ರೋಹಿತಕುಮಾರ ಮಜ್ಜಿಗಿ ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನ

ಕೊಪ್ಪಳ : ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಫಲಿತಾಂಶ ಪ್ರಕಟಗೊಂಡಿದ್ದು, ಗಂಗಾವತಿ ವಿದ್ಯಾನಿಕೇತನ ಕಾಲೇಜಿನಲ್ಲಿ ಅಭ್ಯಾಸ ಮಾಡಿರುವ ತಾಲೂಕಿನ ಅಲ್ಲಾನಗರ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಕು. ರೋಹಿತಕುಮಾರ ಮಜ್ಜಿಗಿ ಅವರು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 591 ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಗೆ ನಾಲ್ಕನೇ ಸ್ಥಾನವನ್ನು ಪಡೆದು ಅದ್ಭುತ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ಮಜ್ಜಿಗಿ ಕುಟುಂಬದ ಶ್ರೀ ಕುಮಾರಪ್ಪ ಮಜ್ಜಿಗಿ ಹಾಗೂ ಶ್ರೀಮತಿ ಕುಸ್ತೂರೆಮ್ಮ ಮಜ್ಜಿಗಿ ಈ ದಂಪತಿಗಳ ಪ್ರೀತಿಯ ಮಗನಾದ ಕು. ರೋಹಿತಕುಮಾರ ಮಜ್ಜಿಗಿ ಅವರು ತಮ್ಮ ಸತತ ಪರಿಶ್ರಮ ಹಾಗೂ ನಿಷ್ಠೆಯಿಂದ ತನ್ನ ಯೋಜನೆಯಂತೆ ವ್ಯವಸ್ಥಿತವಾಗಿ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ. ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದ ಕು. ರೋಹಿತಕುಮಾರ ಮಜ್ಜಿಗಿ ಅವರಿಗೆ ವಿದ್ಯಾನಿಕೇತನ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಪನ್ಯಾಸಕರು, ಕಾಲೇಜು ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು, ಕುಟುಂಬಸ್ಥರು ಹಾಗೂ ಊರಿನ ಗುರು ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.
Comments are closed.