ಕೊಪ್ಪಳ ನಗರದಲ್ಲಿ Sdpi ಜಿಲ್ಲಾ ಪ್ರತಿನಿಧಿ ಸಭೆ
ಕೊಪ್ಪಳ : ನಗರದ ಮುಸ್ಲಿಂ ಶಾದಿ ಮಹಲ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷರಾದ ಸಲೀಮ್ ಮನಿಯಾರ್ ಪ್ರಾಸ್ತಾವಿಕ ನುಡಿಗಳು ನುಡಿದರು,

ತದ ನಂತರ ಸಭೆಯ ಉದ್ಘಾಟನಾ ಭಾಷಣವನ್ನು ರಾಜ್ಯ ಕಾರ್ಯದರ್ಶಿಯಾದ ರಿಯಾಝ್ ಕಡಂಬು ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದ್ದು, ಕಾರ್ಯಕರ್ತರು ಬೂತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಪಣತೊಟ್ಟು ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸೈಯದ್ ಸಖೀಬ್ ರವರು 2025-26 ಸಾಲಿನ ಮಧ್ಯಂತರ ವರದಿಯನ್ನು ಮಂಡನೆ ಮಾಡಿದರು..
ನಂತರ ವರದಿಯ ಬಗ್ಗೆ ಸುವಿಸ್ತಾರವಾಗಿ ಚರ್ಚಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ರಂಜಾನ್ ಕಡಿವಾಲ್ ರವರು ಮಾತನಾಡಿ ಪಕ್ಷವನ್ನು ಕಟ್ಟಲು ಸಾಕಷ್ಟು ಕಾರ್ಯಕರ್ತರ, ನಾಯಕರುಗಳ ತ್ಯಾಗ ಬಲಿದಾನಗಳಿಗೆ, ಈ ಪಕ್ಷಕ್ಕಾಗಿ ಸಾಕಷ್ಟು ಕಾರ್ಯಕರ್ತರು ತಮ್ಮ ರಕ್ತವನ್ನು ನೀಡಿದ್ದಾರೆ ಹಾಗೂ ಸಾಕಷ್ಟು ನಾಯಕರುಗಳು ಸೂಳ್ಳಾರೋಪಗಳ ಮೇಲೆ ಇಂದಿಗೂ ಜೈಲಿನಲ್ಲಿದ್ದಾರೆ, ಹಾಗಾಗಿ ಪಕ್ಷವನ್ನು ಇನ್ನಷ್ಟು ಗಟ್ಟಿ ಗೊಳಿಸುವ ಜವಾಬ್ದಾರಿ ನಮ್ಮೇಲಿದೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರು ಯೂಸುಫ್ ಮೋದಿ, ಜಿಲ್ಲಾ ಕೋಶಾಧಿಕಾರಿ ಮೆಹಬೂಬ್ ರಝಾ, ಜಿಲ್ಲಾ ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ, ಜಿಲ್ಲಾ ಕಾರ್ಯದರ್ಶಿ ರಾಜಿಉರ್-ರೆಹಮಾನ್, ಜಿಲ್ಲಾ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್, ಅಬ್ದುಲ್ ಅಲ್ಲಂ, ಹುಜುರ್ ಅಹಮದ್, ಇರ್ಫಾನ್, ಆಸೀಫ್, ಅಜ್ಮೀರ್ ಸಿಂಗನಾಳ, ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು..
Comments are closed.