ಬಸವಣ್ಣನವರ ವಚನಗಳು ಸರ್ವ ವ್ಯಾಪಿ ಸರ್ವಸ್ಪರ್ಶಿ -ನವೀನಕುಮಾರ್ ಈ ಗುಳಗಣ್ಣವರ
ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಸವ ಜಯಂತಿಯ ಕಾರ್ಯಕ್ರಮದಂದು ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಗುಳಗಣ್ಣವರ ಮಾತನಾಡಿ ಸಮಾಜದಲ್ಲಿ ಸಮಾನತೆ, ಸತ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಸಂತ ಹಾಗೂ ಸಮಾಜ ಸುಧಾರಕ ಬಸವಣ್ಣವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣರು 12ನೇ ಶತಮಾನದಲ್ಲಿ ಜಾತಿ ಬೇಧ, ಅಸಮಾನತೆ ಮತ್ತು ಅಂಧಶ್ರದ್ಧೆಗಳ ವಿರುದ್ಧ ಹೋರಾಡಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.
ಅವರ “ಕಾಯಕವೇ ಕೈಲಾಸ” ಎಂಬ ಸಂದೇಶವು ಪ್ರತಿಯೊಬ್ಬ ವ್ಯಕ್ತಿಯು ಶ್ರಮದ ಮಹತ್ವವನ್ನು ಅರಿತು, ಸ್ವಾಭಿಮಾನದಿಂದ ಜೀವನ ನಡೆಸಬೇಕು ಎಂಬುದನ್ನು ಸಾರುತ್ತದೆ. ಬಸವಣ್ಣರು ಸ್ಥಾಪಿಸಿದ ಅನುಭವ ಮಂಟಪವು ಪ್ರಜಾಪ್ರಭುತ್ವದ ಮೊದಲ ಮಾದರಿಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ, ಅಲ್ಲಿ ಎಲ್ಲ ವರ್ಗದ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಹೊಂದಿದ್ದರು.

ವಿಧಾನಪರಿಷತ್ ಸದಸ್ಯ ಹೇಮಲತಾ ನಾಯಕ ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳೊಂದಿಗೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ದೇಯದೊಂದಿಗೆ ಆಡಳಿತ ಮಾಡುತ್ತಿದ್ದಾರೆ. ಜನರು ಬಸವಣ್ಣನವರ ತತ್ವಗಳನ್ನು ಪಾಲಿಸಿದರೆ ಸಾರ್ಥಕ ಬದುಕನ್ನು ಕಟ್ಟಬಹುದು. ಮಾಜಿ ಜಿಲ್ಲಾ ಅಧ್ಯಕ್ಷರಾದ ವಿ ಎಸ್ ಬೂಸನೂರಮಠ ಮಾತನಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಸುನಿಲ್ ಹೆಸರೂರು, ನಗರ ಮಂಡಲದ ಅಧ್ಯಕ್ಷರಾದ ಶ್ರೀ ಅಮರೇಶ್ ಮುರಳಿ, ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ರಮೇಶ್ ಕವಲೂರ್, ದೇವರಾಜ ಹಾಲಸಮುದ್ರ, ಪ್ರಶಾಂತ್ ಕಿನ್ನಾಳ, ಚನ್ನಬಸವ ಗಾಳಿ ಶ್ರೀಮತಿ ಮಹಾಲಕ್ಷ್ಮೀ ಕಂದಾರಿ, ಜಯಶ್ರೀ ಗೊಂಡಬಾಳ, ಬಸವರೆಡ್ಡಿ ಬೈರಾಪುರ, ಪಂಪಯ್ಯ ಹಿರೇಮಠ್, ಫಕೀರಪ್ಪ ಅರೆರ್, ಸೇರಿದಂತೆ ಪಕ್ಷದ ಹಿರಿಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು