MP ಟಿಕೆಟ್ ನಿರ್ಧಾರ ಪಕ್ಷದ ಅಂತಿಮ ತೀರ್ಮಾನ : ನಾಡಗೌಡ
ಕೊಪ್ಪಳ : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಮಾಡಿಕೊಂಡ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಗೆ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದಿಲ್ಲ, ಆ ವಿಚಾರದಲ್ಲಿ ಪಕ್ಷದ ಅಂತಿಮ ತೀರ್ಮಾನವಾಗಿದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಈ ವಿಷಯ ತಿಳಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ವಿಚಾರವಾಗಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬೇರು ಮಟ್ಟದ ಸಂಘಟನೆ ಮಾಡುವ ಪ್ರಯತ್ನ ವಿನೂತವಾಗಿ ರಚನೆಯಾದ ಕೋರ್ ಕಮಿಟಿಯಿಂದ ಮಾಡಲಾಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಪಡಿಸಲು ಪಕ್ಷದ ಕಾರ್ಯಕರ್ತರ ಸಮಾವೇಶಗಳ ಮೂಲಕ ಸಂಘಟನೆಯನ್ನು ಮಾಡುತ್ತೇವೆ ಎಂದರು.
ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ, ಮುಖಂಡರಾದ ಸಿ.ವಿ ಚಂದ್ರಶೇಖರ್ ಮಾತನಾಡಿ, ಜೆಡಿಎಸ್ ರೈತಪರ ಮತ್ತು ಮಹಿಳೆಯರ ಪರವಾದ ನಿಲುವುಗಳನ್ನು ಹೊಂದಿದ ಪಕ್ಷ, ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗವನ್ನು ರೂಪಿಸಿ ಮನೆ ಮಾತಾಗಿದ್ದರು. ಆದರೆ ಕುಮಾರಸ್ವಾಮಿ ಅವರು ಮಾಡಿದ ಕಾರ್ಯಕ್ರಮಗಳನ್ನು ತಿಳಿಸುವಲ್ಲಿ ಪಕ್ಷದ ಕಾರ್ಯಕರ್ತರು ಹಿಂದೆ ಉಳಿದಿದ್ದಾರೆ. ಹೀಗಾಗಿ ಇದೇ 27 ರಂದು ಕೊಪ್ಪಳದಲ್ಲಿ ನಡೆಯುವ ಸಭೆಯಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಜನತೆಗೆ ತಿಳಿಸುವ ಮುಖಾಂತರ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಭವಿಷ್ಯವಿಲ್ಲ, ದೇಶದ ಪ್ರಗತಿಗೆ ನಾವೆಲ್ಲರೂ ಮೋದಿಯವರನ್ನು ಬೆಂಬಲಿಸುವ ಕಾಲ ಈಗ ಪರಿಪಕ್ವವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಪಕ್ಷದ ವಕ್ತಾರ ಮೌನೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರಡಿ ಸಂಗಣ್ಣ ಬಿಜೆಪಿ ಅಭ್ಯರ್ಥಿಯಾಗುತ್ತಾರೆ..??
ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಪುನರ್ ಆಯ್ಕೆ ಬಯಸುತ್ತಾರೆ..? ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ವೆಂಕಟರಾವ್ ನಾಡಗೌಡ ಹೇಳಿದ್ದು ಹೀಗೆ, ಎನ್ ಡಿಎ ಅಲ್ಲಿ ಇದೀಗ ನಮ್ಮ ಪಕ್ಷ ಈ ಮೈತ್ರಿಕೂಟದಲ್ಲಿ ಸೇರಿದೆ. ಅದು ಮುಂದಿನ ದಿನದಲ್ಲಿ ನಮ್ಮ ಪಕ್ಷವು ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಸಂಗಣ್ಣ ಕರಡಿ ಅಭ್ಯರ್ಥಿ, ಸಿವಿಸಿ ಅಭ್ಯರ್ಥಿ ಎಂದು ನಾವು ಅದರ ಬಗ್ಗೆ ವಿಚಾರ ಮಾಡಲ್ಲ. ಪಕ್ಷದಲ್ಲಿನ ವರಿಷ್ಠರ ಸೂಚನೆಯಲ್ಲಿಯೇ ನಾವುಗಳು ಮುಂದುವರಿಯುತ್ತೇ ಎಂದು ಸ್ಪಷ್ಟಪಡಿಸಿದರು. ನಾನು ಭವಿಷ್ಯ ನುಡಿಯುತ್ತಿಲ್ಲ, ವರ್ತಮಾನದ ವಿಷಯಗಳನ್ನು ಮಾತ್ರ ಹೇಳಬಲ್ಲೆ ಎಂದರು.
Comments are closed.