ವೇದಿಕೆಯ ಪ್ರಾಮಾಣಿಕ ಹೋರಾಟ ಇಲ್ಲಿ ಸಿಕ್ಕ ಗೌರವ ನಿಜಕ್ಕೂ ದೊಡ್ಡದು : ರಾಜು
ಮಾಧ್ಯಮ ಯಾವತ್ತೂ ನೈಜ ಹೋರಾಟದ ಜತೆಗೆ ನಿಲ್ಲುತ್ತದೆ: ನಾಗರಾಜ

ಕೊಪ್ಪಳ: ಬಲ್ಡೋಟ ಹಠಾವೋ ೧೬೦ನೇ ದಿನದ ಧರಣಿ ವೇದಿಕೆಯಲ್ಲಿ ಮಾಧ್ಯಮ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಿನ್ನಾಳ ಯುವಕರು ಎಸ್.ಕೆ. ಮೂವೀಸ್ ಹೆಸರಿನಲ್ಲಿ ಕಿಕ್ ಔಟ್ ಬಲ್ಡೋಟ ಹಾಗೂ ಕಾರ್ಖಾನೆಗಳು ಎನ್ನುವ ಬಾಧಿತ ಹಳ್ಳಿಯ ಜನರ ಸಂತ್ರಸ್ತರ ಗೋಳಿನ ಕಿರುಚಿತ್ರವನ್ನು ಬಿಡುಗಡೆ ಮಾಡಿ ಪ್ರೊಜೆಕ್ಟರ್ ಮೂಲಕ ಚಿತ್ರ ಪ್ರದರ್ಶನ ಮಾಡಲಾಯಿತು.
ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಜಾ ಸಂದೇಶ ದತ್ತಿ ಪ್ರಶಸ್ತಿ ಪಡೆದ ವರದಿಗಾರ ನಾಗರಾಜ ವೈ. ವೇದಿಎಕ ಮೂಲಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾಧ್ಯಮ ಮತ್ತು ಹೋರಾಟ ಎರಡೂ ಸಮಾಜದ ಬದಲಾವಣೆಗೆ ಕೆಲಸ ಮಾಡುತ್ತವೆ. ಏನಾದರೂ ವ್ಯವಸ್ಥೆಯಲ್ಲಿ ಅನ್ಯಾಯವಾದಾಗ, ಧ್ವನಿ ಇಲ್ಲದವರ ಧ್ವನಿಯಾಗಿ ಮಾಧ್ಯಮ ಮಿಡಿದರೆ ಹೋರಾಟ ಧ್ವನಿಯಾಗಿ ಅವರನ್ನು ದಡ ತಲುಪಿಸುತ್ತದೆ. ಇಂತ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆ ಎನಿಸುತ್ತದೆ. ಈ ಹೋರಾಟ ವೇದಿಕೆ ಅತ್ಯಂತ ವಿಶಿಷ್ಟವಾದದ್ದು. ಲಕ್ಷಾಂತರ ಜನರ ಜೀವ, ಆರೋಗ್ಯ ಉಳಿಸಲು ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ. ಈಗ ೫೦ ರಷ್ಟು ಹೋರಾಟ ತನ್ನ ಗತಿ ತಲುಪಿದೆ. ಇನ್ನರ್ಧ ದಾರಿ ಕ್ರಮಿಸಬೇಕು, ಅದಕ್ಕೆ ಎಲ್ಲಾ ಮಾಧ್ಯಮದವರು ಜೊತೆಗೆ ನಿಲ್ಲುತ್ತಾರೆ ಎಂದರು.
ಸಾಮಾಜಿ/ಮಾನವೀಯ ಮಿಡಿತ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಪತ್ರಕರ್ತ ರಾಜು ಬಿ. ಆರ್. ವೇದಿಕೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿರುವ ಎಲ್ಲಾ ಹೋರಾಟಗಾರರು ಸಮಾನವಾದ ಶ್ರಮ ಹಾಕಿ ದೊಡ್ಡ ಹೋರಾಟ ರೂಪಿಸಿದ್ದೀರಿ, ಇಡೀ ಈ ಭಗದಲ್ಲಿಯೇ ಇದೊಂದು ವಿಶಿಷ್ಟ ಹೋರಾಟ, ಜನರ ಬದುಕಿಗಾಗಿ ಇನ್ನೊಬ್ಬರು ಮಿಡಿಯುವದು ಬಹಳ ದೊಡ್ಡದು, ನಮ್ಮ ಲೇಖನ, ವರದಿ, ಪ್ರಶಸ್ತಿ ಎಲ್ಲಕ್ಕೂ ಮಿಗಿಲಾದುದು ಈ ವೇದಿಕೆಯ ಪ್ರಾಮಾಣಿಕ ಹೋರಾಟ, ಇಲ್ಲಿ ಸಿಕ್ಕ ಗೌರವ ನಿಜಕ್ಕೂ ದೊಡ್ಡದು ಎಂದರು.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಈ ಹೋರಾಟ ಮಾಧ್ಯಮದ ಸಹಕಾರದಿಂದ ಬೆಳೆದು ನಿಂತಿದೆ. ಕಿರುಚಿತ್ರ ಮಾಡಿದ ಯುವಕರು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಮೂಡಿಸಿ ಕೊಪ್ಪಳ ಜನರ ಸೇವೆ ಮಾಡಲಿ ಎಂದರು.
ವೇದಿಕೆಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಿಳಾ ನಾಯಕಿ ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ ಮಾತನಾಡಿದರು.
ಧರಣಿಯಲ್ಲಿ ಮಹಿಳಾ ಮುಖಂಡರಾದ ಕಾವ್ಯಾ ಗಡಾದ, ವಿದ್ಯಾ ನಾಲ್ವಾಡ, ಪ್ರಕಾಶಕಿ ಮಾಲಾ ಬಡಿಗೇರ, ಕಿರುಚಿತ್ರ ನಟಿ ಪ್ರಿಯಾಂಕಾ ಕಿನ್ನಾಳ, ಇಂಜಿನೀಯರ್ ಅನುರಾಧಾ, ನಿರ್ದೇಶಕ ಸಲ್ಮಾನ್ ಖಾನ್ ಕಿನ್ನಾಳ, ನಟ ಹನುಮೇಶ ಕಿನ್ನಾಳ, ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಪ್ರಕಾಶಕ ಡಿ.ಎಂ. ಬಡಿಗೇರ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಎಲ್. ಎಫ್. ಪಾಟೀಲ್, ಶರಣು ಶೆಟ್ಟರ್, ರಾಘವೇಂದ್ರ ನೇಕಾರ, ಶಾಂತಯ್ಯ ಅಂಗಡಿ, ಈಶಪ್ಪ ದೊಡ್ಡಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಗಂಗಾಧರ ಖಾನಾಪೂರ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಬಾವಿ, ಕಾಶಪ್ಪ ಚಲವಾದಿ, ಶಿವರಾಜ ಚಲವಾದಿ, ದುರುಗಪ್ಪ ಕನಕಮನಿ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಪಂಪಣ್ಣ ಚಿಂತಪಲ್ಲಿ, ಬಸಪ್ಪ ಕಲಕೇರಿ, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕೊಡೇಕಲ್ ಇದ್ದರು.
Comments are closed.