ಸಿಬಿಎಸ್ಇ 10 ನೇ ತರಗತಿ ಫಲಿತಾಂಶ: ಕುಷ್ಟಗಿ ತಾಲೂಕಿಗೆ ಎಸ್ ವಿ ಸಿ ಶಾಲೆ ಟಾಪರ್

Get real time updates directly on you device, subscribe now.

ಕೊಪ್ಪಳ: ಕುಷ್ಟಗಿಯ ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆ, (ಸಿಬಿಎಸ್ಇ) ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಪ್ರಥಮ ಐದೂ ಸ್ಥಾನಗಳನ್ನು ತನ್ನದಾಗಿಸಿಕೊಂಡು 100% ಫಲಿತಾಂಶ ದಾಖಲಿಸಿದೆ ಎಂದು ಎಸ್ ವಿ ಸಿ ಸಂಸ್ಥೆಯ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪೂರ್ತಿ ಪೊಲೀಸ್ ಪಾಟೀಲ್ (97.60%), ವಿದ್ಯಾಶ್ರೀ ಪೊಲೀಸ್ ಪಾಟೀಲ್ (92%), ಪೃಥ್ವಿ ಬೊಳ್ಳೊಳ್ಳಿ (91.80%), ಅನನ್ಯ ಪಾಲಂಕರ್ (91.80%) ಹಾಗೂ ಸುಮತಿ ಕನಕಗಿರಿ (91.20%) ಉನ್ನತ ಶ್ರೇಣಿ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಕುಷ್ಟಗಿ ತಾಲೂಕಿಗೆ ಪ್ರಥಮ 5 ಸ್ಥಾನಗಳನ್ನು ಪಡೆದಿದ್ದಾರೆ.

ಒಟ್ಟು 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ತನ್ನ 9 ವರ್ಷದ ಇತಿಹಾಸದಲ್ಲಿ ಪ್ರಸಕ್ತ ವರ್ಷ ಅತ್ಯಂತ ಹೆಚ್ಚಿನ ಉನ್ನತ ಶ್ರೇಣಿಗಳನ್ನು ವಿದ್ಯಾರ್ಥಿಗಳು ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಿ ವಿ ಚಂದ್ರಶೇಖರ್, ಸಂಸ್ಥೆಯ ಸಿಇಓ ಡಾ. ಜಗದೀಶ್ ಅಂಗಡಿ, ಪ್ರಾಂಶುಪಾಲ ಮಹದೇವ್ ಮಧಾಳೆ ಹಾಗೂ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!