ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ: ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ಫ್ರಾನ್ಸಿಸ್ ದಾಂತಿ ಪುರಸ್ಕಾರ 

0

Get real time updates directly on you device, subscribe now.

ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ.
2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ಉಡುಪಿ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಅವರ *ಸಖಿ ಸೂಸಿದ ಸೌಗಂಧ* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.
25 ಸಾವಿರ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬುಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದ
ವತಿಯಿಂದ ನಿರಂತರ ಸಾಹಿತ್ಯ  ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನ ದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆಯ ಸದ್ದಿಲ್ಲದ ಸೇವೆಯನ್ನು ಗುರುತಿಸಿ   ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ನೀಡಿ ಗೌರವಿಸಿ ದ್ದನಿಲ್ಲಿ  ಸ್ಮರಿಸಬಹುದು.
ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಫ್ಲಾವಿಯಾ ರಿಗೆ  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

Get real time updates directly on you device, subscribe now.

Leave A Reply

Your email address will not be published.

error: Content is protected !!