ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 

0

Get real time updates directly on you device, subscribe now.

ಕೊಪ್ಪಳ/ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನೆಯಿಂದ ಇದೆ ತಿಂಗಳ ಮೇ 31ರ  ರವಿವಾರ  ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆ ಗಳಲ್ಲಿ ಶೇಕಡ 75 ರಷ್ಟು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಯುವಕ ಯುವತಿಯರಿಗೆ ಪ್ರೋತ್ಸಾಹಿಸಲು ಸಮಾಜದ ವತಿಯಿಂದ ನಮ್ಮ ಸಮಾಜದ ರಾಜ್ಯ ಅಧ್ಯಕ್ಷರಾದ ಕೆಪಿ ನಂಜುಂಡಿ ಅವರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಬೃಹತ್ ಕಾರ್ಯಕ್ರಮ ನಡಿಯಲ್ಲಿದೆ  ಎಂದು ಮಹಾಸಭಾ ದ ಜಿಲ್ಲಾಧ್ಯಕ್ಷ ವೀರೇಶ್ ಪತ್ತಾರ್ ತಿಳಿಸಿದರು,

ಅವರು ಮಂಗಳವಾರ ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು,

ಮುಂದುವರೆದು ಮಾತನಾಡಿ ಸದರಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಸಕ್ತ ಸಾಲಿನ ತಮ್ಮ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಗಳ ಮಾರ್ಕ್ಸ್ ಕಾರ್ಡ್ ಗಳ ಮಾಹಿತಿ ಮತ್ತು ತಮ್ಮ ಭಾವಚಿತ್ರದೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ತುಂಬಿಸಿ ಸಮಾಜದ ಸಂಘಟಕರ ಮೂಲಕ ಅಥವಾ ಅವರ ವಾಟ್ಸಾಪ್ ನಂಬರ್ ಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು, ಹೆಚ್ಚಿನ ಮಾಹಿತಿಗಾಗಿ 988 64 23935 ನಂಬರ್ ಕ್ಕೆ ಸಂಪರ್ಕಿಸಬಹುದು ಎಂದು ಸಂಘದ ಜಿಲ್ಲಾಧ್ಯಕ್ಷರಾದ ವೀರೇಶ್ ಪತ್ತಾರ್ ವಿವರಣೆ ನೀಡಿದರು ಅಲ್ಲದೆ ಇದೆ ತಿಂಗಳ 24ರಂದು ಕೊಪ್ಪಳದಲ್ಲಿ ಮಹಾಸಭಾ ಕೊಪ್ಪಳ ಜಿಲ್ಲೆಯ ನೂತನ ಪದಾಧಿಕಾರಿಗಳ, ಪದಗೃಹಣ ಸಮಾರಂಭ ಕೂಡ ಜರುಗಲಿದೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರುಗಳಾದ ವೀರೇಶ್ ಕಮ್ಮಾರ್ ಕುಷ್ಟಗಿ, ದೇವೇಂದ್ರಪ್ಪ ಗಂಗಾವತಿ, ಆಂಜನೇಯ, ಹೆಚ್, ಕಾರಟಗಿ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಮತ್ತು ರಾಜ್ಯ ಸಮಿತಿ ಮುಖಂಡ ಪ್ರಭಾಕರ್ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Koppal/ The All Karnataka Vishwakarma Mahasabha Sanghatana is organizing a grand Pratibha Puraskar program on Sunday, May 31, at the Town Hall in Bangalore to encourage the talented students of the society who scored 75 percent marks in the current year’s SSLC and PUC secondary examinations. The society is organizing a grand Pratibha Puraskar program under the leadership of our society’s state president KP Nanjundi, said Mahasabha District President Veeresh Pattar.

He spoke to the media at a press conference organized at the Patrika Bhawan of the District Working Journalists’ Association here on Tuesday.

He further informed that the students of the society who will participate in the Pratibha Puraskar program should fill in the prescribed application form with the information of their SSLC and PUC secondary examinations of the current year and submit an application through the society organizers or on their WhatsApp number. For more information The district president of the association, Veeresh Pattar, explained that they can be contacted at 988 64 23935 and that the inauguration ceremony of the new office bearers of the Mahasabha Koppal district will also be held in Koppal on the 24th of this month.

Veeresh Kammar Kushtagi, Devendrappa Gangavathi, Anjaneya, H, Karatagi, general secretary Hanumesh and state committee leader Prabhakar Badiger, among others, were present at the press conference.

Get real time updates directly on you device, subscribe now.

Leave A Reply

Your email address will not be published.

error: Content is protected !!