ವಿಷ್ಣುತೀರ್ಥ ನಗರದ ಶ್ರೀ ವೀರಾಂಜನೇಯ ಸ್ವಾಮಿ ಮಂದಿರ ‘ವಾರ್ಷಿಕೋತ್ಸವ’

Get real time updates directly on you device, subscribe now.

ಕುಷ್ಟಗಿ : ಪಟ್ಟಣದ 4ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ವಿಷ್ಣುತೀರ್ಥ ನಗರದ ಉದ್ಯಾನವನ ಜಾಗೆಯ ಬಳಿ ಯಲ್ಲಿ ಸಾರ್ವಜನಿಕರಿಂದ ಪ್ರತಿಸ್ಥಾಪಿಸಲ್ಪಟ್ಟ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವ ಸೋಮವಾರ ಭಕ್ತರ ಸಡಗರದ ನಡುವೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಶ್ರೀ ಆಂಜನೇಯಸ್ವಾಮಿ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ನೈವೇದ್ಯ ಸಲ್ಲಿಸಲಾಯಿತು. ಬಳಿಕ ಶ್ರೀ ಅಡವಿರಾಯ ಮಂದಿರದ ಅರ್ಚಕರು ಪವನ ಹೋಮ ನಡೆಸಿದರು. ವಿಷ್ಣು ತೀರ್ಥ ನಗರ ಸೇರಿದಂತೆ ಕುಷ್ಟಗಿ ಪಟ್ಟಣದ ವಿವಿಧ ಪ್ರದೇಶದ ನಿವಾಸಿಗಳು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.

ಮಹಿಳೆಯರು, ಮಕ್ಕಳು, ವೃದ್ಧರು ಶ್ರೀ ವೀರಾಂಜನೇಯ ಸ್ವಾಮಿ ದರ್ಶನ ಭಾಗ್ಯ ಪಡೆದು ಫಲಪುಷ್ಪ ಸಮರ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿ, ಬೇಡಿಕೆ ಗಳಿಗೆ ಪ್ರಾರ್ಥನೆ ಸಲ್ಲಿಸಿದರು.

ನಂತರ ದೇವಸ್ಥಾನದ ಸೇವಾ ಸಮಿತಿಯವರು ಕಲ್ಪಿಸಿದ್ದ ಮಹಾದಾಸೋಹ ಸೇವೆಯಲ್ಲಿ ನೂರಾರು ಜನ ಭಕ್ತರು, ಪ್ರಸಾದ ಸ್ವೀಕರಿಸಿ ಶ್ರೀ ವೀರಾಂಜನೇಯ ಸ್ವಾಮಿ ಕೃಪೆಗೆ ಪಾತ್ರರಾದರು.

ವೀಕ್ಷಕರೆ ದೇವಸ್ಥಾನ ಹೇಗೆ ಸ್ಥಾಪನೆಯಾಯಿತು, ಅದರ ಜೀರ್ಣೋದ್ಧಾರ ಹೇಗೆ ನಡೆಯುತ್ತಿದೆ, ನಿವಾಸಿಗಳ ಸಹಕಾರ ಕುರಿತು ಶ್ರೀ ವೀರಾಂಜನೇಯ ಸ್ವಾಮಿ ಭಕ್ತ ಹೋಟೆಲ್ ಉದ್ಯಮಿ ರಾಘವೇಂದ್ರ ಸಾ ಸಾವಜಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಹೀಗೆ..

Get real time updates directly on you device, subscribe now.

Comments are closed.

error: Content is protected !!