ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಿಕೆಯಲ್ಲಿ ಬೋಡೆ ರಿಯಾಜ್ ಅಹ್ಮದ ಅವರ ಕೊಡುಗೆ ಅಪಾರ-…ನೋರಾ
ಕೃತಿ..ಅಮೀರ್ ಖುಸ್ರೋ ಕಾವ್ಯಲೋಕ
ಅನುವಾದ..ಬೋಡೆ ರಿಯಾಜ್ ಅಹ್ಮದ್
ಪ್ರಕಟಣೆ…ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟಗಳು..162
ಬೆಲೆ..120

ಕೃತಿ ಓದುವ ಮುನ್ನ ಅಮೀರ್ ಖುಸ್ರೋ ಅವರ ಪರಿಚಯಕ್ಕಾಗಿ ಸಾಕಷ್ಟು ವಿಷಯಗಳನ್ನು ಕಲೆಹಾಕಿದ್ದಾರೆ ಬೋಡೆ ಅವರು.ಉತ್ತಮ ಮಹತ್ವಪೂರ್ಣ ಮಾಹಿತಿ. ಕೆಲವೊಂದು ಹಮ್ದ್,ನಾತ್ ಗಳ ಪರಿಚಯದೊಂದಿಗೆ ಕೃತಿ ಪ್ರಾರಂಭವಾಗುತ್ತದೆ.
“ಕಾವ್ಯವೆಂಬುದು ಒಬ್ಬ ಪ್ರತಿಭಾಶಾಲಿಯು ಜಗತ್ತಿನೊಡನೆ ನಡೆಸುವ ಸಲ್ಲಾಪ,ಅದರ ಕೂಗಿಗೆ ಅವನ ಮರುಕೂಗು,ಅದರ ಸಂತಾಪಕ್ಕೆ ಅವನ ಅನುತಾಪ,ಅದರ ಸಂತೋಷಕ್ಕೆ ಅವನ ಪರಿತೋಷ,ಅದರ ಪ್ರಶ್ನೆಗೆ ಅವನ ಸಮಾಧಾನ ಅದರ ಆಯಾಸಕ್ಕೆ ಅವನ ಉಪಚಾರ ಅದರ ಬೇಸರಕ್ಕೆ ಅವನ ವಿಕಟ ವಿನೋದ,ಅದರ ಕಾಲಯಾಪನೆಗೆಅವನ ಒಗಟು ಹರಟೆ,ಅದರ ಕುತೂಹಲಕ್ಕೆ ಅವನ ಆಕಾಶಪುರಾಣ,ಅದರ ಅಕಾಲನಿದ್ರೆಗೆ ಅವನ ಭೇರಿಧ್ವಾನ…” ಡಿ.ವಿ.ಜಿ ಯವರು ಹೇಳಿದಂತೆ ಈ ಉಲ್ಲೇಖವನ್ನು ಭಿತ್ತಿಯಾಗಿಸಿಕೊಂಡು ಯಾವದೇ ಕೃತಿಯ ಗ್ರಹಿಕೆಗೆ ಹಿನ್ನೆಲೆಯಾಗಿಸಿಕೊಂಡಾಗ ಈ ಕೃತಿಯಲ್ಲಿ ವಿರಹಯಾತನೆ ವಾಚ್ಯವಾಗಿ ಕಂಡರೂ ಅದು ಒಂದೇ ನೆಲೆಯಲ್ಲಿ ಸ್ಥಿರವಾಗಿ ನಿಲ್ಲದಿರುವುದು ಕೃತಿಯ ಮಹತ್ತಾಗಿದೆ.ಅದನ್ನು ಮೊದ ಮೊದಲು ಪ್ರಿಯತಮೆಯ ಬಗೆಗಿನ ವ್ಯಾಮೋಹವು ಕ್ರಮೇಣ ಅಧ್ಯಾತ್ಮಿಕ ತಿರುವು ಪಡೆದುಕೊಳ್ಳುವುದನ್ನು ಗ್ರಹಿಸಬೇಕು.ಹಜ್ರತ್ ನಿಜಾಮೊದ್ದೀನ್ ಔಲಿಯಾ ಅವರನ್ನು ಕುರಿತ ಪ್ರೇಮ ನಿವೇದನೆ,ಅವರ ಬಗೆಗಿನ ಒಳತುಡಿತಕ್ಕೆ ಈ ಕವಿತೆಗಳು ದುಡಿದಿವೆ.ಮಾನವ ಸಹಜ ಅಭಿಲಾಷೆಗಳು,ಅಭಿಪ್ಸೆಗಳು,ಅಸಹಾಯಕತೆಗಳು ಈ ದ್ವಿಪದಿಗಳಲ್ಲಿ ಹೊತ್ತು ನಡೆಯುವ ಶಬ್ದಗಳು ಇನ್ನೂ ಸಶಕ್ತವಾಗಿಸಬಹುದಿತ್ತು.ಅಲ್ಲಲ್ಲಿ ಶಬ್ದದೋಷಗಳು ಅಡಗಿವೆ.ಆದರೂ ಇಡೀ ದ್ವಿಪದಿ ಒಂದು ಸಂಪೂರ್ಣ ಅರ್ಥಾಭಿವ್ಯಕ್ತಿ ಮಾಡಿಸುವುದರಲ್ಲಿ ಹಾಗೂ ಓದುಗನೆದೆಗೆ ದಾಟಿಸುವಲ್ಲಿ ಸಮರ್ಥವಾಗಿವೆ.ಈ ನಿಟ್ಟಿನಲ್ಲಿ ಬೋಡೆಯವರ ಪ್ರಯತ್ನ ಸ್ತುತ್ಯಾರ್ಹ.
“ಯಾವ ಮಧುಪಾತ್ರೆಯ ನಿರೀಕ್ಷೆಯಲಿ ಪ್ರಾಣವ ತೊರೆದೆ ಖುಸ್ರೋ
ನಿರೀಕ್ಷೆಯ ಆ ಮಧುಪಾತ್ರೆ ಸವಿಯುವ ಸೌಭಾಗ್ಯ ದೊರೆಯಲಿಲ್ಲ.”
ಈ ಷೇರ್ ಗಮನಿಸಿದಾಗ…
ಮಧುಪಾತ್ರೆಯ ನಿರೀಕ್ಷೆ
ಸಾನಿ ಮಿಸ್ರಾದ ನಿರೀಕ್ಷೆಯ ಮಧುಪಾತ್ರೆ..ಅದೆಷ್ಟು ಅರ್ಥವತ್ತಾಗಿ
ಅನುವಾದಿಸಿದ್ದಾರೆ ಇದು ಅವರಲ್ಲಿರುವ ಜಾಣ್ಮೆಯ ಕಾವ್ಯ ಕುಸುರಿಗೆ ಒಂದು ಮಾದರಿ.
ಶಬ್ದಗಳು ಓದುಗನೆದೆಯಲ್ಲಿ ಒಂದು ಅರ್ಥವ್ಯಂಜಕತೆಯನ್ನು ಬಿಡಲು ಮುಂದಾಗುವಂತಿದ್ದರೆ ಚೆಂದ.ಅದರ ಸುತ್ತಲಿನ ವಾತಾವರಣ ಆ ಅನುಭಾವವನ್ನು ಕಟ್ಟಿಕೊಡಬೇಕು.ಲೌಕಿಕ ಪ್ರೇಮ, ಅಲೌಕಿಕ ಪ್ರೇಮದ ಯಜ್ಞಕ್ಕೆ ಹವಿಸ್ಸು.ಆ ಪರಿವರ್ತನೆಗೆ ತೆರೆದುಕೊಂಡ ಭಾವವಿದು.ಲೌಕಿಕ ಭಾವಗಳನ್ನು ಆರೋಪಿಸಿ ಅಲೌಕಿಕತೆಯ ಆರಾಧನೆಯ ಪರಿಕಲ್ಪನೆಯನ್ನು ಮೂಡಿಸುವುದರಲ್ಲಿ ಮೂಲ ಕೃತಿ ದುಡಿದಿದೆ.ಅದನ್ನು ಸಮರ್ಥವಾಗಿ ಬೋಡೆಯವರು ಕನ್ನಡಕ್ಕೆ ತಂದಿದ್ದಾರೆ.ಸೂಫಿ ತತ್ವಗಳ ನೆಲೆಗಟ್ಟಿನಲ್ಲಿ ಮೂಲತ: ರೂಪುತಳೆದ ಮೂಲಕಾವ್ಯ ಅದೇ ಎಳೆಗಳನ್ನು ಕಟ್ಟಿಕೊಡುವ ಪ್ರಯತ್ನ ಅನುವಾದಕರದು.
“ನನ್ನ ತನುವಿನ ಮೇಲೆ ಒಂದು ಅಂಗಿಯ ಹೊರತು ಏನಿಲ್ಲ
ಪ್ರಾಣವನು ನನ್ನ ಪ್ರೇಮಿ ಒಯ್ದಿಹನು,ಈಗ ದೇಹವೇ ನನ್ನ ಪೋಷಾಕು ನೋಡು”
“ನಿನ್ನ ದಾಸ್ಯವೇ ಆಗಿಹುದು ಗೌರವ ಖುಸ್ರೋವಿಗೆ
ಹೀಗಾಗಿಯೇ ಅವರು ಬಿಡುಗಡೆ ಬಯಸದೆ ಇರುವುದು..”
ಈ ಎರಡು ಶೇರ್ ಗಳು ಇಡೀ ಕೃತಿಯ ಸಾರವನ್ನು ಎತ್ತಿಹಿಡಿದಿವೆ.ಹಾಗೂ ಸೂಫಿ ಪರಂಪರೆಯ ಆಶಯವನ್ನೂ ಸಹ ವಿಷದಿಕರಿಸುತ್ತವೆ.
ಅನುವಾದದ ಸೌಧ, ಆಯ್ಕೆಮಾಡಿಕೊಳ್ಳುವ ಸೂಕ್ತ ಪದಗಳ ಮೇಲೆ ನಿಂತಿದೆ.ಆ ಪದಗಳಲ್ಲಿ ಅಂತರ್ಮುಖವಾಗಿ ಹರಿಯುವ ಸ್ರೋತ ಮೂಲಭಾವನೆಯನ್ನು carry ಮಾಡುತ್ತದೆಯೇ ಓದುಗನೆದೆಯಲ್ಲಿ ಅದೇ ಭಾವ approch ಆಗುತ್ತದೆಯೇ ಇದನ್ನು ಅನುವಾದಕಕರು ರಚಿಸಿದ ನಂತರ ಇಡೀ ಕೃತಿಯನ್ನು ರಚನಾಕಾರ ದೂರ ನಿಂತು ಓದುಗನಾಗಿ ಓದಿನೋಡಬೇಕಾಗುತ್ತದೆ.ಅವರ ಅಪಾರ ಜ್ಞಾನ,ತಿಳುವಳಿಕೆ ಆ ಸಾಲಿನ ಆ ಪದದ ಬಲ ಎಡ ಪದಗಳನ್ನು ಗ್ರಹಿಸಬೇಕಾಗುತ್ತದೆಯಲ್ಲದೆ ಆ ಸಾಲು ಸೃಷ್ಟಿಸುವ ವಾತಾವರಣವನ್ನು ಇಡಿಯಾಗೀ ಗ್ರಹಿಸಬೇಕಾಗುತ್ತದೆ.ಪದಗಳ ಜೋಡಿಸುವಿಕೆ ಕೊಂಡೊಯ್ಯುತ್ತಿರುವ ಭಾವಕ್ಕೆ ಭಂಗ ಬರದಂತೆ ಸಲೀಲವಾಗಿ ಹರಿಯಬೇಕು.ಇಲ್ಲಿ ಕವಿಯ ಜಾಣ್ಮೆ ಹಾಗೂ ಆತನಿಗಿರುವ ಕೌಶಲ ಕೆಲಸ ಮಾಡುತ್ತದೆ.
“ನಾವು ನಿನ್ನನು ವಧಾಸ್ಥಾನವೆಂದು ಕರೆಯುತ್ತೇವೆ
ನಿನ್ನ ಕೇಶರಾಶಿಯನು’ ಖತಾ’ ದ ಕಸ್ತೂರಿಯೆಂದು ಕರೆಯುತ್ತೇವೆ..”
ಇಲ್ಲಿ ‘ಖತಾ’ ಇದರ ಅರ್ಥಕ್ಕೆ.. ಸುಗಂಧ ವಸ್ತುಗಳಲಿ ದೊರೆಯುವ ಚೀನಾದ ಒಂದು ಪ್ರದೇಶ..ಈ ವಿವರಣೆ ನೀಡಿದ್ದಾರೆ…
ಖತಾ…ಇದರ ಇನ್ನೊಂದು ಅರ್ಥ ಅಪರಾಧ,ತಪ್ಪು..ಇದು ಸೂಕ್ತವಾಗಿತ್ತು..ಆ ಪದದ ಬದಲಿಗೆ ಈ ಪದ ಸೇರಿಸಿದ್ದರೆ ಮಾತ್ರ ಮೇಲಿನ ಸಾಲಿನ ಊಲಾ ಮಿಸ್ರಾದಲ್ಲಿಯ ವಧಾಸ್ಥಾನಕ್ಕೊಂದು ಸಹಜ ಅರ್ಥ ದಕ್ಕುತ್ತಿತ್ತು..ಹಾಗೂ ಕೇಶರಾಶಿಯನು..ಅಪರಾಧದ ಕಸ್ತೂರಿ ಯೆಂದು ಕರೆದಿದ್ದು..
ಈ ಮೂಲವನ್ನು ಗ್ರಹಿಸಬೇಕಾಗಿತ್ತು.
ಈ ಗಝಲ್ ಹಾಗೂ ಕವಿತೆಗಳಲ್ಲಿ ಬಳಸಿರುವ ಎಲ್ಲಾ ಪ್ರತೀಕ ಪ್ರತಿಮೆಗಳು ರೂಪಕಗಳು ಲೌಕಿಕದಿಂದ ಪಡೆದುಕೊಂಡಿದ್ದು.
“ನಿನ್ನ ಸುಂದರ ಮೊಗವು ಚಂದಿರನಂತೆ ಪ್ರಕಾಶಿಸಲಿ
ಚೆಲುವಿನ ಸಾಮ್ರಾಜ್ಯದಲಿ ನಿನ್ನ ಬಾದಶಾಹಿ ನಡೆಯಲಿ..”
ಒಲವೊಂದು ತುರಿಯಾವಸ್ಥೆಗೆ ತಲುಪುವ ಹುಡುಕಾಟದಲ್ಲಿ ನಡೆಯುವ ಪಯಣವಿದು.ಲೋಕ ವ್ಯಾಪಾರಗಳ ಮೂಲಕ ಪ್ರಿಯನ ಹಾದಿಯನ್ನು ಹುಡುಕುವ ಕ್ರಿಯೆ ನಿರಂತರವಾಗಿ ಈ ಕಾವ್ಯದಲ್ಲಿ ನಡೆದಿದೆ.ಒಂದು ನೋವನ್ನು ಮಧುರ ಅನುಭೂತಿಯನ್ನಾಗಿ ಪರಿವರ್ತಿಸಿ ವಿರಮಿಸುತ್ತವೆ.
“ಪ್ರೇಮವೆಂಬುದು ಒಂದು ಮಾದಕ ಪೇಯ ಖುಸ್ರೋ
ಇದನು ಯಾತನೆರಹಿತವಾಗಿ ಸೇವಿಸುವವರು ಯಾರು?”
ಪದಗಳು ಶರೀರವನ್ನು ಪಡೆದ ಅನುಭವ ಹುಟ್ಟು ಹಾಕಬೇಕು.ಮಾರ್ದವತೆಯನ್ನು ಹುಟ್ಟುಹಾಕುವಿಕೆಯಲ್ಲಿ ಸೋಲಬಾರದು.ಅವುಗಳ ಚಯನ ಬಹಳ ಸೂಕ್ಮಾತಿಸೂಕ್ಷವಾಗಿರಬೇಕು ಹಾಗು ಇಡಿಯಾದ ಭಾವವನ್ನು ಸಾಗಿಸುವಂತಿರಬೇಕು.ಈ ನಿಟ್ಟಿನಲ್ಲಿ ಬೋಡೆಯವರು ಯೋಚಿಸುವಂತಾಗಬೇಕು.
ಭಾವುಕತೆಯ ತೀವ್ರತೆಯನ್ನು ಹುಟ್ಟುಹಾಕುವ ಕಾವ್ಯಲೋಕವಿದು.ಮನಸ್ಸಿನ ತೀವ್ರ ತುಡಿತ,ಆಯಾಸಗೊಳ್ಳದ ನಿರೀಕ್ಷೆ, ತನ್ನನ್ನು ತಾನು ಲೀನಗೊಳಿಸಿಕೊಂಡು ಉದ್ದೀಪಿಸಿಕೊಳ್ಳುವ ಭಾವವೇ ಭಕ್ತಿಯ ಶೃಂಗಾವಸ್ಥೆ ಯನ್ನು ತಲುಪಿಸುವ ರೂಪಕಗಳು ಸಾಲುಗಳಿಗೆ ಕಸುವು ತುಂಬಿವೆ.
ಈ ಕಾವ್ಯಲೋಕದಲ್ಲಿ ಬಳಸಿದ ಸರಳ ಪ್ರತಿಮೆಗಳು ಬದುಕಿನ ಹಲವಾರು ವ್ಯಾಖ್ಯಾನಗಳಿಗೆ ಮುಖಾಮುಖಿಯಾಗಿಸುತ್ತವೆ.
“ಹೂಗಳೆ,ನೀವು ಭೂಮಿಯ ಆಳದಿಂದ ಬಂದಿರುವಿರಿ,
ಮಣ್ಣಲಿ ಲೀನವಾದ ಆ ಸರ್ವರು ಹೇಗಿಹರು ಅರಿಯೆನು ಹೇ ಖುದಾ..”
ಈ ಶೇರ್ ನ ತುಡಿತದ ಗಹನತೆಯನ್ನು ಗಮನಿಸಬೇಕು.
ಮಾನವನ ಪರಿಪೂರ್ಣ ಆಕಾರ ವೃತ್ತ.ಈ ದ್ವಿಪದಿಗಳು ಪರಿಪೂರ್ಣತೆಗೆ ಎದುರುಬದುರಾದ ಎರಡು ಅರ್ಧವೃತ್ತಗಳು.ಸೃಷ್ಟಿಯೂ ಕೂಡ ಎರಡರಿಂದ ಸಮಸ್ಠಿಗೊಂಡಿದೆ.ಎರಡೂ ಸೇರಿ ಒಂದಾಗುವ ಪ್ರಕ್ರಿಯೆಯೆಡೆಗೆ ಸಾಗುವ ಭಾವವೇ ಈ ಬದುಕೂ ಈ ಅಧ್ಯಾತ್ಮ….
“ಖುಸ್ರೋ! ಪ್ರೇಮದಲಿ ಹೃದಯದ ಬೆಲೆ ಏನು ಹೇಳು
ನಿನ್ನ ಜೀವ ಹಾಗೂ ಆತ್ಮವನು ಐಕ್ಯಗೊಳಿಸಿ ನೋಡು”
ದೇಹೀ ಎನ್ನುವ ಸ್ಥಿತಿಯ ಅರ್ತತೆ ಪ್ರೇಮಿಯಲ್ಲಿ ಕಾಣಸಿಗುವ ಮುಖ್ಯವಾದ ಧಾತು.
ಈ ಕೃತಿಯನ್ನು ಗಝಲ್ ಹಾಗೂ ಕವಿತೆಯ ಮಾನದಂಡಗಳನ್ನು ಪಕ್ಕಕ್ಕಿಟ್ಟು ತನ್ಮಯತೆಯಿಂದ ಓದಿಸಿಕೊಳ್ಳುವ ಕೃತಿ. ಅವರ ‘ಸೂಫಿ ಬಂದೇ ನವಾಜ್ ‘ಕೃತಿಯೂ ಅಷ್ಟೇ ಅದರಲ್ಲಿ ಮುಳುಗಿ ಹೋಗದ ಹೊರತು ಆ ಕೃತಿ ಅರ್ಥವಾಗದು.ಓದುಗರ ಶ್ರದ್ಧೆಯನ್ನು ಬೇಡುತ್ತದೆ…ಮೋಹಕ ಒಂದು ಭಕ್ತಿವಲಯವನ್ನು ಪರಿಚಯಿಸುತ್ತದೆ.ಈ ಕೃತಿಯೂ ಹಾಗೆಯೇ.
ಇದು ಕಾವ್ಯದಲ್ಲಿರುವ ದೊಡ್ಡ ಆಶಯದ ಆಳಿಕೆ.ಇಷ್ಕ-ಏ-ಮಜಾಜಿ ಯು ಇಷ್ಕ- ಏ- ಹಕೀಕಿ ಗೇರುವ ಒಂದು ಉತ್ತಮ ನಿದರ್ಶನ ಅಮೀರ್ ಖುಸ್ರೋ ಅವರ ಕೃತಿ.ಇಷ್ಕ್..ಇದು ಹುಡುಕಾಟದ ಒಂದು ಅವಸ್ಥೆ .ಆ ಅವಸ್ಥೆಯ ಅನೇಕ ಮಜಲುಗಳನ್ನು ನಾವು ಈ ಕೃತಿಯಲ್ಲಿ ಕಾಣಬಹುದು.ಆರಾಧನೆಗಾಗಿ ಒಂದು ಜಮೀನನ್ನು ಹದಗೊಳಿಸುವ ಕೆಲಸ ಇದರ ಹಿಂದಿರುವ ಚಿಂತನೆ ಕೆಲಸ ಮಾಡುತ್ತದೆ.
ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಿಕೆಯಲ್ಲಿ ಬೋಡೆ ರಿಯಾಜ್ ಅಹ್ಮದ ಅವರ ಕೊಡುಗೆ ಅಪಾರ.
…ನೋರಾ
Work..Amir Khusro Kavyaloka
Translation..Bode Riaz Ahmed
Published by…Kuvempu Bhasha Bharati Authority
Pages..162
Price..120
Bode has collected a lot of material for the introduction of Amir Khusro before reading the work. Good and important information. The work begins with the introduction of some Hamd, Naat.
“Poetry is the conversation of a genius with the world, his response to its cry, his sympathy for its sorrow, his joy for its joy, his solace for its question, his treatment for its fatigue, his pain and amusement for its boredom, his riddles for its passing time, his sky myth for its curiosity, his echoes for its untimely sleep…” As D.V.G said, when this quote is used as a wall and as a background for understanding any work, the greatness of the work is that even though the pain of separation is seen as a word in this work, it does not remain fixed at one place. Before that, one should understand that the infatuation for the beloved gradually takes a spiritual turn. These poems have worked to express love for Hazrat Nizamuddin Auliya and his inner feelings towards him. Human nature The words that run through these couplets, the desires, the helplessness, could have been made even stronger. Otherwise, there are word errors. However, the entire couplet is capable of expressing a complete meaning and conveying it to the reader. Bode’s efforts in this regard are commendable.
“Khusro, who gave up his life in the hope of any honey pot, did not have the fortune to taste that honey pot of hope.”
When I notice this share…
The hope of the honey pot
Sani Misra’s hope of the honey pot..has translated it so meaningfully
This is an example of his clever poetic talent.
It is good if the words are ready to leave a meaningful resonance in the reader’s mind. The atmosphere around it should build that feeling. The desire for the sacrifice of worldly love and supernatural love. This is the feeling that is open to that transformation. The original work has worked in creating the concept of the worship of the supernatural by accusing worldly feelings. Bode has effectively brought it to Kannada. The translator’s attempt is to build the same threads of the original poem, which was originally formed on the basis of Sufi principles.
“There is nothing on my body except a shirt
My lover has taken my life, now look at my body as my garment”
“Your servitude is the honor of Khusrau
That is why he does not want to be freed..”
These two verses capture the essence of the entire work. They also express the aspirations of the Sufi tradition.
The edifice of translation rests on the appropriate choice of words. Whether the source flowing inwardly in those words carries the original feeling, whether the same feeling approaches the reader in the poem. After the translator has created this, the entire work has to be read by the author as a reader, standing at a distance. Their immense knowledge and understanding are not only required to understand the words on the right and left of that line, but also to understand the atmosphere created by that line. The arrangement of words should flow smoothly without disturbing the feeling being carried. Here the poet’s ingenuity and skill come into play.
“We call you the slaughterhouse
We call your hair the musk of ‘Khat’..”
Here ‘Khat’ means.. a region in China where fragrant things are found.. This explanation has been given…
Khat… Another meaning of this is crime, mistake.. This was appropriate.. If only this word had been added instead of that word, the slaughterhouse in the above line in Ula Misra would have had a natural meaning.. And the hair is called.. the musk of crime..
This source should have been understood.
All the symbols, metaphors and metaphors used in these ghazals and poems are taken from the world.
“Let your beautiful hair shine like the moon
Let your rule be in the kingdom of hair..”
This is a journey in search of a desire to reach the state of purity. The act of searching for the path of the beloved through worldly trade is constantly happening in this poem. It transforms a pain into a sweet feeling and gives rest.
“Love is an intoxicating drink, Khusro
Who can drink it without pain?”
Words should create the experience of getting the body. They should not fail in creating humanity. Their movement should be very subtle and should be able to carry the entire feeling. In this regard, Bode should be able to think.
This is a poetic world that evokes the intensity of emotion. The intense passion of the mind, the tireless expectation, the feeling of absorbing oneself and stimulating oneself are the metaphors that reach the peak of devotion.
The simple images used in this poetic world make us face several definitions of life.
“Flowers, you have come from the depths of the earth,
I do not know how those who are absorbed in the soil are doing, O God..”
The depth of the passion of this share should be noted.
The perfect shape of a human being is a circle. These couplets are two semicircles facing each other towards perfection. Creation itself is made up of two. This life is the feeling that moves towards the process of both coming together and becoming one….
“Khusro! What is the value of the heart in love? Unite your life and soul.”
The sacredness of the state of being is the main element seen in a lover.
This work is a work that can be read with devotion, setting aside the criteria of ghazal and poetry. His work ‘Sufi Bande Nawaz’ is also like that, unless one is immersed in it, that work cannot be understood. It demands the reader’s devotion… It introduces a captivating sphere of devotion. This work is also like that.
This is the reign of great hope in poetry. Amir Khusrau’s work is a good example of Ishq-e-Majaji becoming Ishq-e-Hakiqi. Ishq..is a state of search. We have seen many stages of that state in this work.