ಅಂಬೇಡ್ಕರ್ ಬದುಕು ಎಲ್ಲರಿಗೂ ಆದರ್ಶ -ಡಾ.ಪ್ರಭುರಾಜ ನಾಯಕ

ಕೊಪ್ಪಳ : ನಗರದಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿಕರ್ನಾಟಕರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಜಯAತಿಆಚರಿಸಲಾಯಿತು.

ವೇದಿಕೆ ಕಾರ್ಯಕ್ರಮಆರಂಭಕ್ಕೂ ಮುನ್ನಅಂಬೇಡ್ಕರ್ ಗೀತೆಗಳನ್ನು ಶಂಕರ ಬಿನ್ನಾಳ ರಚನೆ ಸಂಗೀತ ಸಂಯೋಜನೆಯಲ್ಲಿ ಹಾಡಿದರು. ಬುದ್ಧಧ್ಯಾನ, ಸಂಗೀತಜುಗಲಬAದಿ ಜರುಗಿತು. ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‌ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶಿಕ್ಷಣ ,ಸಂಘಟನೆ, ಹೋರಾಟ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನೆ ಬಳಿಕ ಉಪನ್ಯಾಸ ಮಾಡಿದಡಾ.ಪ್ರಭುರಾಜ ನಾಯಕ ಮಾತನಾಡಿಕಡ್ಡಾಯ ಶಿಕ್ಷಣ ನಮ್ಮ ಸಂವಿಧಾನದಆಶಯವಾಗಿದೆ. ಆದರೆಇಲ್ಲಿ ಬಡಮಕ್ಕಳು ಹಾಗೂ ಉಳ್ಳವರ ಮಕ್ಕಳು ಓದುವ ಶಾಲೆ ಬೇರೆ ಬೇರೆಯಾಗಿವೆ. ಈ ವ್ಯವಸ್ಥೆ ವ್ಯದ್ಯಕೀಯ ಆಸ್ಪತ್ರೆಗಳಲ್ಲೂ ಮುಂದುವರೆದಿದೆ. ಇದರಿಂದ ಸಮಾನ ಅವಕಾಶಗಳು ದೊರೆಯುವುದಾದರೂ ಹೇಗೆ. ಸ್ವತಹಡಾ.ಬಿ.ಆರ್,ಅಂಬೇಡ್ಕರ್‌ಅವರಜೀವಿತಾವಧಿಯಲ್ಲಿಗರ್ಭಿಣಿಗೆಚಿಕೆತ್ಸೆಕೊಡಿಸಲು ವೈದ್ಯರು ಬಾರದೆಇರುವಾಗಅಂಬೇಡ್ಕರ್‌ಅವರು ಪರಿಚಿತ ವೈದ್ಯರನ್ನುತಮ್ಮ ಮನೆಗೆ ಕರೆದುಕೊಂಡು ಬಂದಾಗಲೂಅವರನ್ನು ಸ್ಪರ್ಶಿಸಿ ಚಿಕಿತ್ಸೆ ನೀಡಲು ವೈದ್ಯರು ಮುಂದಾಗದೆಇರುವಕಾರಣಚಿಕಿತ್ಸೆ ಫಲಕಾರಿಯಾಗದೆಗರ್ಭಿಣಿ ಮಹಿಳೆ ಕೊನೆಯುಸಿರೆಳೆದರು. ಬಾಬಾಸಾಹೇಬರುಕಂಡ ಪ್ರಜಾಪ್ರಭುತ್ವಇದಲ್ಲ ಪ್ರಜಾಪ್ರಭುತ್ವದಾರಿತಪ್ಪಿಸುವಕೆಲಸ ವ್ಯವಸ್ಥಿತವಾಗಿ ನಡೆದಿದೆ. ಭಾರತ ಭಾಗ್ಯ ವಿಧಾತ, ಬಾಬಾಸಾಹೇಬರ ಬದುಕುಎಲ್ಲರಿಗೂಆದರ್ಶಎಂದರು.
ವಿವಿಧಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಸನ್ಮಾನ
ಶರಣಪ್ಪಗೌಡ ಹ್ಯಾಟಿಶಿಕ್ಷಕರು ಹ್ಯಾಟಿ.ಸೇವೆ ಸಲ್ಲಿಸಿದ ಶಾಲೆಗೆ, ಶಾಲಾ ಮಕ್ಕಳ ಅನುಕೂಲಕ್ಕೆ ಏನಾದರೂ ಮಾಡಬೇಕುಎಂದು ಸುಮಾರು ೭೫ ಸಾವಿರ ರೂಪಾಯಿಗಳ ಸ್ವಂತ ಹಣದಲ್ಲಿ ವ “ಸಾಂಸ್ಕೃತಿಕ ಕಲಾ ವೇದಿಕೆ ನಿರ್ಮಾಣ ಮಾಡಿ ಮಾದರಿಆಗಿದ್ದಾರೆ.
ಪಂಡಿತ್ ಶಂಕರ್ ಬಿನ್ನಾಳ ಪುಟ್ಟರಾಜ ಗವಾಯಿಗಳವರ ಅತ್ಯಾಪ್ತ ಶಿಷ್ಯರಲ್ಲಿ ಒಬ್ಬರಾಗಿರುವ ಶಂಕರ್ ಬಿನ್ನಾಳ್ ತಬಲಾ, ಗಾಯನ, ಮತ್ತು ವಾದನದಲ್ಲಿ ವಿದ್ವತ್ ನ್ನ ಹೊಂದಿದ್ದಾರೆ. ಸುಮಾರು ೧೨ ವರ್ಷಗಳ ಕಾಲ ಗುರುಕುಲ ಪರಂಪರೆಯಲ್ಲಿ ಸಂಗೀತಅಭ್ಯಾಸವನ್ನು ಮಾಡಿ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ೧೫೦೦ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಭಾಗ್ಯನಗರದಲ್ಲಿ ಸಂಗೀತ ಪಾಠಶಾಲೆಯನ್ನುತೆರೆದು ಅನೇಕ ಬಡ ಮಕ್ಕಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಇವರ ಸೇವೆ, ಸಂಗೀತ ವಿದ್ವತ್ತನ್ನು ಪರಿಗಣಿಸಿ ರಾಜ್ಯ ಸರ್ಕಾರ “ಕರ್ನಾಟಕರಾಜ್ಯೋತ್ಸವ “ಪ್ರಶಸ್ತಿಯನ್ನು ೨೦೧೧ ರಲ್ಲಿ ನೀಡಿ ಗೌರವಿಸಿದೆ.
ನಾಗಪ್ಪಕನಕಾಪುರಮೂಲತ ಕೊಪ್ಪಳ ತಾಲೂಕಿನಗಿಣಿಗೇರಗ್ರಾಮದವರಾದಇವರು ಪ್ರಸ್ತುತಕುಕನೂರ ಪೊಲೀಸ್‌ಠಾಣೆಯಲ್ಲಿ ಪಿ ಎಸ್ ಐ (ಠಿsi) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಪೊಲೀಸ್ ಇಲಾಖೆಗೆ ೧೯೯೩ ರಲ್ಲಿರಾಯಚೂರುಜಿಲ್ಲೆಯ ಸದರ ಬಜಾರ್‌ಠಾಣೆಯಲ್ಲಿ ಪೊಲೀಸ್‌ಕಾನ್ಸ್ಟೆಬಲ್ ಆಗಿ ಸೇರಿ, ತಮ್ಮದಕ್ಷತೆ, ಪ್ರಾಮಾಣಿಕತೆ ಯಿಂದ ಹಂತ ಹಂತವಾಗಿ ಜಮಾದಾರ್ ಆಗಿ ನಂತರ ಸಹಾಯಕ ಸಬ್‌ಇನ್ಸ್ಪೆಕ್ಟರ್ ಆಗಿ, ಈಗ ಪಿ.ಎಸ್.ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಯಚೂರುಜಿಲ್ಲೆ, ಕೊಪ್ಪಳ ಜಿಲ್ಲೆಯಕಾರಟಗಿ, ಗಂಗಾವತಿ, ಕೊಪ್ಪಳ ನಗರಠಾಣೆ, ಮುನಿರಾಬಾದ್, ಮತ್ತು ಲೋಕಾಯುಕ್ತಠಾಣೆಯಲ್ಲಿ ಸೇವೆ ಸಲ್ಲಿಸಿ ಜನ ಸ್ನೇಹಿ ಅಧಿಕಾರಿಗಳಾಗಿ ಹೆಸರು ಪಡೆದಿದ್ದಾರೆ. ಬಡತನದ ನೋವನ್ನುಉಂಡು, ಅಧ್ಯಯನ ಮಾಡಿ ಪೊಲೀಸ್‌ಇಲಾಖೆಯಲ್ಲಿಉನ್ನತಅಧಿಕಾರಿಯಾಗಿದ್ದಾರೆ.ಯಾರೇಠಾಣೆಗೆ ಬರಲಿ ಅವರೊಂದಿಗೆಸೌಜನ್ಯ, ಪ್ರೀತಿಯಿಂದ ಮಾತಾಡಸಿ ಅವರ ನೋವುಗಳನ್ನು ಆಲಿಸಿ ಎಷ್ಟೋಜನರಿಗೆ ನ್ಯಾಯ ಒದಗಿಸಿದ್ದಾರೆ.
ಶಿವಪ್ಪ ಹಡಪದಎಂದರೆ ಕೊಪ್ಪಳದ ಹೋರಾಟದ ಮನಸ್ಸು, ಪ್ರಗತಿಪರರಿಗಷ್ಟೇಅಲ್ಲ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮದಎಲ್ಲರಿಗೂಚಿರಪರಿಚಿತ ಹೆಸರು, ಇವರುಅನಾರೋಗ್ಯ ಪೀಡಿತರ ಮನೆಗಳಿಗೆ ತೆರಳಿ ಕ್ಷೌರ ಮಾಡುವಕಾರ್ಯ ಮಾಡುತ್ತಾರೆ. ತಮ್ಮಕಾಯಕದಲ್ಲಿಎಂದು ಮೇಲು ಕೀಳು ನೋಡದೆಎಲ್ಲರನ್ನೂ ಸಮಾನತೆಯಿಂದಕAಡವರು. ತಮ್ಮಕಾಯಕದಜೊತೆಗೆ ಕೊಪ್ಪಳದ ಹೋರಾಟದಧ್ವನಿ ಗಳಲ್ಲಿ ಸದಾಜೊತೆಯಾಗಿರುವಗಟ್ಟಿ ಧ್ವನಿಗಳಲ್ಲಿ ಶಿವಪ್ಪ ಹಡಪದಕೂಡಒಬ್ಬರು
ಯಮನೂರಪ್ಪ ವಿಜ್ಞಾನ ಶಿಕ್ಷಕರು ಏಠಿsಇರಕಲ್ಲಗಡವಿಜ್ಞಾನ ಶಿಕ್ಷಕರಾಗಿ ಇವರು, ಬೋಧನೆ, ಸಂಶೋಧನೆ, ವಿಜ್ಞಾನ ಮಾದರಿ ತಯಾರಿಕೆಗಳಲ್ಲಿ ಆಸಕ್ತರು.ವೈಜ್ಞಾನಿಕ ಮನೋಭಾವನೆಯನ್ನು ವಿದ್ಯಾರ್ಥಿಗಳಲಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ.ಇವರು ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿರಾಜ್ಯವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ರವಿ ಹೊಸಮನಿಓದಬೇಕೆಂಬ ತುಡಿತಒಂದೆಡೆಇದ್ದರೆ, ಕಾಡುವ ಬಡತನ ಅವಮಾನಗಳು ಇನ್ನೊಂದಡೆ. ಓದು ಬಿಟ್ಟುದುಡಿಯಲು ಹೊರಟ ವ್ಯಕ್ತಿಗೆ ಈಗ ಅನಿಸಿದ್ದು “ನನಗೆ ಬಂದ ಸ್ಥಿತಿ ಬೇರೆಯವರಿಗೆ ಬರದಿರಲಿ “ಎಂದು ಸಮಾನ ಮನಸ್ಕರಜೊತೆಗೂಡಿಗ್ರಂಥಾಲಯಗುಡಿ ಸ್ಥಾಪನೆ ಮಾಡಿ ನೂರಾರುಜನರಿಗೆಓದುವಅಭಿರುಚಿ ಬೆಳೆಸಿದ್ದಾನೆ ಈ ವ್ಯಕ್ತಿ. ನಗರದ ಬಸವೇಶ್ವರ ವಾರ್ಡ ನಂ ೧೨ ರಲ್ಲಿನಗ್ರಂಥಾಲಯಗುಡಿಕಾರ್ಯ.
ಬಂಡಾಯ ಸಾಹಿತಿ ಹೋರಾಟಗಾರ ಪ್ರೊಅಲ್ಲಮಪ್ರಭು ಬೆಟ್ಟದೂರ, ಸರ್ಕಾರಿ ನೌಕರರರಾಜ್ಯ ಹಿರಿಯಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜಜುಮ್ಮನ್ನವರ ಮಾತನಾಡಿದರು.
ಕಾರ್ಯಕ್ರಮದಲ್ಲಿಪ್ರಧಾನಕಾರ್ಯದರ್ಶಿ ಶಿವಪ್ಪ ಜೋಗಿ, ಪ.ಜಾತಿ, ಪ.ಪಂ ನೌಕರರಒಕ್ಕೂಟದರಾಜ್ಯ ಸಂಚಾಲಕ ಹನುಮಮಂತಪ್ಪ ಚಲವಾದಿ, ಕರ್ನಾಟಕ ಚಲನಚಿತ್ರಅಕಾಡೆಮಿ ಸದಸ್ಯೆಸಾವಿತ್ರಿ ಮುಜುಂದಾರ, ವಾರ್ತಾಧಿಕಾರಿ ಗವಿಸಿದ್ಧಪ್ಪ ಹೊಸಮನಿ,ತಾಲೂಕ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ, ನೌಕರರ ಸಂಘದಖಚಾAಚಿಜಯತೀರ್ಥದೇಸಾಯಿ, ರಾಜ್ಯ ಪರಿಷತ್ ಸದಸ್ಯ ಆಸೀಫ್, ರವಿಕಾಂತನವರಆರ್.ಎಸ್.ಚವ್ಹಾಣ, ಕೆ.ಬಿ.ಗೋನಾಳ, ಮಹಾವೀರ ಅಳ್ಳಳ್ಳಿ, ರಾಮಣ್ಣ ಶ್ಯಾವಿ, ಮ,ಓಹನ ಚಲವಾದಿ, ಮಾರುತಿ ಮ್ಯಾಗಳಮನಿ, ರಮೇಶ ಹಳ್ಳಿ, ಅಣ್ಣಪ್ಪ ಹಳ್ಳಿ, ಈಶ್ವರಕಂಚೇರ, ಪಾಂಡುರAಗಅಲ್ಲೂರು, ಉಪಸ್ಥಿತರಿದ್ದರು ಕಾರ್ಯಕ್ರಮದಅಧ್ಯಕ್ಷತೆಯನ್ನು ಮಂಜುನಾಥ ಮ್ಯಾಗಳಮನಿ ಜಿಲ್ಲಾಅಧ್ಯಕ್ಷರುಕರ್ನಾಟಕರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರಒಕ್ಕೂಟ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನಗೀತೆತಿರುಪತಿ ಶಿವನಗುತ್ತಿ,ಕ್ರಾಂತಿಗೀತೆ ಹನುಮಮಂತಪ್ಪ ಸ್ವಾಗತ ಪ್ರಾಣೇಶ ಪೂಜಾರ, ಪ್ರಾಸ್ತಾವಿಕ ಹೇಮಣ್ಣಕವಲೂರ, ಗೌರವ ಸನ್ಮಾನಿತರ ಪರಿಚಯವನ್ನು ಮಂಜುನಾಥ ಬುಲ್ಟಿ ಮಾಡಿಕೊಟ್ಟರೆ ನಾಗರಾಜನಾಯಕಡಿ.ಡೊಳ್ಳಿನ ನಿರೂಪಿಸಿದರು, ಗುರುರಾಜ ವಂದಿಸಿದರು.
ಫೋಟೊ ಇವೆ.