Black Belt Distribution to Trainers ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ವಿತರಣೆ

0

Get real time updates directly on you device, subscribe now.

ಕೊಪ್ಪಳ: ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಲಾಯಿತು.

ಈ ತರಬೇತಿ ಮತ್ತು ಪರೀಕ್ಷೆಯಲ್ಲಿ ಕೊಪ್ಪಳದಿಂದ ಭಾಗವಹಿಸಿದ್ದ ದೇವಪ್ಪ ಕಲ್ಲನವರ ಬ್ಲಾಕ್ ಬೆಲ್ಟ್ 3 ಡಾನ್, ತಿರುಮಲ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಮತ್ತು ರೇಣುಕಾ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಪಡೆದುಕೊಂಡಿದ್ದು ಅವರಿಗೆ NSKAI ಸಂಸ್ಥೆಯ ಮುಖ್ಯಸ್ಥರಾದ ಶಿಹಾನ್ ಸಂಜಯ ಇಂಗೋಲೆ ರವರು ಬ್ಲಾಕ್ ಬೆಲ್ಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ NSKAI ಕರ್ನಾಟಕದ ಅಧ್ಯಕ್ಷರಾದ ಶನ್‌ಸಾಯ್ ಡಿ, ಬಾಷಾ ಸಾಹೇಬ್ ಉಪಸ್ಥಿತರಿದ್ದರು.

ಬ್ಲಾಕ್ ಬೆಲ್ಟ್ ಪಡೆದ ತರಬೇತುದಾರರಿಗೆ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮುಖಂಡರಾದ ಯಮನೂರಪ್ಪ ನಾಯಕ, ರಾಜಬಕ್ಷಿ ಎಚ್, ವಿ ಸೇರಿದಂತೆರ ವಿಧ್ಯಾರ್ಥಿಗಳು ಶುಭಕೋರಿದ್ದಾರೆ.

 

 

Get real time updates directly on you device, subscribe now.

Leave A Reply

Your email address will not be published.

error: Content is protected !!