ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮ್, ಆರ್ ದೇವದಾಸ್ ಅವರಿಂದ ಜಂಟಿ ಪತ್ರಿಕಾಗೋಷ್ಠಿ

Get real time updates directly on you device, subscribe now.

 ಸುಪ್ರೀಂ ಕೋರ್ಟ ಅಂಗಳ ತಲುಪಿದ ವ್ಯಾಜ್ಯ ಪರಿಹಾರಕ್ಕೆ ವಿಶೇಷ ಅವಕಾಶ

ಕೊಪ್ಪಳ ಏಪ್ರಿಲ್ 30  : ಸರ್ವೊಚ್ಚ ನ್ಯಾಯಾಲಯದ ( ಸುಪ್ರಿಂ ಕೋರ್ಟ) ಅಂಗಳ ತಲುಪಿದ ಯಾವುದೇ ಬಗೆಯ ವ್ಯಾಜ್ಯಗಳ ಪರಿಹಾರಕ್ಕಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ವೋಚ್ಛ ನ್ಯಾಯಾಲಯವು ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಹೈಕೋರ್ಟನ ನ್ಯಾಯಮೂರ್ತಿ ಗೌರವಾನ್ವಿತ ಅನು ಶಿವರಾಮ್ ಅವರು ಹೇಳಿದರು.
ಬೆಂಗಳೂರಿನ ಹೈಕೋರ್ಟ ಸಭಾಂಗಣದಲ್ಲಿ ಏಪ್ರಿಲ್ 30ರಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಆಗಸ್ಟ್ 21, 22 ಮತ್ತು 23ರಂದು ಅಭಿಯಾನ ನಡೆಯಲಿದ್ದು, ರಾಜ್ಯದ ಯಾವುದೇ ಭಾಗದಲ್ಲಿನ ಪಕ್ಷಗಾರರು ತಾವು ಇರುವ
ಸ್ಥಳದಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ವ್ಯಾಜ್ಯ ಪರಿಹಾರ ಮಾಡಿಕೊಳ್ಳಬಹುದು. ಪಕ್ಷಗಾರರಿಬ್ಬರು ಒಂದೆಡೆ ಸೇರಿ ವ್ಯಾಜ್ಯ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಅಭಿಯಾನ ಹಿನ್ನೆಲೆಯಲ್ಲಿ
ಎಲ್ಲ ಕಡೆಗಳಲ್ಲಿ ಈಗಾಗಲೇ
4328 ಕೇಸಗಳನ್ನು ಗುರುತಿಸಿದ್ದೇವೆ. ಜನತೆಯ
ಸಮಯ ಮತ್ತು ಖರ್ಚು ವೆಚ್ಚ ಉಳಿಸಬೇಕು ಎಂದು ಯೋಜಿಸಿ ಅಭಿಯಾನ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟನ ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಅವರು ಮಾತನಾಡಿ, ಈ ಅಭಿಯಾನ ಸರ್ವೊಚ್ಚ ನ್ಯಾಯಾಲಯದ ಐತಿಹಾಸಿಕ
ಪ್ರಥಮ ಪ್ರಯತ್ನವಾಗಿದೆ. ಬಹುವರ್ಷಗಳಿಂದ ನ್ಯಾಯಕ್ಕೆ ಕಾಯುತ್ತಿರುವ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಉದ್ದೇಶಿಸಿ ಸರ್ವೋಚ್ಚ ನ್ಯಾಯಾಲಯವು ದಿಟ್ಟ ಹೆಜ್ಜೆ ಇಟ್ಟು ವ್ಯಾಜ್ಯ ವಿಲೇವಾರಿ ವಿಶೇಷ ಅಭಿಯಾನ (ಸ್ಪೆಷಲ್ ಡ್ರೈವ್) ಹಮ್ಮಿಕೊಂಡಿದೆ.
ಸುಪ್ರೀಂಕೋರ್ಟನಲ್ಲಿರುವ ವ್ಯಾಜ್ಯಗಳ ಪರಿಹಾರಕ್ಕಾಗಿ ಮಾತ್ರ ಈ ಅಭಿಯಾನ ಹಮ್ಮಿಕೊಂಡಿದೆ.
ಸುಪ್ರಿಂ ಕೋರ್ಟನಲ್ಲಿ ನಿಮ್ಮ ನಿಮ್ಮ ಕೇಸ್ ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಇದೊಂದು ಸದವಕಾಶ ಎಂದು ಸಾರ್ವಜನಿಕರಿಗೆ ಸಂದೇಶ ಹೋಗಬೇಕು. ಈ ಅಭಿಯಾನದ ಸಂದೇಶವು
ರಾಜ್ಯದ ಜನತೆಗೆ ತಲುಪಬೇಕು. ಜನತೆಗೆ ಸಹಾಯ ಆಗಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದು ಅವರು ತಿಳಿಸಿದರು.
ಆಯಾ ಜಿಲ್ಲೆಗಳಲ್ಲಿ ಆಗಸ್ಟ್ 21ರಿಂದ ಮೂರು ದಿನಗಳ ಕಾಲ ಆಯಾ ಜಿಲ್ಲೆಯ
ಪ್ರಧಾನ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ವ್ಯಾಜ್ಯ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ಅಗತ್ಯ ಏರ್ಪಾಡು ಮಾಡಲಿದ್ದಾರೆ. ನಾನು ನನ್ನ ಕೇಸನ್ನು ಬಗೆ ಹರಿಸಿಕೊಳ್ಳಲು ಇಚ್ಚಿಸಿದ್ದೇನೆ ಎಂದು ಪಕ್ಷಗಾರರು ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿದಲ್ಲಿ ವ್ಯಾಜ್ಯ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಈ‌ ವಿಷಯದಲ್ಲಿ ವಕೀಲರು
ಅಡ್ಡಿ ಪಡಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಹಾಗೂ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!