ಸಿವಿಸಿ ಫೌಂಡೇಶನ್: ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Get real time updates directly on you device, subscribe now.


ಕೊಪ್ಪಳ: ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗೆ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿವಿಸಿ ಫೌಂಡೇಶನ್, ಕೊಪ್ಪಳ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

ಯಾವುದೇ ಪದವಿ ಕೋರ್ಸ್ ನ ಯಾವುದೇ ಸೆಮಿಸ್ಟರ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಫೌಂಡೇಶನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

‘ಭಾರತೀಯರಿಗೆ ವೈಚಾರಿಕ ಸ್ವಾತಂತ್ರ್ಯ ಲಭಿಸಿದೆಯೇ?’ ವಿಷಯದ ಕುರಿತು ಆಸಕ್ತ ವಿದ್ಯಾರ್ಥಿಗಳು 1000 ಪದಗಳನ್ನು ಮೀರದಂತೆ ಪ್ರಬಂಧ ಸಲ್ಲಿಸಬೇಕು. ಅತ್ಯುತ್ತಮ ಪ್ರಬಂಧಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಪುರಸ್ಕಾರ, ವಿಶಿಷ್ಟ ಪ್ರಬಂಧಗಳಿಗೆ ಸಮಾಧಾನಕರ ಬಹುಮಾನ ಹಾಗೂ ಭಾಗವಹಿಸುವ ಪ್ರತಿಯೊಬ್ಬರಿಗೂ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ನೀಡಲಾಗುವುದು. ಪ್ರಬಂಧ ಕಳುಹಿಸಲು ಕೊನೆಯ ದಿನ ಆಗಸ್ಟ್ 8 ಎಂದು ಪ್ರಕಟಣೆ ತಿಳಿಸಿದೆ.

ಈ ಕೆಳಗಿನ ವಿಳಾಸಕ್ಕೆ ಪ್ರಬಂಧಗಳನ್ನು ಕಳುಹಿಸಬೇಕು ಇಲ್ಲವೇ ಇ-ಮೇಲ್ ಮಾಡಬಹುದು:
ಸಿವಿಸಿ ಫೌಂಡೇಶನ್,
ಸಿವಿಸಿ ಸದನ,
ಕುಷ್ಟಗಿ ರಸ್ತೆ,
ಕೊಪ್ಪಳ -583231.
(samaajamukhicvc@gmail.com)

ಹೆಚ್ಚಿನ ಮಾಹಿತಿಗಾಗಿ ಫೌಂಡೇಶನ್ ಸಂಚಾಲಕ

Get real time updates directly on you device, subscribe now.

Comments are closed.

error: Content is protected !!