ಕೊಪ್ಪಳದಲ್ಲಿ ಮೇ.೨ರಂದು ಎಸ್ಐಆರ್ ಜಾಗೃತಿ ಕಾರ್ಯಕ್ರಮ

ಕೊಪ್ಪಳ : ಮೇ ಸಾಹಿತ್ಯ ಮೇಳ ಕೊಪ್ಪಳ ಬಳಗ ಹಾಗೂ ಮಾನವ ಬಂದುತ್ವ ವೇದಿಕೆ, ದಲಿತ ಸಂಘಟನೆಗಳು ಅಲ್ಪಸಂಖ್ಯಾತರ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಮೇ ೨ ರಂದು ಸಂಜೆ ೩:೩೦ ಕ್ಕೆ ಸಾಹಿತ್ಯ ಭವನದಲ್ಲಿ ಎಸ್ಐಆರ್ ವಿರೋಧಿಸಿ ಎಸ್ಐಆರ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡ ಟಿ ರತ್ನಾಕರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯ ಚಿಂತಕ ಶಿವಸುಂದರ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಹಿರಿಯ ಲೇಖಕರಾದ ಕುಂ ವೀರಭದ್ರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ವಿಶೇಷ ಮತದಾರರ ಪರಿಷ್ಕರಣೆ ಹೆಸರಿನಲ್ಲಿ ಮತದಾರರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದಲ್ಲಿ ನಡೆದಂತಹ ಎಸ್ಐಆರ್ ಕರ್ನಾಟಕದಲ್ಲಿಯು ಬರಬಹುದು. ಹೀಗಾಗಿ sir ವಿರುದ್ಧ ಅದನ್ನು ವಿರೋಧಿಸಿ ಜನಾಂದೋಲನವನ್ನು ರೂಪಿಸುತ್ತೇವೆ ಅದರ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮತ ಪಟ್ಟಿಯ ಮೂಲಕ ಪೌರತ್ವವನ್ನು ನಿರಾಕರಿಸುವಂತಹ ಕೆಲಸ ನಡೆಯುತ್ತಿದೆ ಅದನ್ನು ನಾವು ವಿರೋಧಿಸುತ್ತೇವೆ . ಈ ಹಿಂದೆ ಸರಳವಾಗಿ ಪರಿಷ್ಕರಣೆ ನಡೆಯುತ್ತಿತ್ತು . ಈಗ ನಡೆಯುತ್ತಿರುವ ಪರಿಷ್ಕರಣೆಯಿಂದ ದಲಿತರು ಅಲ್ಪಸಂಖ್ಯಾತರು ಆದಿವಾಸಿಗಳು ಈ ಹೊಸ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಹೀಗಾಗಿ ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ದಲಿತ ಮುಖಂಡ ಶುಕ್ರರಾಜ್ ತಾಳಕೇರಿ ಚುನಾವಣೆಯ ಸಂದರ್ಭದಲ್ಲಿ ಪರಿಷ್ಕರಣೆ ಮಾಡುವುದು ಸಹಜ ಪ್ರಕ್ರಿಯೆ ಆದರೆ ಈಗ ವಿಶೇಷ ಪರಿಷ್ಕರಣೆ ಎನ್ನುವ ನೆಪದಲ್ಲಿ ಪೌರತ್ವದ ಪ್ರಶ್ನೆಯನ್ನು ಇಟ್ಟುಕೊಂಡು ಅವರು ಈಗ ಪರಿಷ್ಕರಣೆ ಮಾಡುತ್ತಿದ್ದಾರೆ. ನುಸುಳು ಕೊರರು ಜಾಸ್ತಿಯಾಗಿದ್ದಾರೆ ಎನ್ನುತ್ತಿದ್ದಾರೆ. ಆಗಿದ್ದಾರೆ ಇದು ಯಾರ ವೈಫಲ್ಲ ಎಂದು ಶುಕ್ರ ತಾಳಕೇರಿ ಪ್ರಶ್ನೆ ಮಾಡಿದರು. ಸಂವಿಧಾನದಲ್ಲಿ ಪೌರತ್ವದ ಬಗ್ಗೆ ಬಗ್ಗೆ ಸಾಕಷ್ಟು ಕಾನೂನುಗಳಿವೆ ಪೌರತ್ವವನ್ನು ಕೇಳುವುದಕ್ಕೆ, ನಿರ್ಧರಿಸುವುದಕ್ಕೆ ಚುನಾವಣಾ ಆಯೋಗಕ್ಕೆ ಯಾವ ಅಧಿಕಾರವಿದೆ ?
ದಲಿತರು ಹಾಗೂ ಅಲ್ಪಸಂಖ್ಯಾತರಂ ಗುರಿಯಾಗಿಸಿಕೊಂಡು ಅವರ ವಿರೋಧಿ ಕಾನೂನುಗಳನ್ನು ಸರಕಾರ ತರುತ್ತಿದೆ. ಅದರ ಭಾಗವೇ ಎಸ್ಐಆರ್ ಇದನ್ನೂ ವಿರೋಧಿಸಿ ಜನಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಎಸ್ಐಆರ್ ವಿರುದ್ಧ ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಹೇಳಿದರು.
ಸಂವಿಧಾನಾತ್ಮಕವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಪರಿಷ್ಕರಣೆಯನ್ನು ನಾವು ಒಪ್ಪಿಕೊಳ್ಳುತ್ತೇವೆ. ಸೇರ್ಪಡೆಗೊಳಿಸುವುದು ಹಾಗೂ ತೆಗೆದು ಹಾಕುವ ಪ್ರಕ್ರಿಯೆ ಸಾಮಾನ್ಯವಾಗಿತ್ತು ಆದರೆ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ ಪೌರತ್ವವನ್ನು ಕಸಿಯುವಂತಹ ಕೆಲಸ ನಡೆಯುತ್ತಿದೆ ಇದನ್ನು ನಾವು ವಿರೋಧಿಸುತ್ತೇವೆ ಎಂದು ಡಬ್ಲ್ಯೂಪಿಐ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಸಬಿಹಾ ಪಟೇಲ್ ಹೇಳಿದರು.
ಈಗ ನಡೆದಿರುವ ಪ್ರಕ್ರಿಯೆ ಸಂವಿಧಾನಾತ್ಮಕವಲ್ಲ ಇದರಿಂದಾಗಿ ಮಹಿಳೆಯru ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ಎನ್ ಆರ್ ಸಿ ಹಾಗೂ ಸcaa ಪುನಾರವನ್ನು ಇಟ್ಟುಕೊಂಡು ಸರ್ಕಾರ ಜಾರಿಗೆ ತರುತ್ತಿದೆ. ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ದಲಿತರನ್ನು ಮತದಾನದಿಂದ ವಂಚಿತಗೊಳಿಸಬೇಕು ಎನ್ನುವ ಉದ್ದೇಶ ಹೊಂದಿದೆ ಆದರಿಂದ ಇದನ್ನು ನಾವು ವಿರೋಧಿಸುತ್ತಿದ್ದೇವೆ, ಇದರ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಕಾರ್ಯಕ್ರಮ ನಡೆಯುತ್ತಿದ್ದು ಇದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ವಿನಂತಿಸಿಕೊಂಡರು.
ದಲಿತರು, ಮುಸ್ಲಿಮರು, ದುಡಿಯುವ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಎಸ್ಐ ಆರ್ ಮಾಡಲಾಗುತ್ತಿದೆ ದುಡಿಯುವ ವರ್ಗವನ್ನು ಕೇವಲ ದುಡಿಮೆಗೆ ಹಚ್ಚುವ ನಿಟ್ಟಿನಲ್ಲಿ ಎಸ್ಆರ್ ಜಾರಿ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿ ವರ್ಷ ಎಸ್ ಆರ್ ಅನ್ನು ಮಾಡಲಾಗುತ್ತಿತ್ತು. ಆದರೆ ಈಗ ಸ್ಪೆಷಲ್ ಎಸ್ಐ ಮಾಡಲಾಗುತ್ತಿದೆ ಏನು ಇದರ ವಿಶೇಷತೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ ದುಡಿಯುವ ವರ್ಗದಲ್ಲಿ ಯಾವುದೇ ದಾಖಲಾತಿಗಳು ಸಿಗೋದಿಲ್ಲ. ಇವರನ್ನು ಸರಳವಾಗಿ ಮತದಾರ ಪಟ್ಟಿಯಿಂದ ಬಿಟ್ಟುಬಿಡುವುದು ಎನ್ನುವ ನಿಟ್ಟಿನಲ್ಲಿ ಎಸ್ಐ ಆರ್ ಮಾಡಲಾಗುತ್ತದೆ ಇದನ್ನು ನಾವು ವಿರೋಧಿಸುತ್ತೇವೆ ಎಂದು ಫಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪಣ್ಣವರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ ಎ ಗಫಾರ್, ಮಾನವ ಬಂಧುತ್ವ ವೇದಿಕೆಯ ವಿಭಾಗಿಯ ಸಂಚಾಲಕ ಭೀಮಣ್ಣ ಹವಳೇ, ಆಮ್ ಆದ್ಮಿ ಪಾರ್ಟಿಯ ಶರಣು ಶೆಟ್ಟರ್, ಬಹುತ್ವ ಬಳಗದ ರಾಜಭಕ್ಷಿ ಎಚ್ ವಿ, ಡಬ್ಲ್ಯೂ ಪಿ ಐ ಪಕ್ಷದ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.