ಶಾಂತಿದೂತ ಯೇಸುವಿನ ಸೂಕ್ತಿಗಳು ಜಗತ್ತಿಗೆ ಆದರ್ಶ: ಪಾಟೀಲ್
Baldota Hatao Dharani completes 155 days;
ಬಲ್ಡೋಟ ಹಟಾವೋ ಧರಣಿ 155 ದಿನ ಪೂರ್ಣ;
ಕೊಪ್ಪಳ: ನಗರಸಭೆ ಮುಂದೆ ನಡೆದ ಬಲ್ಡೋಟ ಕಾರ್ಖಾನೆ ಹಟಾವೋ ಕೊಪ್ಪಳ ಬಚಾವೋ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ, ಆರೋಗ್ಯ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ನದಿ ವಿಷ ಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು, ಬಾಧಿತ ಹಳ್ಳಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಆಗ್ರಹಿಸಿ ನಡೆದ 155ನೇ ದಿನದ ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಲ್.ಎಪ್. ಪಾಟೀಲ್ ಮಾತನಾಡಿಧರು. ಯೇಸು ಕ್ರಿಸ್ತ ಜಗತ್ತಿಗೆ ಶಾಂತಿ ಸಾರಿದ ಕ್ಷಮಾಗುಣಿ. ಆತನು ಶಿಲುಬೆಗೆ ಏರಿ ಶಿಲುಬೆಗೇರಿಸಿದವರನ್ನೇ ಕ್ಷಮಿಸು ಎಂದು ಹೇಳಿದ ದಿನವಿದು ಎಂದರು. ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸೋಸೈಟಿಯಿಂದ ಧರಣಿ ನಿರತರಿಗೆ ಲಘು ಪಾನೀಯ ಮಜ್ಜಿಗೆಯನ್ನು ಹಂಚಿ ಶಾಂತಿದೂತ ಯೇಸುವಿನ ಸ್ಮರಣೆ ಮಾಡಿರಿ ಎಂದು ಕೇಳಿಕೊಂಡ ಅನುಯಾಯಿಗಳನ್ನು ಉದ್ದೇಶಿಸಿ ಮಾತು ಮುಂದುವರೆಸಿದ ಪಾಟೀಲ್ ರು ಯೇಸುವಿನ ಮರಣವನ್ನು ಪಾಪದ ಮೇಲಿನ ವಿಜಯ, ಮಾನವ ಕುಲಕ್ಕೆ ಶಾಶ್ವತ ಜೀವನವನ್ನು ನೀಡುವ ತ್ಯಾಗ ಎಂದು ಭಾವಿಸಿ, ಇಂದು ಹಣ್ಣು ಹಾಲು ಮಜ್ಜಿಗೆ ಸಿಹಿ ಹಂಚಿ ನೆರೆಯವರನ್ನು ಪ್ರೀತಿಸು ಎಂದು ಹೇಳುವುದು ಇವರ ಆದರ್ಶವಾಗಿದೆ. ಈತನ ಸೂಕ್ತಿಗಳು ಮಾನವನ ಸಂಸ್ಕಾರಕ್ಕೆ ದಾರಿ ದೀಪವಾಗುತ್ತವೆ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ವಿ.ಬಿ.ರಡ್ಡೆರ, ಡಾ. ಬಸವರಾಜ ಪೂಜಾರ, ಬಿ.ಜಿ. ಕರಿಗಾರ, ಎಂ.ಎಸ್. ಗಂಟಿ, ದೊಡ್ಡಬಸಪ್ಪ ಅಂಗಡಿ, ರಾಜಶೇಖರ ಏಳುಬಾವಿ, ಫಾಸ್ಟರ್ ಪೀಟರ್ ಪಾಲ್, ಕಿಟ್ಟು ಪ್ಯಾಟ್ರೋಟಿಕ್, ಪ್ರಕಾಶ ದೇವರಮನೆ, ಸಂಗಮ್ಮ ರೇವಣಕಿ, ತುಕಾರಾಮ ಪಾತ್ರೋಟಿ, ಚನ್ನವೀರಯ್ಯ ಹಿರೇಮಠ, ಪಂಪಣ್ಣ ಚಿಂತಪಲ್ಲಿ, ಆದಯ್ಯ ರೇವಣಕಿ, ನಾಗರಾಜ ಕುಷ್ಟಗಿ, ಭೀಮಪ್ಪ ಯಲಬುರ್ಗಾ, ಮಂಗಳೇಶ ರಾಠೋಡ್, ಶಿವಪ್ಪ ಹಲಗೇರಿ, ಹನುಮಪ್ಪ ಕಟಗಿ, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.
Baldota Hatao Dharani completes 155 days;
Koppal: Baldota factory hatao Koppal Bachao, 20 factories to save the lives and health of 50 thousand people in the affected villages, Basapura Lake to be opened to the public, factories that are poisoning the Tungabhadra River to be sealed, and a special package to be announced for the revival of the affected villages, was the 155th day of the dharna held in front of the Municipal Council, demanded by retired principal L.F. Patil. Jesus Christ is the one who preached peace to the world. He said this is the day when he said to forgive those who crucified him by going up on the cross. Addressing the followers of the Protestant Christian Society who had asked them to remember the messenger of peace, Jesus, by distributing light drinks and buttermilk to the protesters, Patil continued his speech, saying that considering Jesus’ death as victory over sin and a sacrifice to give eternal life to mankind, his ideal is to say today, “Share fruits, milk, buttermilk and sweets and love your neighbors.” He said that his sayings will be a guiding light for human civilization.
The main convener of the protest, Allama Prabhu Bettadoor, convener Mallikarjuna B. Gonal, Dr. V.B. Raddera, Dr. Basavaraj Poojara, B.G. Karigara, M.S. Ganti, Doddabasappa Angadi, Rajashekar Elubavi, Foster Peter Paul, Kittu Patriotic, Prakash Devaramane, Sangamma Revanaki, Tukarama Patroti, Channaveeraiah Hiremath, Pampanna Chintapally, Adaya Revanaki, Nagaraja Kushtagi, Bhimappa Yelaburga, Mangalesh Rathod, Shivappa Halageri, Hanumappa Katagi, Mahadevappa Mavinamadu, Vijaya Mahantesh Hatti, Shivappa Jalli were there.
Comments are closed.