ಶ್ರೀ ಗವಿಮಠದದ ಒಳ ಆವರಣದಲ್ಲಿ ದಿ ೧೫ ರಂದು ಶುಕ್ರವಾರ ಬೆಳಗಿನ ಜಾವ ಅಯ್ಯಚಾರ (ಲಿಂಗದಿಕ್ಷೆ) ಕಾರ್ಯಕ್ರಮ
ದಿ ೧೫ ರಂದು ಶುಕ್ರವಾರ ಬೆಳಗಿನ ಜಾವ ಅಯ್ಯಚಾರ (ಲಿಂಗದಿಕ್ಷೆ) ಕಾರ್ಯಕ್ರಮ
ನಂತರ ಬೆಳಿಗ್ಗೆ ೦೯;೦೦ರಿಂದ ೧೧;೩೦ರ ವರೆಗೆ ಶ್ರೀ ಗವಿಮಠದದ ಒಳ ಆವರಣದಲ್ಲಿ ಅಕ್ಷರ ಅಭ್ಯಾಸ ಕಾರ್ಯಕ್ರಮವು ನಡೆಯಲಿದೆ

ಕೊಪ್ಪಳ- ಶ್ರೀ ಗವಿಮಠದ ಪ್ರತಿವರ್ಷ ಜರುಗುವ ಸಂಪ್ರಾದಾಯಿಕ ಕಾರ್ಯಕ್ರಮಗಳಲ್ಲಿ ಒಂದಾದ ಅಕ್ಷರ ಅಭ್ಯಾಸ ಕಾರ್ಯಕ್ರಮವು ದಿನಾಂಕ ೧೫.೦೫.೨೦೨೬ರಂದು ಶುಕ್ರವಾರ ಬೆಳಿಗ್ಗೆ ೦೯;೦೦ರಿಂದ ೧೧;೩೦ರ ವರೆಗೆ ಶ್ರೀ ಗವಿಮಠದದ ಆವರದಲ್ಲಿ ನಡೆಯಲಿದೆ.
ಸಂಸ್ಥಾನ ಗವಿಮಠದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹೊಸದಾಗಿ ಶಾಲೆಗೆ ಪ್ರವೇಶ ಪಡೆಯುವದಕ್ಕಿಂತ ಮುಂಚಿತವಾಗಿ ಶ್ರೀ ಗವಿಸಿದ್ಧೇಶ್ವರನ ಸಾನಿದ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಿ, ಅವರ ಉಜ್ವಲ ಹಾಗೂ ಸಂಸ್ಕಾರಯುತ ಜೀವನಕ್ಕಾಗಿ ಶ್ರೀ ಗವಿಸಿದ್ಧೇಶ್ವರನಲ್ಲಿ ಪ್ರಾರ್ಥಿಸುವ ಮೂಲಕ ಶಾಲೆಗೆ ಕಳುಹಿಸುವ ಶ್ರೀ ಮಠದ ಸಾಂಪ್ರದಾಯಿಕ ನಂಬಿಕೆ ಕಾರ್ಯಕ್ರಮ ಇದಾಗಿದೆ.
ಕೊಪ್ಪಳ ಜಿಲ್ಲೆಯಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ತಮ್ಮ ಮಕ್ಕಳೊಂದಿಗೆ ಆಗಮಿಸುವರು ಅಕ್ಷರಾಭ್ಯಾಸ ಮಾಡಿಸಿ ನಂತರ ಮಠದ ದಾಸೋಹ ಭವನದಲ್ಲಿ ಪ್ರಸಾದವನ್ನು ಸ್ವೀಕರಿಸಿ ಪುನಿತರಾಗುವರು..
ವಿಶೇಷ ಸೂಚನೆ: ಪಾಲಕರು ತಮ್ಮ ಮಕ್ಕಳೊಂದಿಗೆ ಹೊಸ ನೋಟ್ ಬುಕ್, ಪೆನ್ ಅಥವಾ ಹೊಸ ಪಾಟಿ, ಪೆನ್ಸಿಲ್ ತರಬೇಕು.