ಶಿಕ್ಷಣ ದಿಂದ ಮಾತ್ರ ಗ್ರಾಮ, ದೇಶದ ಅಭಿವೃದ್ಧಿ ಸಾಧ್ಯ : ಸಂಗನಗೌಡ್ರ

ಕುಷ್ಟಗಿ: ಪ್ರತಿಯೊಂದು ಮಗು ಶಿಕ್ಷಣವಂತರಾಗಬೇಕು . ಗ್ರಾಮದ ಒಂದೇ ಒಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಸರಕಾರದಿಂದ ಸಾಕಷ್ಟು ಸೌಲಭ್ಯಗಳು ಉಚಿತವಾಗಿ ಸಿಗುತ್ತಿದ್ದು ಪಾಲಕರು ತಪ್ಪದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಿಸಬೇಕು ಎಂದು ಮಾಜಿ ಜಿಪಂ ಸದಸ್ಯ ಸಂಗನಗೌಡ ಜೈನರ ಹೇಳಿದರು.
ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬಿಜಕಲ್ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್‌ಗಳ ಸಹಯೋಗದಲ್ಲಿ ಜರುಗಿದ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣಕ್ಕಾಗಿ ಸರಕಾರ ಅನೇಕ ಉತ್ತಮ ಯೋಜನೆಗಳನ್ನ ಜಾರಿಗೆ ತಂದಿದೆ ಬಿಸಿಯೂಟ, ಹಾಲು,ಹಣ್ಣು, ಸಮವಸ್ತ್ರ, ಪಠ್ಯಪುಸ್ತಕ, ಶೂ ಸೇರಿದಂತೆ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದು ಇದರ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಹಾಗೂ ಮಕ್ಕಳು ಶಿಕ್ಷಣವಂತರಾದರೆ ನಮ್ಮ ಗ್ರಾಮ ಹಾಗೂ ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.
ವಿದ್ಯಾರ್ಥಿನಿಯರಿಂದ ಕುಂಭದ ಮೆರವಣಿಗೆ, ವಿದ್ಯಾರ್ಥಿಗಳ ವಿವಿಧ ಛದ್ಮವೇಷ , ಕೋಲಾಟ ನೃತ್ಯ ಹಾಗೂ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಶಿಕ್ಷಣದ ಮಹತ್ವವನ್ನು ಗ್ರಾಮದ ತುಂಬೆಲ್ಲಾ ಸಾರಿದರು.. ಇದೇ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ಮಹನೀಯರಿಗೆ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಎನ್‌ಜಿಒ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಗುರಪ್ಪ ಕುರಿ, ಶಿಕ್ಷಣ ಸಂಯೋಜಕರಾದ,ರಾಘಪ್ಪ ಶ್ರೀರಾಮ, ಎಸ್‌ಡಿಎಂಸಿ ಅಧ್ಯಕ್ಷರಾದ ಮಂಜುನಾಥ್ ಬನ್ನಿಗೋಳ, ಉಪಾಧ್ಯಕ್ಷರಾದ ಶರಣಪ್ಪ ವಡ್ಡರ ಹಾಗೂ ಕಲಿಕೆ ಟಾಟಾ ಟ್ರಸ್ಟ್‌ನ ಸಂಯೋಜಕರಾದ ಬಸವರಾಜ ನಾಗಣ್ಣವರ
ಎನ್‌ಜಿಒ ಕುಷ್ಟಗಿಯ ಹಿರಿಯ ಉಪಾಧ್ಯಕ್ಷರಾದಎಚ್. ಎಚ್. ಉಸ್ತಾದ್, ಎನ್ ಜಿ ಒ, ಕುಷ್ಟಗಿ ಕಾರ್ಯದರ್ಶಿಗಳಾದ ಮಲ್ಲಪ್ಪ ಕುದರಿ, ಕುಷ್ಟಗಿ ಕನ್ಯಾ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾದ ಸಿದ್ದರಾಮಪ್ಪ ಅಮರಾವತಿ, ಕೆಎಸ್‌ಪಿಎಸ್‌ಟಿಎ ಮಾಜಿ ಸಹ ಕಾರ್ಯದರ್ಶಿಗಳಾದ ಅಲ್ತಾಫ್ ಹುಸೇನ್ ಮುಜಾವರ್, ಬಿಆರ್‌ಪಿ ಸೋಮನಾಥ, ಬಿಜಕಲ್ ಕ್ಲಸ್ಟರ ನ ಸಿಆರ್‌ಪಿ ಗಳಾದ ಚಂದಪ್ಪ ನಿಡಗುಂದಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜ ಬಾಗಲಿ, ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ವೀರನಗೌಡ ಪಾಟೀಲ, ನಿವೃತ್ತ ಮುಖ್ಯ ಶಿಕ್ಷಕರಾದ ಅಮರೇಗೌಡ ನಾಗೂರು, ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರುದ್ರಮ್ಮ ಗುತ್ತೂರು, ಕನಕೊಪ್ಪ ಶಾಲೆಯ ಶಿಕ್ಷಕರಾದ ಹನಮಪ್ಪ ಮರಿಚೆನ್ನವರ ಹಾಗೂ ಬಿಸನಾಳ ಶಾಲೆಯ ಮುಖ್ಯ ಶಿಕ್ಷಕರಾದ ಧರ್ಮಗೌಡ ಪಾಟೀಲ, ಈರಣ್ಣ ಎ ಎಸ್ ಐ, ಪೊಲೀಸ್ ಠಾಣೆ ಕುಷ್ಟಗಿ ಸೇರಿದಂತೆ ಎಸ್‌ಡಿಎಂಸಿ ಸರ್ವ ಸದಸ್ಯರು, ಮುಖ್ಯ ಶಿಕ್ಷಕರಾದ ಪಾರ್ವತೆಮ್ಮ ನಿಡಶೇಸಿ, ಸಹ ಶಿಕ್ಷಕರಾದ ಕಳಕಮಲ್ಲೇಶ ಭೋಗಿ, ಶಾಲೆಯ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಸರ್ವ ಸದಸ್ಯರು, ಮಾಜಿ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲೆಯ ವಿದ್ಯಾರ್ಥಿಗಳು,ಶಿಕ್ಷಣ ಪ್ರೇಮಿಗಳು, ಗ್ರಾಮದ ಗುರು-ಹಿರಿಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.