ಜಾಮೀನಿಗಾಗಿ ಲಂಚಕ್ಕೆ ಬೇಡಿಕೆ – ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ
ಕೊಪ್ಪಳ : ಪ್ರಕರಣವೊಂದರಲ್ಲಿ ಸ್ಟೇಷನ್ ಬೇಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು DCRE ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸರನ್ನು ಕೊಪ್ಪಳ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ. ಮಾರುತಿ ಹಾಗೂ ಚಂದಲಿಂಗ ಲೋಕಾಯುಕ್ತ ಬಲೆಗೆ ಬಿದ್ದವರು.

ಫೋನ್ ಪೇ ಮೂಲಕ ಬೇರೆ, ಬೇರೆಯವರ ಅಕೌಂಟಿಗೆ ೧೮ ಸಾವಿರ ರುಪಾಯಿ ಗಳನ್ನೂ ಹಾಕಿಸಿಕೊಂಡಿದ್ದರು ಎನ್ನಲಾಗಿದ್ದು ಈ ಕುರಿತು ಮೆಹಬೂಬ್ ಪಾಷಾ ಎನ್ನುವವರು ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಾಯುಕ್ತ Dysp ಲೋಕೇಶ್ ಇವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸುನಿಲ್ ಎಂ. ಹಾಗೂ ಚಂದ್ರಪ್ಪ ಇವರ ತಂಡ ದಾಳಿ ಮಾಡಿ ಬಂಧಿಸಿದೆ.
Comments are closed.