ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರ ನಾಶ ; ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಬೇಸರ

Get real time updates directly on you device, subscribe now.

ಕುಷ್ಟಗಿ ; ಇಂದಿನ ಆಧುನಿಕ ಯುಗದ ಜನತೆ ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಸರಸ್ವತಿ ದೇವಿ ಬೇಸರ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಇವರುಗಳು ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪರಿಸರ ಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಪರಿಸರವನ್ನು ನಾಶಪಡಿಸಿದ ವ್ಯಕ್ತಿಗಳಿಗೆ ಯಾವುದೇ ಮುಲಾಜಿಲ್ಲದೆ ಕಾನೂನಿನ ಪ್ರಕಾರ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.
ಪ್ರತಿಯೊಬ್ಬರು ನಿಮ್ಮ ಮನೆ ಮುಂದೆ ಗಿಡ, ಮರಗಳನ್ನು ಬೆಳಸಿ ಪರಿಸರವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಶಂಭುಲಿಂಗಯ್ಯ ಮೂಡಿಮಠ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಬಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಚೈತ್ರಾ ಮೆಣಸಿನಕಾಯಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಸತೀಶ್, ಡಿಎಪ್ಓ ಶಿವಶಂಕರ ಹಾಗೂ ಮಲ್ಲಿಕಾರ್ಜುನ, ವಕೀಲರಾದ ಡಿ.ಗೋಪಾಲರಾವ, ಎಸ್ .ಕೆ.ಪಾಟೀಲ್ , ಶಿವುಕುಮಾರ ದೊಡ್ಡಮನಿ, ಎಮ್ .ಬಿ ಕೊನಸಾಗರ, ರಾಮಣ್ಣ ಮೇಟಿ, ಶಾರದಾ ಯಾಳಗಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!