ತಾಳಕನಕಾಪೂರ ಗ್ರಾಮದಲ್ಲಿ ಸಂಭ್ರಮದ ಶ್ರೀ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ
ಕೊಪ್ಪಳ, ೨- ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಶ್ರೀ ದ್ಯಾಮಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಹಾಗೂ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಬಿಸರಳ್ಳಿಯ ಶ್ರೀ ಗವಿಮಠದ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮಿಗಳು ನೆರವೇರಿಸಿದರು ಹಾಗೂ ಅಂದು ಚಂಡಿಹೋಮದ ಮೂಲಕ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಜಾತ್ರಾ ಮಹೋತ್ಸವ ಎರಡನೇ ದಿನ ಮಾ.೩೦ರಂದು ಶ್ರೀ ದ್ಯಾಮಮ್ಮ ದೇವಿಯನ್ನು ಕಿನ್ನಾಳ ಗ್ರಾಮದಿಂದ ವಿವಿಧ ವಾದ್ಯಗಳ ಮೂಲಕ ಕರೆತಂದು ಗಂಗಾಪೂಜೆ, ಗ್ರಾಮಸಂಚಾರ, ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸಂಭ್ರಮದಿAದ ಜರುಗಿದವು.
ಮಾ. ೩೧ ಜಾತ್ರಾ ಮಹೋತ್ಸವದಂದು ಭಕ್ತರಿಂದ ಧೀರ್ಘದಂಡ ನಮಸ್ಕಾರ, ಪ್ರಸಾದ ಸೇವೆ, ಸಾಧಕರಿಗೆ ಸನ್ಮಾನ, ಸೇರಿದಂತೆ ವಿವಧ ಧಾರ್ಮಿ ಕಾರ್ಯಕ್ರಮಗಳು ಜರುಗಿದವು.
ಏ.೧ ರಂದು ಬುಧವಾರ ಮುಂಗೈ ಆಟದ ಸ್ಪರ್ಧೆಯಲ್ಲಿ ವಿವಿಧ ಗ್ರಾಮದ ಯುವಕರು ಭಾಗವಹಿಸಿ ಆಕರ್ಷಕ ಆಟಗಳನ್ನು ಆಡಿದರು.
ಒಗ್ಗಟ್ಟಿನಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ- ಸಂಗಣ್ಣ
ಕೊಪ್ಪಳ, ೨- ಗ್ರಾಮೀಣ ಭಾಗದ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ, ಅಭಿವೃದ್ಧಿ ಹಾಗೂ ಭಕ್ತಿಗೆ ತಾಳಕನಕಾಪೂರ ಇತರ ಗ್ರಾಮಗಳಿಗೆ ಮಾದರಿ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಜರುಗಿದ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳ ಸುಧಾರಣೆ ಅವಶ್ಯಕವಾಗಿದ್ದು ಗ್ರಾಮದ ಸರ್ವರ ಒಗ್ಗಟ್ಟು ಹಾಗೂ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಮದಲ್ಲಿ ದೇವಿ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಒಗ್ಗಟ್ಟಿನಿಂದ ಮತ್ತು ಶ್ರದ್ದಾ ಭಕ್ತಿಯಿಂದ ದೇವಿ ಜಾತ್ರೆ ಮಾಡಿ ಸಣ್ಣ ಗೊಂದಲವಿಲ್ಲದೆ ವಿಜೃಂಭಣೆಯಿAದ ಜಾತ್ರೆ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆಂದು ಪ್ರಶಂಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ಮುಖಂಡರಾದ ಹನುಮಂತಪ್ಪ ಅರಸನಕೇರಿ, ಮಹಾಂತೇಶ ಸಂಗಟಿ, ಸಂಗಮೇಶ ಬಾಗವಾಡಗಿ, ಗಂಗಾಧರಸ್ವಾಮಿ ಇರಕಲ್ಲಗಡ, ಮಂಜುನಾಥ ಬಿ.ಟಿ.ಪಾಟೀಲ, ವೆಂಕಟೇಶ ಜಬ್ಬಲಗುಡ್ಡ, ಮಂಜುನಾಥ ನಿಟ್ಟಾಲಿ, ಕಲಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರಪ್ಪ ಹಟ್ಟಿ ಸೇರಿದಂತೆ ಹಲವಾರು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಳಕನಕಾಪೂರ ಗ್ರಾಮ ಚಿಕ್ಕದಾಗಿದ್ದರೂ ಸಹ ಸಂಸ್ಕಾರ ಹಾಗೂ ಭಕ್ತಿಯ ನೆಲೆ – ಶಿವಶಾಂತವೀರ ಶ್ರೀಗಳು
ಕೊಪ್ಪಳ, ೨- ತಾಳಕನಕಾಪೂರ ಗ್ರಾಮ ಚಿಕ್ಕದಾಗಿದ್ದರೂ ಸಹ ಸಂಸ್ಕಾರ ಹಾಗೂ ಭಕ್ತಿಯ ನೆಲೆಯಾಗಿದೆ ಎಂದು ಬಿಸರಳ್ಳಿಯ ಶ್ರೀ ಗವಿಮಠದ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಜರುಗಿದ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಇಂದಿನ ಕಾಲದಲ್ಲಿ ವಿವಿಧ ದುಶ್ಚಟಗಳಿಂದ ಗ್ರಾಮಗಳು ಹಾದಿ ತಪ್ಪುತ್ತಿದ್ದು ಮಾತೆಯರು ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಸಂಸ್ಕಾರವAತರನ್ನಾಗಿ ಮಾಡಿ ಕುಟುಂಬ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ತಾಯAದಿರು ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಶಿಕ್ಷಣವಂತರನ್ನಾಗಿ ಮಾಡಿ ಪ್ರತಿಯೊಂದ ಮಗುವಿಗು ಶಿಕ್ಷಣ ಕೊಡಿಸಲು ಪಾಲಕರು ಹಾಗೂ ಗ್ರಾಮದ ಮುಖಂಡರು ಕಾಳಜಿವಹಿಸಬೇಕೆಂದು ಸಲಹೆ ನೀಡಿದರು.
ಗ್ರಾಮದೇವತೆಯ ದೇವಸ್ಥಾನ ಪುನ್ ನಿರ್ಮಾಣ ಮಾಡಿ ಕಳಸಾರೋಹಣ ನೆರವೇರಿಸಿರುವುದು ಗ್ರಾಮದ ಸಕಲ ಅಭಿವೃದ್ಧಿಗೆ ದೇವಿಯ ಆರ್ಶೀವಾದ ಲಭಿಸಲಿದೆ. ಪ್ರಕೃತಿ ಹಾಗೂ ಮನುಷ್ಯನಿಗೆ ದೇವಸ್ಥಾನಗಳು ಸಂಪರ್ಕ ಕೊಂಡಿಯAತೆ ಕೆಲಸ ನಿರ್ವಹಿಸುತ್ತವೆ. ಪ್ರತಿಯೊಬ್ಬರಲ್ಲಿಯು ಧರ್ಮ ಜಾಗೃತಿ ಅಗತ್ಯ ಎಂದು ಹೇಳಿದರು.
Comments are closed.