ಸಂಸದರೇ ಸಂಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ ವ್ಯಂಗ್ಯ ಮಾಡುವ ಸಮಯ ಇದಲ್ಲ- ಗುಳಗಣ್ಣವರ

0

Get real time updates directly on you device, subscribe now.

 ಕೊಪ್ಪಳ :  ಪ್ರಧಾನಿ ನರೇಂದ್ರ ಮೋದಿ ದೇಶ ಆರ್ಥಿಕತೆ ಹಿತ ದೃಷ್ಟಿಯಿಂದ ಸಲಹೆ ನೀಡಿದ್ದು, ಸಂಸದ ಹಿಟ್ನಾಳ್ ಅವರೇ ಸಂಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ ವ್ಯಂಗ್ಯ ಮಾಡುವ ಸಮಯ ಇದಲ್ಲ ಜವಾಬ್ದಾರಿಯಿಂದ ಹೇಳಿಕೆ ನೀಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅಪತ್ಕಾಲಾ ಅನ್ನುವುದು ದೇಶಕ್ಕೆ ಅನಿಶ್ಚಿತವಾಗಿ ಬರುವುದು. ಮಧ್ಯಪ್ರಚ್ಯದಲ್ಲಿ ಯುದ್ಧ ನಡೆದಿರುವ ಕಾರಣ ಜಗತ್ತಿನಾಧ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ.  ಹಾಗಾಗಿ ದೇಶದ ಜನರನ್ನ ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಮಾತನಾಡಿ ಇಂತಹ ಪರಿಸ್ಥಿತಿ ಎದುರಿಸಲು ಜನರಿಗೆ ಸಲಹೆಗಳನ್ನು ನೀಡಿದ್ದಾರೆ.  ದೇಶ ಯಾವಾಗ ಸಂಕಷ್ಟಗಳನ್ನು ಎದುರಿಸಿದೆಯೋ ಅವಾಗ ಅವಾಗ ಮೋದಿ ಅವರು ಕೊಟ್ಟ ಸಲಹೆಗಳನ್ನು ದೇಶದ ಜನ ಪಾಲಿಸಿದ್ದಾರೆ. ಹಾಗಾಗಿಯೇ ಕೊರೋನ ಅಂತ ಮಹಾ ಮಾರಿಯನ್ನು ನಮ್ಮ ದೇಶದಲ್ಲಿ ಎದುರಿಸಲು ಸಾಧ್ಯವಾಯಿತು. 

  ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ವಿಟ್ಟು 3ನೇ ಬಾರಿ ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಅವರು ಏನೆ ಸಲಹೆ ಸೂಚನೆ ಗಳನ್ನು ನೀಡಿದರು. ಅದು ದೇಶದ ಹಿತ ದೃಷ್ಟಿಯಿಂದ ಎಂದು ಸಂಸದರು ತಿಳಿದುಕೊಳ್ಳಬೇಕು. 

 ಅವರ ಹೇಳಿಕೆಗಳಿಗೆ ಜನ ಮನ್ನಣೆ ನೀಡುತ್ತಿದಾರೆ. ಹಿಂದೆ ಸ್ಥಿತಿವಂತರು LPG ಸಬ್ಸಿಡಿ ತ್ಯಜಿಸಿ ಅನ್ನುವ ಕರೆ ಕೊಟ್ಟಾಗ 1 ಕೋಟಿ ಜನ ಸಬ್ಸಿಡಿ ತ್ಯಜಿಸಿದರು.  ಅದು ದೇಶಕ್ಕೆ ಆರ್ಥಿಕ ಬಲ ನೀಡಿತು.  ಇಂತಹ ಅನೇಕ ಉದಾಹರಣೆಗಳು ಇದಾವೆ. 

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ಇದು ನಮ್ಮ ಆಮದು ಬಿಲ್ ಅನ್ನು ಹೆಚ್ಚಿಸುತ್ತಿದೆ. ಪ್ರತಿ ಭಾರತೀಯನ ಸಣ್ಣ ಉಳಿತಾಯವು ದೇಶದ ಆರ್ಥಿಕತೆಯನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಬಲ್ಲದು.”

  ಅಷ್ಟ ಸೂತ್ರಗಳು ಸರ್ಕಾರಿ ಆದೇಶಗಳಲ್ಲ. ಬದಲಿಗೆ ಬದಲಾಗುತ್ತಿರುವ ಜಾಗತಿಕ ಭೂಪಟದಲ್ಲಿ ಭಾರತವನ್ನು ಸುರಕ್ಷಿತವಾಗಿರಿಸಲು ಪ್ರತಿಯೊಬ್ಬ ಪ್ರಜೆಯೂ ನಿಭಾಯಿಸಬೇಕಾದ ಜವಾಬ್ದಾರಿಯಾಗಿದೆ.

ಕಾಂಗ್ರೆಸ್ ನವರಿಗೆ ಯಾವಾಗಲು ಮೋದಿ ಬೈದರೆ ದೊಡ್ಡವರಿಗಿಬಿಡ್ತೇವೆ ಎನ್ನುವ ಹುಚ್ಚು ಭ್ರಮೆಯಲ್ಲಿದ್ದು, ಇದರಿಂದ ಹಲವು ಬಾರಿ  ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ನೀವು ದೇಶ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸಬೇಕು  ಎಂದು ಹೇಳಿದ್ದಾರೆ.

Koppal: Prime Minister Narendra Modi has given advice in the interest of the country’s economy, and MP Hitnal himself will not listen to the difficulties and will not listen to them. This is not the time to make sarcasm, BJP District President Naveen Kumar Gulagan said in a statement.

Emergency means that the country will face an uncertain time. Due to the war in the Middle East, the world is facing economic difficulties. Therefore, Prime Minister Narendra Modi addressed the people of the country and gave advice to the people to face such a situation. Whenever the country faced difficulties, the people of the country followed the advice given by Modi. That is why it was possible to face the pandemic called Corona in our country.

The people of this country have put their trust in Narendra Modi and given him a third chance. Therefore, what advice and instructions did he give? The MPs should know that it is in the interest of the country.

People are appreciating his statements. In the past, when the wealthy gave a call to give up LPG subsidy, 1 crore people gave up the subsidy. It gave economic strength to the country. There are many such examples.

Due to the war in the Middle East, trade through the Strait of Hormuz is being hampered. This is increasing our import bill. A small saving by every Indian can save the country’s economy from a big problem.”

These eight principles are not government orders. Rather, it is the responsibility of every citizen to keep India safe in the changing global map.

The Congress is under the delusion that if Modi is always criticized, he will be defeated by the big guys, which is why he often makes such irresponsible statements. He said that you, who are in a responsible position, should think about the economic condition of the country.

Get real time updates directly on you device, subscribe now.

Leave A Reply

Your email address will not be published.

error: Content is protected !!