ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಶ್ರೀಘ್ರ ಪ್ರಾರಂಭ ಮಾಡಿ – ನವೀನಕುಮಾರ್ ಗುಳಗಣ್ಣವರ ಒತ್ತಾಯ

koppal : ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಪ್ರಾರಂಭವಾಗಬೇಕಿದ್ದ ಇನ್ನೂವರೆಗೂ ಪ್ರಾರಂಭ ಆಗದಿರುವುದು ಖೇದನಿಯ ಸಂಗತಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ – ನವೀನಕುಮಾರ್ ಗುಳಗಣ್ಣವರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವರು ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ಗೊಳ್ಳುವವರೆಗೂ ಯಾತಸ್ಥಿತಿ ಮನರೇಗಾ ನಿಲ್ಲಿಸಿಬಾರದೆಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ, ಅದಾಗಿಯೂ ನಮ್ಮ ಜಿಲ್ಲೆಯಲ್ಲಿ ಜನ ಗುಳೆ ಹೋಗುವದು ಪ್ರಾರಂಭವಾದರೂ ಇನ್ನು ಕೂಡ ಜಿಲ್ಲಾ ಪಂಚಾಯತ್ ಮನರೇಗಾ ಗೆ ಚಾಲನೆ ಸಿಕ್ಕಿಲ್ಲ, ಉದ್ಯೋಗ ಬೇಡಿ ಪಂಚಾಯತಿಗಳಿಗೆ ಜನ ಫಾರಂ 6 ಸಲ್ಲಿಸಲು ಹೋದರೆ ಗ್ರಾಮ ಪಂಚಾಯಿತಿಗಳಿಂದ ಏನು ಸ್ಪಂದನೆ ಇಲ್ಲ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆ ಯು ವೇತನ ಪವತಿಗೆ ರಾಜ್ಯಕ್ಕೆ 17744 ಕೋಟಿ ಬಿಡುಗಡೆ ಮಾಡಿ, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಬಾರದೆಂದು ಸೂಚಿಸಿದ್ದರು ರಾಜ್ಯ ಸರಕಾರ ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ.
ನಮ್ಮ ಜಿಲ್ಲೆಯಲ್ಲಿ ಈ ತಿಂಗಳು 10 ಲಕ್ಷ. ಮಾನವ ದಿನಗಳ ಟಾರ್ಗೆಟ್ ಇದ್ದರೂ ಕೂಡ ಇಲ್ಲಿಯವರೆಗೂ 1 ಲಕ್ಷ ಮಾನವ ದಿನಗಳು ಆಗಿಲ್ಲ. ಇದೆ ಪರಿಸ್ಥಿತಿ ಜಿಲ್ಲೆಯಲ್ಲಿ ಮುಂದೆ ವರಿದರೆ ಜನ ಗುಳೆ ಹೋಗಲು ಪ್ರಾರಂಭ ವಾಗುತ್ತೆ. ಜಿಲ್ಲಾ ಆಡಳಿತ ಬೇಗ ಮನರೇಗಾ ಯೋಜನೆ ಪ್ರಾರಂಭವಾಗದಿದ್ದರೆ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಂದ ದೊಡ್ಡ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
Comments are closed.