ಕೂಲಿ ಕೆಲಸದೊಂದಿಗೆ ವಿಮೆ ನೊಂದಣಿ ಮಾಡಿಕೊಳ್ಳಿರಿ:  ಶ್ರೀನಿವಾಸ ಚಿತ್ರಗಾರ

0

Get real time updates directly on you device, subscribe now.

ಕೊಪ್ಪಳ:-ಪ್ರತಿಯೊಬ್ಬ ಕೂಲಿಕಾರರು ಕೂಲಿ ಕೆಲಸದೊಂದಿಗೆ ವಿಮೆಗಳನ್ನು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಕರೆ ನೀಡಿದರು.

ಗಿಣಿಗೇರಾ ಗ್ರಾಮ ಪಂಚಾಯತಿಯ ಗಿಣಿಗೇರಾ ಗ್ರಾಮದ ಕೆರೆ ಹೂಳೆತ್ತುವ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಮಾತನಾಡಿ ಪ್ರತಿ ಮಾನವ ದಿನಕ್ಕೆ 370/- ಕೂಲಿ ನಿಗದಿಪಡಿಸಿದ್ದು 6ಪೀಟ್ ಉದ್ದ, 6 ಪೀಟ್ ಅಗಲ, 1 ಪೀಟ್ ಆಳ ಮಣ್ಣನ್ನು ಅಗೆದು ಪೂರ್ತಿ ಕೂಲಿ ಪಡೆಯುವಂತೆ ಕರೆ ನೀಡಿದರು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕೆಂದರು.
18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-6 ಸಲ್ಲಿಸಬೇಕೆಂದರು. ಏಪ್ರಿಲ್ ರಿಂದ ಜೂನ್ ವರೆಗೆ 90 ದಿನಗಳ ಕೂಲಿ ಕೆಲಸ ಪಡೆಯಬೇಕೆಂದರು. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು. ಎಲ್ಲಾ ಕೂಲಿಕಾರರು PMJJBY, PMSBY ವಿಮೆಗಳನ್ನು ನೊಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ಗ್ರಾಮ ಪಂಚಾಯತಿಯವರು ಫಾರಂ ನಂ.6 ಪ್ರಕಾರ ಈಗಾಗಲೇ ಎನ್‌ಎಂಆರ್‌ ಸೃಜಿಸಲಾಗಿದ್ದು ಎನ್‌ ಎಂಆರ್‌ ನಲ್ಲಿರುವ ಎಲ್ಲಾ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗುವಂತೆ ಮನವೋಲಿಸಬೇಕೆಂದರು. ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು e-KYC ಹೊಂದಿದ ನಂತರವೇ ಎನ್‌ ಎಂಆರ್ನಲ್ಲಿ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗತಕ್ಕದ್ದು. 1&2ನೇ ಹಾಜರಾತಿ ಕಡ್ಡಾಯವಾಗಿರುತ್ತದೆ.
ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಗ್ರಾಮ ಪಂಚಾಯತಿ ಡಿಇಒ ರಾಜಾಭಕ್ಷಿ ಪಾಯಪ್ಪನವರ, ಹನಮೇಶ ಹೋಸುರು, ರುದ್ರೇಶ ಬಳಿಗಾರ, ಶಿವಕುಮಾರ, ಮಾರುತಿ, ಶ್ರೀದೇವಿ ಧರ್ಮಪುರ, ಬಸಮ್ಮ ಬಗನಾಳ, ಶಾರದಾ ಗೋಡೆಕರ್‌ ಸೇರಿದಂತೆ 185 ಕೂಲಿಕಾರರು ಹಾಜರಿದ್ದರು.

Register for insurance with wage work: Srinivas Chitragara

Get real time updates directly on you device, subscribe now.

Leave A Reply

Your email address will not be published.

error: Content is protected !!