ವಾರ್ತಾ ಇಲಾಖೆಯಿಂದ ರಾಜ್ ಸಂಭ್ರಮ: ಹೆಸರು ನೋಂದಣಿಗೆ ಏಪ್ರೀಲ್ 22ರವರೆಗೆ ಅವಕಾಶ
: ವರನಟ ಡಾ.ರಾಜಕುಮಾರ ಜನ್ಮದಿನಾಚರಣೆಯ ನಿಮಿತ್ತ ನಗರದ ಸಾಹಿತ್ಯ ಭವನದಲ್ಲಿ ಏಪ್ರೀಲ್ 24ರಂದು ಸಂಜೆ 5.30ಕ್ಕೆ ಹಮ್ಮಿಕೊಂಡ ಡಾ.ರಾಜ್ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅವರ ಚಲನಚಿತ್ರ ಗೀತೆಗಳನ್ನು ಹಾಡಲು ಆಸಕ್ತ ಸಾರ್ವಜನಿಕರಿಗೆ ಮತ್ತು ಡಾ.ರಾಜಕುಮಾರ ಅವರ ಸಿನಿಮಾದ ಡೈಲಾಗ್ (ಮಿಮಿಕ್ರಿ) ಹೇಳಲು ಆಸಕ್ತ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದ್ದು, ಹೆಸರು ನೋಂದಣಿಗೆ ಏಪ್ರೀಲ್ 22ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಕೊಪ್ಪಳ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ಡಾ.ರಾಜ್ ಸಂಭ್ರಮದಲ್ಲಿ ಕರೋಕೆ ಹಾಡುಗಾರರಿಗೆ ಆದ್ಯತೆ ನೀಡಲಾಗುವುದು. ಡಾ.ರಾಜಕುಮಾರ ಅಭಿಮಾನಿಗಳು ಯಾರೇ ಇದ್ದರೂ ಎಲ್ಲರಿಗೂ ಅವಕಾಶವಿದ್ದು, ವಯಸ್ಸಿನ ಮಿತಿ ಇರುವುದಿಲ್ಲ. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶವಿದ್ದು, ತಮ್ಮ ಹೆಸರು ಮತ್ತು ಪೂರ್ಣವಿಳಾಸ ನೋಂದಾಯಿಸಲು ಜಿಲ್ಲಾ ವಾರ್ತಾಧಿಕಾರಿಗಳು ಮೊ: 9916111356 ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು ಮೊಬೈಲ್ 9886922815 ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮನವಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವ ಹಾಡುಗಾರರು, ಕಲಾವಿದರು, ಸಾರ್ವಜನಿಕರು ಸ್ವಂತ ಖರ್ಚಿನಲ್ಲೇ ಬರತಕ್ಕದ್ದು. ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ಮಾತ್ರ ಗೌರವವಾಗಿ ಕೊಡಲಾಗುತ್ತದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.