ಭಕ್ತರ ಮನದಲ್ಲಿ ಶ್ರೀಶೈಲ ಮಲ್ಲಯ್ಯನ ವಾಸ – ಶ್ರೀಶೈಲ ಜಗದ್ಗುರು ಡಾ|| ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ

0

Get real time updates directly on you device, subscribe now.

ಕೊಪ್ಪಳ,: ಪಾದಯಾತ್ರೆ ಆರಂಭವಾದರೆ ಮಲ್ಲಿಕಾರ್ಜುನ ಸ್ವಾಮಿ ಶ್ರೀಶೈಲ ದೇವಸ್ಥಾನದಲ್ಲಿ ಇರುವುದಿಲ್ಲ, ಪಾದಯಾತ್ರೆ ಮಾಡುವ ಭಕ್ತರ ಮನದಲ್ಲಿ ಇರುತ್ತಾನೆ ಎಂದು ಆಂಧ್ರದ ಶ್ರೀಶೈಲ ಮಹಾಪೀಠದ ಶ್ರೀಶ್ರೀಶ್ರೀ 1008 ಜಗದ್ಗುರು ಡಾ|| ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾಂಗಳವರು ಹೇಳಿದರು.

ನಗರದ ಹೊಸಪೇಟ ರಸ್ತೆ, ಮರಿಸ್ವಾಮಿ ಬಡಾವಣೆಯ ಶ್ರೀ ರೇಣುಕಾಚಾರ್ಯ ಮಂದಿರದ ಸಭಾಭವನದಲ್ಲಿ ಶ್ರೀಶೈಲ ಕ್ಷೇತ್ರದರ್ಶನ ಯಾತ್ರಾಬಳಗದಿಂದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.

ಯುಗಾದಿ ಹಬ್ಬದ ವೇಳೆ ಲಕ್ಷಾಂತರ ಭಕ್ತರು

ವಿವಿಧ ಭಾಗಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಬರುತ್ತಾರೆ. ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇದ್ದಿಲ್ಲ.‌ ಆದರೆ, ಈಗಿನ ಕಾಲದಲ್ಲಿ ಎಲ್ಲೆಡೆ ಸಾರಿಗೆ ವ್ಯವಸ್ಥೆ ಸಾಕಷ್ಟು ಇದ್ದರೂ ಸಹ ಭಕ್ತರು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಆಗಮಿಸುತ್ತಾರೆ. ಇದು ಭಕ್ತರು ಮಲ್ಲಯ್ಯನ ಸ್ವಾಮಿ ಮೇಲೆ ಇಟ್ಟಿರುವ ಭಕ್ತಿಯನ್ನು ತೋರಿಸುತ್ತದೆ ಎಂದರು. ಶ್ರೀಶೈಲ ಯಾತ್ರಬಳಗದ ಸಂಚಾಲಕರಾದ ಜಗದೀಶ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈನಳ್ಳಿ- ಬಿಕನಳ್ಳಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಳವಂಡಿ ಹಿರೇಮಠದ‌ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಂಪಸಾಗರ ಹಿರೇಮಠ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು,

ಶ್ರೀಶೈಲ ಕ್ಷೇತ್ರದರ್ಶನ ಬಳಗದ ಹಂಪಯ್ಯ ಬನ್ನಿಮಠ, ಪಂಪಯ್ಯ ಹಿರೇಮಠ, ಬಸವರಾಜ, ರುದ್ರೇಶ ವಿ, ಗವಿಸಿದ್ದಪ್ಪ, ಶಿವಶಾಂತವೀರ ಹಿರೇಮಠ, ಮಂಜುನಾಥ ಹಿರೇಮಠ, ಗಿರೀಶ್ ಅಂಗಡಿ, ಗೋವಿಂದರಾಜ ಶೆಟ್ಟರ್, ಶರಣಪ್ಪ ತುಮರಗುದ್ದಿ, ಲೇಪಾಕ್ಷಪ್ಪ ಆನಂದಹಳ್ಳಿ, ಶ ಶೋಭಾ ಪಂಡಿತಾರಾದ್ಯ, ಜಯಶ್ರೀ ಶಿವಶಾಂತವೀರಸ್ವಾಮಿ, ನಿರ್ಮಲಾ ಷಡಕ್ಷರಯ್ಯ, ಶೋಭಾ ನಿಂಗನಗೌಡ್ರು, ಜಯಶ್ರೀ, ಅಶೋಕ, ಕಸ್ತೂರಿ, ಪ್ರಕಾಶ, ಮಮತಾ ಮಂಜುನಾಥಸ್ವಾಮಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಕೊಪಣ ಟ್ರಸ್ಟ್ ವತಿಯಿಂದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮವನ್ನು ವರಪ್ರಸಾದ ಸ್ವಾಗತಿಸಿ, ಚೇತನಕುಮಾರ ಹಿರೇಮಠ ನಿರೂಪಿಸಿದರು. ಬೆಳಗ್ಗೆ ಶ್ರೀ ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ, ಶ್ರೀ ಭ್ರಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾಪರ್ವ ಪೂಜೆ, ಶ್ರೀ ಶಿವಶಕ್ತಿ ಧ್ಯಾನ ಭಜನೆ, ಭಕ್ತಿ ಸಂಗೀತ ಕಾರ್ಯಕ್ರಮ, ತುಲಭಾರ ಸೇವೆ ಸೇರಿ ಅನೇಕ ಕಾರ್ಯಕ್ರಮಗಳು ಜರುಗಿದವು.

Get real time updates directly on you device, subscribe now.

Leave A Reply

Your email address will not be published.

error: Content is protected !!