ಆತ್ಮ ಯೋಜನೆಯ ಕೊಪ್ಪಳ ತಾಲೂಕಾ ಮಟ್ಟದ ರೈತ ಸಲಹಾ ಸಮಿತಿ ಸಭೆ
2026-27ನೇ ಸಾಲಿನ ಆತ್ಮ ಯೋಜನೆಯಡಿ ಕೊಪ್ಪಳ ತಾಲೂಕ ಮಟ್ಟದ ರೈತ ಸಲಹಾ ಸಮಿತಿ ಸಭೆಯು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇತ್ತೀಚೆಗೆ (ಜೂ. 25ರಂದು) ಜರುಗಿತು.ತಾಲೂಕಾ ತಾಂತ್ರಿಕ ವ್ಯವಸ್ಥಾಪಕರಾದ ಯಮನೂರಪ್ಪ ಅವರು ಸಭೆಯಲ್ಲಿ ಭಾಗವಹಿಸಿದ ಸರ್ವರಿಗೂ ಸ್ವಾಗತಿಸಿದರು. ಆತ್ಮ ಯೋಜನೆಯ ಬಗ್ಗೆ ಕಾರ್ಯಕ್ರಮ ತರಬೇತಿ ಬಗ್ಗೆ ಪ್ರಾಸ್ತಾವಿಕವಾಗಿ ಡಿ.ಪಿ.ಡಿ ಕೊಪ್ಪಳ ಶಿವಪ್ಪ ನಾಯಕ ಅವರು ಮಾತನಾಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರವೀಂದ್ರ ಅವರು ಇಲಾಖೆಯ ಪ್ರಯೋಜನೆಗಳನ್ನು ತಿಳಿಸಿದರು.
ರೇಷ್ಮ ಇಲಾಖೆಯ ಪ್ರಸಾದ ಎತ್ತಿನಮಠ ಅವರು ತಮ್ಮ ಇಲಾಖೆಯ ಮೂಲಕ ಇರುವ ಸರ್ಕಾರದ ಸೌಲಭ್ಯ ಸದಪಯೋಗ ಮಾಡಿಕೊಳ್ಳಲು ರೈತರಿಗೆ ತಿಳಿಸಿದರು. ಅರಣ್ಯ ಇಲಾಖೆಯ ಗುಂಡಪ್ಪ ಅವರು, ಸರ್ಕಾರದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಪಶುಸಂಗೋಪನೆ ಇಲಾಖೆಯ ಅಧಿಕಾರಿ ಗೋಣೆಪ್ಪ ವಾಡಿ ಅವರು, ರೈತರನ್ನು ಉದ್ದೇಶಿಸಿ ಮಾತನಾಡಿದರು. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾದ ಬಸವರಾಜ ಪಾಟೀಲ ಮಾತನಾಡಿದರು.
ಕೊನೆಯದಾಗಿ ಅಧ್ಯಕ್ಷರಾದ ಜೀವನಸಾಬ ಅವರು, ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಖೆತ್ ಬಚಾವೂ ಅಭಿಯಾನದ ಬಗ್ಗೆ ರೈತರಿಗೆ ಮನವರಿಕೆ ಮಾಡಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ ಮತ್ತು ಸಿರಿಧಾನ್ಯಗಳ ವಿವರವಾಗಿ ತಿಳಿಸುತ್ತಾ, ರಾಸಾಯನಿಕ ರಸಗೊಬ್ಬರ ಬಳಿಕೆ ಕಡಿಮೆ ಮಾಡಿ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಕರೆ ನೀಡಿದರು.
ತಾಲೂಕಾ ತಾಂತ್ರಿಕ ವ್ಯವಸ್ಥಾಪಕರು ಸಭೆಯಲ್ಲಿ ಪಾಲ್ಗೊಂಡ ಎಲ್ಲ ಇಲಾಖೆಯ ಅಧಿಕಾರಿಗಳಿಗೆ, ರೈತರಿಗೆ ವಂದಿಸಿದರು.
Comments are closed.