ಕನಕಗಿರಿಯಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ : ವೃದ್ಧನ ಮೇಲೆ ದಾಳಿ
Stray dogs again in Kanakagiri: Elderly man attacked
ಪಟ್ಟಣ ಪಂಚಾಯತ ಕ್ರಮವಹಿಸಲು ಆಗ್ರಹ :ಬಸುವರಾಜ ಬಟ್ಟಿ
ಕನಕಗಿರಿ : ಪಟ್ಟಣದ 17ನೇ ವಾರ್ಡಿನ ಮಾರಮ್ಮ ಕ್ಯಾಂಪ್ ನಿವಾಸಿಯಾದ ಸಣ್ಣದುರ್ಗಪ್ಪ ದಾಸರ ಇವರಿಗೆ ಬೀದಿ ನಾಯಿ ಯೊಂದು ಬಳಕಲಿಗೆ ಬಲವಾಗಿ ಕಚ್ಚಿದೆ. ಭಾದಿತ ವೃದ್ಧನು 70ರ ವಯಸ್ಸಿನವರಾಗಿದ್ದು, ನಾಯಿ ತೀವ್ರವಾಗಿ ಕಚ್ಚಿದ್ದರಿಂದ ಕಾಲಿಗೆ ಗಾಯ ಉಂಟಾಗಿ ರಕ್ತಸ್ರಾವಗೊಂಡಿದೆ. ಈಗಾಗಲೇ ನಾಯಿಯು ಸುಮಾರು 7- 8 ಜನರಿಗೆ ಕಚ್ಚಿದೇಯಂದು ಸ್ಥಳೀಯರಾದ ಬಸವರಾಜ್ ಬಟ್ಟಿ ಹೇಳಿದರು. ರಸ್ತೆಯಲ್ಲಿ ಚಿಕ್ಕ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುತ್ತಾರೆ, ನಾಯಿಯ ಕಾಟಕ್ಕೆ ಸ್ಥಳೀಯ ಜನರು ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ಯಾರೇ ಬಂದರೂ ಅವರ ಮೇಲೆ ನಾಯಿಯು ದಾಳಿ ಮಾಡುತ್ತದೆ. ಹಾಗಾಗಿ ಸಾರ್ವಜನಿಕರು ಓಡಾಡುವುದು ಕಷ್ಟಕರ ವಾಗಿದೆ , ಕನಕಗಿರಿ ಪಟ್ಟಣದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ಸದಸ್ಯರಾ ಜೊತೆಗೆ ಸೇರಿ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೆ ಹಾಗೂ ಅನೇಕ ಜನರಿಗೂ ಕಚ್ಚಿ ಸುದ್ದಿಯಾಗಿದ್ದರು ಸಹ, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ಬೇಸರ ತಂದಿದೆ,ಈಗಲಾದರೂ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಪ ಪಂ. ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ ಎಂದರು .

ನಾಯಿ ಕಚ್ಚಿದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ. ಇವತ್ತು ನನ್ನ ವಾರ್ಡಿನಲ್ಲಿ ವೃದ್ಧನ ಮೇಲೆ ನಾಯಿದಾಳಿ ಮಾಡಿದೆ, ಅವರಿಗೆ ಚಿಕಿತ್ಸೆ ಜೊತೆಗೆ ಪರಿಹಾರ ಕೊಡಿಸಲು ಪ ಪಂ. ಮುಖ್ಯಧಿಕಾರಿಗಳು ಗಮನಕ್ಕೆ ತರುತ್ತೇನೆ…
ಹನುಮಂತ ಬಸರಿಗಿಡದ್..
17 ವಾರ್ಡಿನ ಪಟ್ಟಣ ಪಂಚಾಯತ ಸದಸ್ಯ*
Comments are closed.