ರಾಜ್ಯ ಎಸ್ ಎಸ್‌ ಕೆ ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

State SSK Development Struggle Committee comes into existence

Get real time updates directly on you device, subscribe now.

ಕುಷ್ಟಗಿ ಮಾ ೨೩ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ , ಅತ್ಯಂತ ಹಿಂದುಳಿದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ರಾಜ್ಯದ ಹಲವಾರು ಕಡೆಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕುತ್ತಿರುವ ಈ ಸಮಾಜಕ್ಕೆ ಸರಕಾರವು ಯಾವುದೇ ನಿಗಮ ಮಂಡಳಿ ಸ್ಥಾಪಿಸದೆ ನೈತಿಕವಾಗಿ ಸಮಾಜವು ಬಲವಿಲ್ಲದಂತಾಗಿದೆ.

ಪ್ರತಿಯೊಂದು ಹೋರಾಟದಿಂದಲೆ ಸಾದ್ಯ ಎಂಬ ಪರಿಕಲ್ಪನೆ ಹಿನ್ನೆಲೆಯಲ್ಲಿ ಸಮಾಜದ ಮೂಲ ಪುರುಷ ಶ್ರೀಸಹಸ್ರಾರ್ಜುನ ಮಹಾರಾಜರ ಜಯಂತಿ ಸರಕಾರದಿಂದ ಆಚರಿಸಬೇಕು ಎಂದು ಈಗಾಗಲೇ ರಾಜ್ಯದ ಎಲ್ಲಾ ಪಂಚಕಮೀಟಿಯ ವತಿಯಿಂದಾ ಎಲ್ಲಾ ಕ್ಷೇತ್ರದ ಶಾಸಕ ಸಚಿವರಿಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲಾ ಮತ್ತು ಈ ಸಮಾಜದ ಅಭಿವೃದ್ಧಿಗೆ ರಾಜ್ಯ ಸರಕಾರವು ಪ್ರತ್ಯೇಕವಾಗಿ ನಿಗಮ ಮಂಡಳಿಯನ್ನು ಸ್ಥಾಪಿಸಿ ನಿರುದ್ಯೋಗ ನಿವಾರಣೆಗೆ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು,ಹಾಗೂ ಈ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರಿಸಿ ಪ್ರತ್ಯೇಕ ಮೀಸಲಾತಿ ನೀಡಿ ವಿದ್ಯಾವಂತ ಯುವಕರಿಗೆ ಸರಕಾರಿ ಉದ್ಯೋಗ ಸಿಗುವಂತೆ ಮಾಡಬೇಕು. ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದಾ ಸಮಾಜದ ಮುಖಂಡರನ್ನು ಆಹ್ವಾನಿಸಿ ಕೊಪ್ಪಳದ ಭಾಗ್ಯನಗರದಲ್ಲಿನ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಇಂದು ನಡೆದ ರಾಜ್ಯ ಎಸ್ ಎಸ್‌ ಕೆ ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ಕರ್ನಾಟಕ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಸಮಾಜದ ಗುರು ಹಿರಿಯರು, ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸಮಾಜದ ಬಂಧುಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು .

 

ಈ ಒಂದು ಕಾರ್ಯಕ್ರಮದಲ್ಲಿ ಎಲ್ಲರ ಪರವಾನಿಗೆ ಪಡೆದು, ಎಲ್ಲರ ಸಹಮತದೊಂದಿಗೆ  ಹಾಲಿ ರಾಜ್ಯ ಸಂಚಾಲಕರಾದ ಹನುಮಂತಸಾ ಸಿ. ನಿರಂಜನ ಸಾ. ಹುಬ್ಬಳ್ಳಿ ಇವರ ಸೂಚನೆ ಮೇರಿಗೆ, ಕರ್ನಾಟಕ ರಾಜ್ಯ ಅಧ್ಯಕ್ಷರನ್ನಾಗಿ ಕೃಷ್ಣಾಸಾ. ಎಂ. ಪವಾರ(KMP) ಸಾ. ರಾಣೆಬೆನ್ನೂರು  ಇವರನ್ನು  ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಂತರ ಅಲ್ಲಿ ಉಪಸ್ಥಿತರಿದ್ದ ನಮ್ಮ ಎಲ್ಲಾ ಭಾಗದ ಅಧ್ಯಕ್ಷರ ಒಪ್ಪಿಗೆಯನ್ನು ಪಡೆದು ನಾವು ರಾಜ್ಯ ಗೌವರಾಧ್ಯಕ್ಷರನ್ನು

ಜವಾಹರಲಾಲಸಾ ಅಂಟಾಳಮರದ ಸಾ. ಕೊಪ್ಪಳ  ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು,

ಅದೇರೀತಿಯಾಗಿ ರಾಜ್ಯ ಉಪಾಧ್ಯಕ್ಷರನ್ನಾಗಿ  ಶರಣುಸಾ ನಗಾರಿ ಸಾ. ಕಾರಟಗಿ ಹಾಗೂ  ಎಲ್ಲೂಸಾ ಬದಿ ಸಾ. ಸಿಂಧನೂರ ಇವರನ್ನು ರಾಜ್ಯ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅದೇರೀತಿ ರಾಜ್ಯ ಸಂಚಾಲಕರನ್ನಾಗಿ  ಹನುಮಂತಸಾ ಸಿ. ನಿರಂಜನ ಸಾ. ಹುಬ್ಬಳ್ಳಿ ಇವರನ್ನು ಸರ್ವಾನುಮತದಿಂದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದೇ ರೀತಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ  ನಾಗರಾಜ ಹನಮಂತಸಾ ನಗರಿ ಸಾ. ಇಳಕಲ್ ಇವರನ್ನು ಮತ್ತು ಸಹ ಕಾರ್ಯದರ್ಶಿಯಾಗಿ ರವಿ ದಾಮಜಿ ಸಾ. ಬಾಗಲಕೋಟೆ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅದೇ ರೀತಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಟಿ. ಕಬಾಡಿ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅದೇರೀತಿಯಾಗಿ ರಾಜ್ಯ ಖಜಾಂಚಿಯಾಗಿ  ನಾರಾಯಣಸಾ ಪವಾರ ಸಾ. ಲಕ್ಷ್ಮೇಶ್ವರ ಮತ್ತು ಸಹ ಖಜಾಂಚಿಯಾಗಿ  ಸಂಜೀವ ಖಟವಟೆ ಸಾ. ಗದಗ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮುಂಬರುವ ದಿನಗಳಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಸಮಾಜದ ಸಂಘಟನೆ ಮತ್ತು ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರದ ಗಮನಸೆಳೆಯುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಭೆಗಳನ್ನು ಮಾಡಿ ಹೋರಾಟಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳುವ ಜೋತೆಗೆ ಸಂಘಟನೆಗೆ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಣಯ ಮಾಡಿದರು ಆರಂಭದಲ್ಲಿ ಸಮಾಜದ ವಿವಿಧ ಭಾಗಗಳಿಂದ ಬಂದ ಅಧ್ಯಕ್ಷರು ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

State SSK Development Struggle Committee comes into existence

Get real time updates directly on you device, subscribe now.

Comments are closed.

error: Content is protected !!