ವಿಶ್ವಕರ್ಮ ಸಮಾಜ ಸಂಘಟರಾದರೆ ಪ್ರಾತಿನಿಧ್ಯ : ಲೋಹಿತ್

Get real time updates directly on you device, subscribe now.

ಹೋಬಳಿ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ

ಕೊಪ್ಪಳ ಸೆ 26: ವಿಶ್ವಕರ್ಮರ ಜೀವನದ ಉಪದೇಶದೊಂದಿಗೆ ಸಮಾಜದ ಪ್ರತಿಯೊಬ್ಬರು ಸಂಘಟಿತರಾದರೆ ನಮಗೆ ಪ್ರತಿಯೊಂದರಲ್ಲೂ ಪ್ರಾತಿನಿಧ್ಯ ದೊರೆಯಲು ಸಾಧ್ಯವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಲ್ಲೂರು ಅವರು ಹೇಳಿದರು.
ತಾಲೂಕಿನ ಲೇಬಗೇರಿಯ ಶ್ರೀ ಮದಾನೆಗೊಂದಿ ಸಂಸ್ಥಾನ ಸರಸ್ವತಿ ಪೀಠದ ಮಠದಲ್ಲಿ ಇರಕಲ್‌ಗಡಾ ಹೋಬಳಿ ಮಟ್ಟದ ವಿಶ್ವಕರ್ಮ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮರು ಸಮಾಜಕ್ಕೆ ಸಂದೇಶವನ್ನು ಸಾರಿದವರು. ಅವರ ಸಂದೇಶದೊಂದಿಗೆ ನಾವೆಲ್ಲ ಮುಂದೆ ನಡೆಯಬೇಕಿದೆ. ನಮ್ಮ ಸಮಾಜದಲ್ಲಿಯೇ ನಾಯಕರ ಮಧ್ಯೆ ಒಳ ಮುನಿಸು ಬೇಡ. ನಮ್ಮಲ್ಲೇ ಸಣ್ಣ ಸಣ್ಣ ಅಸಮಾಧಾನ ಇದ್ದರೆ ನಾವು ಎಂದಿಗೂ ಸಂಘಟಿತರಾಗಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.
ಪ್ರಸ್ತುತ ಸಣ್ಣ ಸಣ್ಣ ಸಮಾಜಗಳು ಮುಂದೆ ಬರುತ್ತಿವೆ. ನಮ್ಮ ಸಮಾಜದ ಮಕ್ಕಳಿಗೂ ಉನ್ನತ ಸ್ಥಾನ ದೊರೆಯಬೇಕಿದೆ. ಆ ನಿಟ್ಟಿನಲ್ಲಿ ನಾವು ಹೋರಾಟ ಆರಂಭಿಸಿದ್ದೇವೆ. ಸಮಾಜದ ಮುಖಂಡ ಕೆ.ಪಿ. ನಂಜುಂಡಿ ಅವರು ಕೋಟ್ಯಾಂತರ ರೂ. ವೆಚ್ಚ ಮಾಡಿ ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅವರ ಶ್ರಮದ ಫಲವಾಗಿ ನಮಗೆ ವಿಶ್ವಕರ್ಮ ನಿಗಮ ಸೇರಿದಂತೆ ಕೆಲವೊಂದು ಸೌಲಭ್ಯ ಪ್ರತ್ಯಕ ದೊರೆಯುವಂತಾಗಿದೆ. ನಾವು ಮೌನವಾಗಿ ಕುಳಿದರೆ ಏನೂ ಪಡೆಯಲು ಸಾಧ್ಯವಿಲ್ಲ. ಸುಮ್ಮನೆ ಬಣ,
ಪ್ರತ್ಯೇಕತೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ನಮ್ಮ ಪರವಾಗಿ ಧ್ವನಿ ಎತ್ತಲು ಸದನದಲ್ಲಿ ಕೆ.ಪಿ.ನಂಜುಂಡಿ ಅವರೊಬ್ಬರೇ ಇದ್ದಾರೆ. ಅವರಿಲ್ಲದಿದ್ದರೆ ನಮ್ಮ ಪರ ಮಾತನಾಡುವವರೇ ಇಲ್ಲದಾಗಲಿದೆ. ಅವರಿಗೆ ನಾವೆಲ್ಲರೂ ಸಾಥ್ ನೀಡೋಣ. ನಮ್ಮ ಮುಂದಿನ ಮಕ್ಕಳ ಭವಿಷ್ಯದ ಸಲುವಾಗಿ ಹೋರಾಟ ಮಾಡೋಣ. ಇಲ್ಲಿ ನಾನು ತಾನು ಎನ್ನುವ ಭಾವನೆ ಬಿಟ್ಟು ಪ್ರತಿಯೊಬ್ಬರೂ ಸಂಘಟಿತರಾಗಿ ಹೋರಾಟಕ್ಕೆ ಅಣಿಯಾಗೋಣ. ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿಯೂ ನಾವೆಲ್ಲ ಪಾಲ್ಗೊಳ್ಳೋಣ. ಗುರುಗಳ ಮಾರ್ಗದರ್ಶನದಲ್ಲಿಯೇ
ನಾವು ಮುಂದುವರೆಯೋಣ. ಅಂದಾಗ ಮಾತ್ರ ನಮಗೆ ಮೀಸಲಾತಿಯ ಸೌಲಭ್ಯ ದೊರೆಯಲು
ಸಾಧ್ಯವಿದೆ ಎಂದರು.
ಗಿಣಗೇರಿ ಮಠದ ಶ್ರೀ ದೇವೇಂದ್ರ ಮಹಾಸ್ವಾಮೀಜಿಗಳು ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿದ್ದರೆ ನಾವು ಎಲ್ಲವನ್ನೂ ಪಡೆಯಲು ಸಾಧ್ಯವಿದೆ. ಸಂಘಟಿತರಾಗಿ ಬೆಳೆಯಬೇಕು. ಕೆ.ಪಿ.ನಂಜುಂಡಿ ಅವರು ಸಮಾಜದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಅವರೊಟ್ಟಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಲೇಬಗೇರಿ ಮಠದ ಶ್ರೀ ನಾಗಮೂರ್ತೇಂದ್ರ ಸ್ವಾಮೀಜಿಗಳು, ಶ್ರೀ ಸಿರಸಪ್ಪಯ್ಯ ಮಹಾ ಸ್ವಾಮೀಜಿ, ಮುದ್ದಾಬಳ್ಳಿಯ ಶ್ರೀ ಗುರುನಾಥ ಮಹಾಸ್ವಾಮೀಜಿಗಳು, ಶ್ರೀ ನಾಗಲಿಂಗ ಸ್ವಾಮಿಗಳು,ದಿವಕರ್ ಸ್ವಾಮಿಗಳು, ಬ್ರಹ್ಮೇಂದ್ರ ಸ್ವಾಮಿಗಳು,ಸಾಮಂಬಯ್ಯ ಸ್ವಾಮಿಗಳು,ವೀರುಪಾಕ್ಷ ಸ್ವಾಮಿಗಳು,ಗಣೇಶ್ ಸ್ವಾಮಿ, ಶ್ರೀಕಂಠ ಆಚಾರ, ಶ್ರೀ ನರಸಿಂಹ ಆಚಾರ್, ಸೇರಿದಂತೆ ವಿವಿಧ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಜೈರಾಮ್ ಪತ್ತಾರ, ಮಾರುತಿ ಬಡಿಗೇರ, ಕೃಷ್ಣಪ್ಪ ಬಡಿಗೇರ, ದೇವೇಂದ್ರಪ್ಪ ರಾಜೂರು, ಉಮೇಶ ಬಡಿಗೇರ, ಮಂಜುನಾಥ ಬನ್ನಿಕೊಪ್ಪ, ಎಚ್ಚರೇಶ ಹೊಸಮನಿ, ಮಂಜುನಾಥ ಬಡಿಗೇರ, ಮೌನೇಶ ಮಾದಿನೂರು, ಮಹೇಶ ಬಡಿಗೇರ, ಶಂಕ್ರಪ್ಪ ಬಡಿಗೇರ, ಶರಣಪ್ಪ ಕಾಮನೂರು, ಮಹಾಂತೇಶ ಸಂಗಟಿ, ಪ್ರಶಾಂತ ವಿಶ್ವಬ್ರಾಹ್ಮಣ, ಬ್ರಹ್ಮಾನಂದ ಬಡಿಗೇರ,ವಿಶ್ವನಾಥ ಶಿಲ್ಪಿ, ಈರಣ್ಣ ಕಲ್ಲತವರಗೇರಾ, ವಿರೂಪಾಕ್ಷ ಬೂಮ್ಮನಾಳ, ಸೇರಿ ಇತರರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮೊದಲು ಶ್ರೀ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಯು ಸಂಭ್ರಮದಿಂದ ನೆರವೇರಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: