ರೈತರ ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ರಸಗೊಬ್ಬರ ಪೂರೈಸಲು ಒತ್ತಾಯ

ಕೊಪ್ಪಳ/ರೈತರ ಹಕ್ಕುಗಳು ಈಡೇರಿಸಲು ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿ ಬೆಂಬಲ ಬೆಲೆ ನೀಡಿ ಅದರ ಜೊತೆಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಿ, ನೀರಾವರಿ ಸಮಸ್ಯೆಗಳು ಹಾಗೂ ರೈತರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಸರಕಾರ ರೈತರಿಗೆ ಅನುಕೂಲ ದೊರಕಿಸಿಕೊಡ ಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ,ಬಿ. ರವರು ಸರಕಾರಕ್ಕೆ ಒತ್ತಾಯಿಸಿದ್ದಾರೆ,
ಅವರು ಮoಗಳವಾರ ಇಲ್ಲಿನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಸರಕಾರಕ್ಕೆ ಒತ್ತಾಯಿಸಿದರು,
ಮುಂದುವರಿದು ಮಾತನಾಡಿ ರೈತರಿಗೆ ರಸಗೊಬ್ಬರ ವಿತರಣೆ ಮಾಡುವ ಸಂದರ್ಭದಲ್ಲಿ ಎಫ್ ಐ ಡಿ, ಲಿಂಕ್ ಕೇಳಿ ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ ಅವರಿಗೆ ತಾಂತ್ರಿಕ ನೆಪವಡ್ಡಿ ಸರ್ವರ್ ಸಮಸ್ಯೆ ಹೇಳಿ ವಾಪಸ್ ಕಳಿಸಿ ತೊಂದರೆ ಉಂಟು ಮಾಡದೆ ಅವರಿಗೆ ಸಿಗಬಹುದಾದ ಸರ್ಕಾರದ ಸೌಲಭ್ಯ ನೇರವಾಗಿ ಅವರಿಗೆ ಸಿಗಬೇಕು ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಸಬೇಕು ಎಂದು ಇದೆ ವೇಳೆ ಒತ್ತಾಯಿಸಿದ ಅವರು ಕೃಷಿ ಅಧಿಕಾರಿಗಳಿಗೆ ನೇರವಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸುಖ ಮುನಿಯಪ್ಪ ಬಿ ಎಚ್ಚರಿಕೆ ನೀಡಿದರು, ಅಲ್ಲದೆ ನರೇಗಲ್ ಗ್ರಾಮದಲ್ಲಿ ಸಂಘದ ಗ್ರಾಮ ಘಟಕದ ಉದ್ಘಾಟನೆ ಯಶಸ್ವಿಯಾಗಿ ಜರುಗಿದ್ದು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದವರೆಗೆ ರೈತರ ಸಂಘಟನೆ ಬೆಳೆಸಿ ಅವರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಲು ನಮ್ಮ ಸಂಘಟನೆ ಬೆಳೆಸಲು ಶ್ರಮಿಸಬೇಕು ಎಂದು ಅವರು ಹೇಳಿದರು,
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬಸಪ್ಪ ಗುಡಿ, ಮುತ್ತಣ್ಣ ಕಮ್ಮಾರ್, ನಾಗಪ್ಪ ನರೇಗಲ್, ರುದ್ರಪ್ಪ ಮೂಲಿಮನಿ, ಅಣ್ಣಪ್ಪ ಜೋಗಿನ್ ಮತ್ತಿತರರು ಉಪಸ್ಥಿತರಿದ್ದರು.