ಅಂಬೇಡ್ಕರ್ ಜಯಂತಿ ಹಿನ್ನೆಲೆ ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ

0

Get real time updates directly on you device, subscribe now.

ಅಂಬೇಡ್ಕರ್ ವ್ಯಕ್ತಿಯಲ್ಲ, ನಮಗೆ ಪ್ರೇರಕ ಶಕ್ತಿ: ದೊಡ್ಡನಗೌಡ ಪಾಟೀಲ್
ಕುಷ್ಟಗಿ: ಡಾ. ಬಿ.ಆರ್. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಪ್ರೇರಕ ಶಕ್ತಿಯಾಗಿದೆ ಎಂದು ವಿಧಾನಸಭಾ ಪ್ರತಿಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಹೇಳಿದರು.
State level open quiz competition – Ambedkar Jayanti
ಕುಷ್ಟಗಿ ಕ್ರೈಸ್ತ ದ ಕಿಂಗ್ ಶಾಲೆಯ ಸಭಾಂಗಣದಲ್ಲಿ ತಾಲೂಕು ಆಡಳಿತ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಹಿನ್ನೆಲೆ ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ತಿಳಿದುಕೊಂಡರೆ ಸಾಲದು. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅಗತ್ಯವಿದೆ ಎಂದರು.
ಮಾಜಿ ಶಾಸಕ ಕೆ.ಶರಣಪ್ಪ ವಕೀಲರು  ಮಾತನಾಡಿ,  ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ತಮ್ಮ ಕಾಲ ಘಟ್ಟದಲ್ಲಿ ನೀಡಿರುವ ಆಲೋಚನೆಗಳು ಮತ್ತು ಚಿಂತನೆಗಳು ಇಂದಿಗೂ ಸಮಾಜವನ್ನು ಜಾಗೃತಗೊಳಿಸುವ ಮತ್ತು ಸಮಾನತೆಯತ್ತ ಕೊಂಡೊಯ್ಯುವ ಪ್ರೇರಣೆಯಾಗಿವೆ. ಹೀಗಾಗಿ ಅವರು ಸರ್ವಕಾಲಕ್ಕೂ ಶ್ರೇಷ್ಠರಾಗಿದ್ದಾರೆ. ಅವರ ವಿಚಾರಗಳು ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಮುನಿರಾಬಾದ್ ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಯುವ ಮುಖಂಡ ದೊಡ್ಡಬಸನಗೌಡ ಬಯ್ಯಾಪೂರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಹೇಮಂತಕುಮಾರ, ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರು ಮಾತನಾಡಿದರು.  ಕೊಪ್ಪಳ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್. ವಿ.ಡಾಣಿ, ಸಿಪಿಐ ವಿಶ್ವನಾಥ್ ಹಿರೇಗೌಡರ, ಬಿಇಒ ಉಮಾದೇವಿ ಬಸಾಪೂರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದೇಸಾಯಿ  ಕ್ರೈಸ್ತ  ದ ಕಿಂಗ್ ಶಾಲೆಯ ಮುಖ್ಯಸ್ಥರಾದ ಫಾದರ್ ಇತರರು ಉಪಸ್ಥಿತರಿದ್ದರು.
ನಂತರ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದ ರಾಜ್ಯದ ವಿವಿಧ ಕಡೆಯ ೧೦೬೭ ಸ್ಪರ್ಧಿಗಳು ರಸಪ್ರಶ್ನೆ ಪ್ರವೇಶ ಲಿಖಿತ ಪರೀಕ್ಷೆ ನಡೆಯಿತು.
ಬಳಿಕ ಹೆಚ್ಚು ಅಂಕ ಪಡೆದ ೧೨ ಅಭ್ಯರ್ಥಿಗಳು, ರಸಪ್ರಶ್ನೆ ಸ್ಪರ್ಧೆಯ ೬ ತಂಡಗಳಿಗೆ ಆಯ್ಕೆಯಾದರು. ನಂತರ ಸಿಪಿಐ ವಿಶ್ವನಾಥ್ ಹಿರೇಗೌಡರ ನೇತೃತ್ವದಲ್ಲಿ ನಾಲ್ಕು ಹಂತದಲ್ಲಿ ವಿಭಿನ್ನ ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತಾದ ಪ್ರಶ್ನೆಗಳನ್ನು ಕೇಳಲಾಯಿತು. ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳ ವಿಜೇತ ತಂಡಗಳ ಸ್ಪರ್ಧಿಗಳಿಗೆ ತಾಲೂಕಿನ ನ್ಯಾಯಾಧೀಶರು ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.

 

ಅಭೂತಪೂರ್ವ ಯಶಸ್ಸಿಗೆ ಅಭಿಮಾನ ಪೂರ್ವಕ ವಂದನೆಗಳು

ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹದ ಕುರಿತು ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಶ್ರಮಿಸಿದ ನನ್ನೆಲ್ಲಾ ಆತ್ಮೀಯ ಸ್ನೇಹ ಬಳಗಕ್ಕೆ ತುಂಬು ಹೃದಯದ ಅನಂತ ವಂದನೆಗಳು , ಇದೊಂದು ಸಾರ್ಥಕ ಕ್ಷಣ , ಯೋಜಿಸಿದಂತೆ ಕಾರ್ಯಕ್ರಮವು ಸಕಾರಣಗೊಂಡ ಸುಸಂದರ್ಭ, ಒಂದು ಚಪ್ಪಾಳೆಗೆ ಎರಡು ಕೈಗಳು ಎಷ್ಟು ಮುಖ್ಯವೋ, ಒಂದು ಕಾರ್ಯಕ್ರಮದ ಯಶಸ್ವಿಗೆ ಹಲವಾರು ಸಹೃದಯ ಮನಸ್ಸುಗಳ ಕೈಜೋಡಿಸಿವಿಕೆಯು ಅಷ್ಟೇ ಮುಖ್ಯ, ಎಲ್ಲವೂ ಇಂದು ಸಾಧ್ಯವಾಗಿದೆ, ಕಳೆದ 20 ದಿನಗಳ ಹಿಂದೆ ಅಂದುಕೊಂಡಂತೆ ಪ್ರತಿಯೊಬ್ಬರು ತಮ್ಮ ಇಚ್ಛಾಶಕ್ತಿಯ ಮನಪೂರ್ವಕವಾಗಿ ಕೈಜೋಡಿಸಿದರೆ ಪರಿಣಾಮವಾಗಿ ಇಂದಿನ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮವು ಒಳ್ಳೆಯ ಜಯವನ್ನು ಪಡೆದಿದೆ ಈ ಗೆಲುವಿಗೆ ಹಲವರು ಹಲವು ರೀತಿಯಲ್ಲಿ ಶ್ರಮಿಸಿದ್ದೀರಿ , ಕಾರ್ಯಕ್ರಮಕ್ಕೆ ಆಗಮಿಸಿ ಬೆನ್ನು ತಟ್ಟಿ ಶುಭ ಕೋರಿದ ಎಲ್ಲ ಜನಪ್ರತಿನಿಧಿಗಳಿಗೂ ಕುಷ್ಟಗಿ ತಾಲೂಕ ಆಡಳಿತದ ಹಿರಿಯ ಅಧಿಕಾರಿಗಳಿಗೂ ಅವಿರತವಾಗಿ ಶ್ರಮಿಸಿದ ಶಿಕ್ಷಕ ವೃಂದಕ್ಕೂ, ನನ್ನ ಇಲಾಖೆಯ ಸಮಸ್ತ ಬಳಗಕ್ಕೂ,, ಕುರುಗೋಡಿನ ಸ್ನೇಹ ಶಿಕ್ಷಕ ಬಳಗಕ್ಕೂ , ಸಾರ್ವಜನಿಕರಿಗೂ ಸ್ನೇಹಿತರಿಗೂ ಮಾಧ್ಯಮದ ಬಂಧುಗಳಿಗೂ ಅವರಿವರೆಂದರೆ ಸರ್ವರಿಗೂ ತಮ್ಮೆಲ್ಲರ ಸಹಕಾರಕ್ಕಾಗಿ ತುಂಬು ಹೃದಯದ ಅನಂತ ವಂದನೆಗಳು –

ವಿಶ್ವನಾಥ ಹಿರೇಗೌಡರ ಸಿಪಿಐ

 

Get real time updates directly on you device, subscribe now.

Leave A Reply

Your email address will not be published.

error: Content is protected !!