ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಆತ್ಮಾವಲೋಕನ ಸಮ್ಮೇಳನದಲ್ಲಿ ಆಗಬೇಕು- ಸಿವಿಸಿ

Get real time updates directly on you device, subscribe now.


ಹಿರೇಮನ್ನಾಪುರ : ೧೯೯೮ ರಲ್ಲಿ ಜಿಲ್ಲೆಯಾಗಿ ರೂಪಗೊಂಡ ಕೊಪ್ಪಳ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಕಲಾ ಪ್ರಕಾರಗಳಲ್ಲಿ ರಾಜ್ಯದ ಗಮನ ಸೆಳೆದಿದೆ. ೧೯೯೨ನೇ ಇಸ್ವಿಯಲ್ಲಿ ಕೊಪ್ಪಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಮನೆ ಮನೆ ಅತಿಥಿ ಎಂಬ ವಿನೂತನ ಕಲ್ಪನೆ ರಾಜ್ಯದಲ್ಲಿಯೇ ಪರ ಪ್ರಥಮವಾಗಿ ಜಾರಿಗೊಂಡಿತು. ಕೊಪ್ಪಳ ಜಿಲ್ಲೆಯಲ್ಲಿ ಆಯೋಜನೆ ಗೊಳ್ಳುವ ಸಾಹಿತಿಕ ಕಾರ್ಯಕ್ರಮಗಳು ಮತ್ತು ಪತ್ರಿಕೋದ್ಯಮ ಚಟುವಟಿಕೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಎಲ್ಲೂ ಆ ಯೋಜನೆಗೊಳ್ಳುವುದಿಲ್ಲ.ಇಷ್ಟೆಲ್ಲಾ ಚಟುವಟಿಕೆಗಳು ನಡೆದರೆ ಇವುಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾಗಿಲ್ಲ ಎಂಬುದು ನೋವಿನ ಸಂಗತಿ. ಇದು ಏಕೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಾರಣಗಳನ್ನು ಹುಡುಕಬೇಕಿದೆ. ಈ ವಿಶ್ಲೇಷಣೆ ಇಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಆಗಬೇಕಿದೆ. ಎಂದು ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ ಹೇಳಿದರು.
೧೪ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು
ಈ ಭಾಗದ ಸಾಹಿತ್ಯ ಹೇಗೆ ರೂಪಗೊಳ್ಳುತ್ತಿದೆ? ಹೇಗೆ ರೂಪಗೊಳ್ಳಬೇಕು? ಅದು ಶಿಕ್ಷಣ, ಸಂಸ್ಕೃತಿ, ಆಡಳಿತ ಮತ್ತು ರಾಜಕೀಯ ರಂಗಗಳನ್ನು ಹೇಗೆ ಪ್ರಭಾವಿಸುವಂತಿರಬೇಕು ಎಂಬುದರ ಚಿಂತನ ಮಂಥನ ನಡೆಯಬೇಕು. ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು ಪೂರಕವಾಗಿರುವುದು ಈ ಕ್ಷಣದ ದುರಂತ. ಸಾಹಿತ್ಯ ಸಮ್ಮೇಳನಗಳು ವಿವಾದ ರಹಿತವಾಗಿ ಹೇಗೆ ಆ ಯೋಜನೆಗೊಳ್ಳಬೇಕು ಎಂಬುದರ ಸ್ಪಷ್ಟನೆ ಈ ಸಮ್ಮೇಳನದಲ್ಲಿ ಆಗಬೇಕು. ಸಾಹಿತ್ಯ ಸಮ್ಮೇಳನಗಳು ನಿಯಮಿತವಾಗಿ ಮತ್ತು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ವರ್ಷದ ನಿರ್ದಿಷ್ಟ ದಿನಗಳಂದು ಅವು ಆಯೋಜನೆಗೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿಯ ಕುರಿತು ಗಂಭೀರ ಚಿಂತನ ಮಂಥನ ಅಲ್ಲಿ ನಡೆಯಬೇಕು. ಜಿಲ್ಲೆಯಲ್ಲಿ ಯುವ ಸಾಹಿತಿಗಳಿಗೆ ಮತ್ತು ಬರಹಗಾರರಿಗೆ ಕೊರತೆ ಇಲ್ಲ. ಆದರೆ ಅವರಿಗೆ ಸೂಕ್ತ ತರಬೇತಿ ಮಾರ್ಗದರ್ಶನ ಮತ್ತು ವೇದಿಕೆ ಸಿಗುತ್ತಿಲ್ಲ. ಅದನ್ನು ಮಾಡುವ ಬಗೆಯ ಕುರಿತು ಚಿಂತನೆಗಳು ಇಲ್ಲಿ ನಡೆಯಲಿ.

ಈ ಮಣ್ಣಿನಲ್ಲಿ ಮನುಷ್ಯತ್ವದ ಮಜಲುಗಳಿವೆ. ವಿವಿಧ ಕಥನಗಳಿವೆ. ಅವು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳ್ಳಬೇಕಿದೆ. ಮಹಿಳಾ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಜಿಲ್ಲೆಯಲ್ಲಿ ಅಲಕ್ಷಗೊಂಡ ಪ್ರಕಾರಗಳು. ಈ ಪ್ರಕಾರದ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರವರ್ಥಮಾನಕ್ಕೆ ಬರುತ್ತಿರುವ ಸಾಹಿತಿಗಳು ಗಂಭೀರವಾಗಿ ಯೋಚಿಸಬೇಕಿದೆ. ಸಿನಿಮಾ ಸಾಹಿತ್ಯಕ್ಕೆ ಪೂರಕವಾದ ಅಂಶಗಳು ಮತ್ತು ಮನಸ್ಸುಗಳು ಜಿಲ್ಲೆಯಲ್ಲಿ ಇವೆ. ಅಲ್ಲಲ್ಲಿ ಸಿನಿಮಾ ಸಾಹಿತ್ಯದ ಚಟುವಟಿಕೆ ನಡೆಯುತ್ತಿವೆ. ಅವುಗಳನ್ನು ಒಂದೇ ವೇದಿಕೆಡಿ ತಂದು ಸಿನಿಮಾ ಸಾಹಿತ್ಯ ಸೃಷ್ಟಿಯಾಗುವಂತೆ ಮಾಡಬೇಕು. ಪುಸ್ತಕ ಪ್ರಕಟಣೆ ಕ್ಷೇತ್ರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಜಿಲ್ಲೆಯ ಸಾಹಿತಿಗಳ ಕೃತಿಗಳು ಸುಲಭವಾಗಿ ಎಲ್ಲೆಡೆ ಸಿಗುವಂತಾಗಬೇಕು.
ಕೊಪ್ಪಳ ಜಿಲ್ಲೆಯ ಸಮಗ್ರ ಸಾಹಿತ್ಯ ಮತ್ತು ಸಾಹಿತಿಗಳ ಸಾಹಿತ್ಯ ಕೃಷಿಯನ್ನು ಒಳಗೊಂಡ ಸಂಪುಟಗಳನ್ನು ಹೊರ ತರಬೇಕು. ಈ ನಿಟ್ಟಿನಲ್ಲಿ ಈ ಸಮ್ಮೇಳನ ಸ್ಪಷ್ಟ ನಿರ್ಣಯ ಕೈಗೊಳ್ಳಲಿ. ಕಾದಂಬರಿ ಮತ್ತು ನಾಟಕ ಪ್ರಕಾರಗಳು ಹೆಚ್ಚಾಗಿ ರಚನೆಯಾಗುತ್ತಿಲ್ಲ. ಈ ಮಣ್ಣಿನ ವಸ್ತುಗಳನ್ನು ಉಪಯೋಗಿಸಿಕೊಂಡು ಹೆಚ್ಚು ಸಂಖ್ಯೆಯ ಕಾದಂಬರಿ ಮತ್ತು ನಾಟಕಗಳು ರಚನೆಯಾಗಬೇಕಿದೆ. ಈ ಭಾಗದಲ್ಲಿ ಗ್ರಾಮೀಣ ಜನಪದ ಕಲಾ ಪ್ರಕಾರಗಳು ಕಣ್ಮರೆಯಾಗುತ್ತಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವ ಕುರಿತು ಈ ಸಮ್ಮೇಳನ ಒಂದು ನಿರ್ಧಾರಕ್ಕೆ ಬರಬೇಕಿದೆ. ಬರೆದಿದ್ದೆಲ್ಲವೂ ಸಾಹಿತ್ಯವಾಗಲಾರದು. ಸಾಹಿತ್ಯ ಬರವಣಿಗೆಗೆ ತನ್ನದೇ ಕೌಶಲ್ಯ ಮತ್ತು ಶೈಲಿ ಇದೆ. ಯುವ ಸಾಹಿತಿಗಳು ಈ ಕೌಶಲ್ಯ ಮತ್ತು ಶೈಲಿಯನ್ನು ಕರಗತ ಮಾಡಿಕೊಂಡರೆ ಮೌಲಿಕ ಸಾಹಿತ್ಯ ರಚನೆಯಾಗುತ್ತದೆ. ಸಾಹಿತ್ಯ ಸಮ್ಮೇಳನಗಳು ರಾಜಕೀಯ ಮತ್ತು ಸಿದ್ಧಾಂತದ ಸಂಘರ್ಷದಲ್ಲಿ ತೊಡಗಬಾರದು. ರಾಜಕಾರಣಿಗಳನ್ನು ಸಾಹಿತ್ಯ ಪ್ರೇಮಗಳನ್ನಾಗಿ ನೋಡುವ ಪರಂಪರೆ ಬಳಸಿಕೊಳ್ಳಬೇಕು. ಇಲ್ಲದೆ ಹೋದರೆ ಕಲುಷಿತಗೊಂಡ ರಾಜಕೀಯ ವಾತಾವರಣದಂತೆ ಸಾಹಿತ್ಯವು ಕಲುಷಿತಗೊಳ್ಳುವ ಅಪಾಯವಿದೆ ಎಂದು ಹೇಳಿದರು

Get real time updates directly on you device, subscribe now.

Comments are closed.

error: Content is protected !!