ಬಾನಾಪುರ ಬಳಿ ಭೀಕರ ಅಪಘಾತ ನಾಲ್ವರ ಸಾವು
ಕೊಪ್ಪಳ : ಮಂತ್ರಾಲಯಕ್ಕೆ ಹೊರಟಿದ್ದ ಓಮಿನಿ ವ್ಯಾನ್ ಗೆ ಗೂಡ್ಸ್ ಗಾಡಿ ಒಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ . ತಡರಾತ್ರಿ ಒಂದು ಗಂಟೆಗೆ ಈ ಅಪಘಾತ ಸಂಭವಿಸಿದ್ದು ಮೃತರು ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದವರು ಎಂದು ಹೇಳಲಾಗುತ್ತಿದೆ.

ತಡರಾತ್ರಿ ಒಂದು ಗಂಟೆ ಸುಮಾರಿಗೆ ಕೊಪ್ಪಳ ಕಡೆಗೆ ಸಾಗುತ್ತಿದ್ದ ಓಮಿನಿ ವ್ಯಾನ್ ಗೆ ಬಳ್ಳಾರಿಯಿಂದ ಹುಬ್ಬಳ್ಳಿಗೆ ಸಾಗುತ್ತಿದ್ದ ಗೂಡ್ಸ್ ಗಾಡಿ ದಾಟಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದರು. ಸಾವನ್ನಪ್ಪಿದವರನ್ನು ರಮೇಶ್ , ಪ್ರವೀಣ್ ಅಮೃತ ಹಾಗೂ ಕೆಂಚಮ್ಮ ಎಂದು ಗುರುತಿಸಲಾಗಿದೆ


ತೀವ್ರವಾಗಿ ಗಾಯಗೊಂಡಿದ್ದ ಕೆಂಚಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಓಮಿನಿಯಲ್ಲಿ ಒಟ್ಟು ಒಂಬತ್ತು ಜನ ಇದ್ದರು. ಇವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಸಮರ್ಥ ಚಿನ್ಮಯ ಪ್ರಣವ್ ಹಾಗೂ ಸೋನಾಲಿ ಎನ್ನುವ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಚಿನ್ಮಯ ಇವರ ಪರಿಸ್ಥಿತಿ ತೀವ್ರ ಚಿಂತಾ ಜನಕ ಎನ್ನಲಾಗಿದ್ದು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೂಡ್ಸ್ ಗಾಡಿಯಾ ಚಾಲಕನಿಗೂ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕುಕನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅಪಘಾತಂಡದ ಸ್ಥಳಕ್ಕೆ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಎ ಎಸ್ ಪಿ, ಸಿಪಿಐ ಮೌನೇಶ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು
Comments are closed.