ ಪ್ರಕೃತಿ ಹೋಂಸ್ ಡೆವಲಪರ್ಸ್ ವತಿಯಿಂದ ಸುಮಾರು ಸಾವಿರಕ್ಕೂ ಹೆಚ್ಚು ಜನರಿಗೆ ಮೃಷ್ಟಾನ್ನ ಭೋಜನ ಏರ್ಪಡಿಸಲಾಯಿತು.
ಚಿತ್ರಾನ್ನ, ಕರಿಬೇವು ರೈಸ್, ಬಿಳಿ ಅನ್ನ, ಸಾಂಬಾರ್, ಬಜ್ಜಿ, ಅಪ್ಪಳ ಹಾಗೂ ಬಾಳೆಹಣ್ಣು ಒಳಗೊಂಡ ಮದುವೆ ಸಮಾರಂಭಗಳ ಮಾದರಿಯ ಸಾಂಪ್ರದಾಯಿಕ ಭೋಜನವನ್ನು ಅತ್ಯಂತ ಅಚ್ಚುಕಟ್ಟಾಗಿ ಸಿದ್ಧಪಡಿಸಿ ರೋಗಿಗಳು ಹಾಗೂ ಅವರೊಂದಿಗೆ ಇದ್ದ ಸಂಬಂಧಿಕರಿಗೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಸಾಯಿ ಕಿರಣ್ ಆದೋನಿ ಗುರೂಜಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಅಸ್ಲಾಂ ಪಾಶಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿ ಕಿರಣ್ ಆದೋನಿ ಗುರೂಜಿ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ನಿರ್ಗತಿಕರು, ಬಡವರು ಹಾಗೂ ಅಗತ್ಯವಿದ್ದವರಿಗೆ ನಿರಂತರವಾಗಿ ಆಹಾರ ವಿತರಣೆ ಮಾಡುವ ಮೂಲಕ ಸಾದಿಕ್ ಖಾನ್ ಅವರು ಮಾನವೀಯ ಸೇವೆಯ ಅಪರೂಪದ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಸಾಮಾನ್ಯವಾಗಿ ಸಿನಿಮಾ ನಟರ ಮೇಲಿನ ಅಭಿಮಾನವು ಅವರ ಚಿತ್ರಗಳನ್ನು ನೋಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಡಾ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಕೇವಲ ಅಭಿಮಾನವಲ್ಲ, ಅದು ನಿಸ್ವಾರ್ಥ ಸೇವೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಮದುವೆ ಸಮಾರಂಭಗಳಲ್ಲಿ ಬಡಿಸುವ ರೀತಿಯ ಮೃಷ್ಟಾನ್ನ ಭೋಜನವನ್ನು ಪ್ರೀತಿಯಿಂದ ಬಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಸೇವೆಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುವುದರ ಜೊತೆಗೆ ಯುವಜನತೆಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಭಗವಂತನಲ್ಲಿ ಲೀನರಾಗಿರುವ ಡಾ. ಪುನೀತ್ ರಾಜಕುಮಾರ್ ಅವರ ಆಶೀರ್ವಾದ ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಇರುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದ ಅವರು, ರಾಜ್ಯದಾದ್ಯಂತ ಅಭಿಮಾನಿಗಳು ಸಾದಿಕ್ ಖಾನ್ ಅವರಂತಹ ಸಮಾಜಸೇವಕರಿಂದ ಪ್ರೇರಣೆ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಪುನೀತ್ ರಾಜಕುಮಾರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಾದಿಕ್ ಖಾನ್ ನೇತೃತ್ವದಲ್ಲಿ ಕಳೆದ ಆರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ತಿಂಗಳು ರಿಮ್ಸ್ ಆಸ್ಪತ್ರೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಕೃತಿ ಹೋಂಸ್ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ರೆಡ್ಡಿ, ಮಹಮ್ಮದ್ ರಿಯಾಜ್, ನದೀನ್ ಯರಗೇರ, ಮುಬೀನ್, ಫೇರೋಜ್ ಅಹ್ಮದ್, ಫಾರೂಕ್ ಹುಸೇನ್, ಉಸ್ಮಾನ್, ಅಜ್ಜು, ಹೊಸೂರು ಬಸವರಾಜ್, ಹೊಸೂರು ನಾಸೀರ್, ವಿಕಾಸ್, ಸಾಗರ್, ಮೌಲಾ, ರೆಡಮ್ಮ, ಮೈಬೂಬ್, ರೆಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Sadiq Khan’s Service During COVID Became a Model of Humanity: Sai Kiran Adoni Guruji
Raichur, June 29: More than 1,000 patients and their attendants at RIMS Hospital were served a special festive meal by the Dr. Puneeth Rajkumar (Appu) Charitable Trust, Raichur, in association with Prakruthi Homes Developers.
The traditional meal included Chitranna, Curry Leaf Rice, White Rice, Sambar, Bajji, Papad and Bananas, prepared and served in a wedding-style manner, bringing comfort and joy to patients and their family members undergoing treatment at the hospital.
The programme was inaugurated by Sri Sai Kiran Adoni Guruji and former Zilla Panchayat Member K. Aslam Pasha.
Speaking on the occasion, Sri Sai Kiran Adoni Guruji lauded the humanitarian efforts of Trust Founder President Sadiq Khan, stating that his selfless service during the COVID-19 lockdown period, when thousands of underprivileged and needy people were provided with food, stands as an inspiring example of compassion and social commitment.
“Generally, admiration for film personalities is confined to watching their movies. However, carrying forward the legacy of Dr. Puneeth Rajkumar through sustained social service activities is not merely fandom; it is a true symbol of selfless service,” he said.
Guruji further observed that serving a wedding-style festive meal with love and dignity to patients and their attendants at RIMS Hospital was a remarkable initiative that strengthens humanitarian values and inspires society to engage in meaningful service.
Expressing his belief that the blessings of the late Dr. Puneeth Rajkumar continue to inspire such noble endeavours, he called upon fans across the state to draw inspiration from social workers like Sadiq Khan and actively participate in community service.
Under the leadership of Sadiq Khan, the Dr. Puneeth Rajkumar Charitable Trust has been carrying out various social welfare initiatives for the past six years and continues to organise monthly food distribution programmes at RIMS Hospital.
Prakruthi Homes Developers Managing Director Rajasekhar Reddy, Mohammed Riyaz, Nadeem Yaragera, Mubeen, Feroz Ahmed, Farooq Hussain, Usman, Ajju, Hosur Basavaraj, Hosur Naseer, Vikas, Sagar, Moula, Redamma, Maiboob, Rehan and several others were present on the occasion.