ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಿ ಜಿ ಐ ಇನ್ಫೆರ್ಮೆಷನ್ ಅಂಡ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು,
ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಹಾಗೂ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗೋಸಲದೊಡ್ಡಿ ಮಾದರಿ ಗ್ರಾಮದ ಭಾಗವಾಗಿ ಆಯೋಜನೆಗೊಳಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ 22 ರಂದು ಆಯೋಜಿಸಲಾಗಿತ್ತು ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನ ತಜ್ಞ ಮತ್ತು ನುರಿತ ವೈದ್ಯರ ತಂಡ ಆಗಮಿಸಿತ್ತು ಇದರ ಸದುಪಯೋಗವನ್ನು ಹೃದಯ ರೋಗದ ಸಮಸ್ಯೆಗಳಿಂದ ಬಳಲುವವರು,
ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವವರು, ನರರೋಗ ಸಮಸ್ಯೆಯಿಂದ ಬಳಲುವವರು, ಹಾಗೂ ಇತರೆ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಉಚಿತ ಆ
ರೋಗ್ಯ ತಪಾಸಣಾ ಶಿಬಿರದ ಫಲನುಭವಿಗಳಾಗಿದ್ದರು
2 ರಿಂದ 3 ದಿನಗಳ ನಿರಂತರವಾಗಿ , ಮನೆ ಮನೆಗಳಿಗೆ ಭೇಟಿ ನೀಡಿ ಶಿಬಿರದ ಕುರಿತು ಪ್ರಚಾರ ಮಾಡಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇರಕಲಗಡ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪರಿಣಾಮದಿಂದಾಗಿ ಗೋಸಲದೊಡ್ಡಿ ಗ್ರಾಮದ ಸುತ್ತಲೂ ಇರುವ ಅನೇಕ ಹಳ್ಳಿಗಳಿಂದ
(ಕೊಡದಾಳ, ಚಾಮಲಾಪುರ, ಚಿಲಕಮುಖಿ,ಜಿನ್ನಾಪುರ,
ಜಿನ್ನಾಪುರ ತಾಂಡ, ಯಲಮಗೇರಿ, ತಲ್ಲೂರು ತಾಂಡ, ಸೇರಿದಂತೆ ಹಲವು ಗ್ರಾಮಗಳಿಂದ 400 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಉಚಿತ ತಪಾಸಣೆ, ಔಷದಿ,ಮತ್ತು ಹಲವಾರು ಮಾರ್ಗದರ್ಶನ, ಪಡೆದುಕೊಂಡು ಈ ಆರೋಗ್ಯ ತಪಾಸಣಾ ಶಿಬಿರದ ಫಲಾನುಭವಿಗಳಾಗಿದ್ದಾರೆ ಮತ್ತು
ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಅತ್ಯಂತ ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಹಿರೇ ಬಂನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಆಶಾ ಕಾರ್ಯಕರ್ತೆಯರು ತಮ್ಮ ಗ್ರಾಮದ ಎಲ್ಲ ರೋಗಿಗಳನ್ನ ಈ ಕಾರ್ಯಕ್ರಮಕ್ಕೆ ಮನವೊಲಿಸಿ ಭಾಗವಹಿಸುವಂತೆ ಮಾಡಿದ್ದು ಅವರ ಸಕ್ರಿಯಾತ್ಮಕ ಚಟುವಟಿಕೆಗೆ ಪೂರಕವಾಗಿದೆ ಗೋಸಲದೊಡ್ಡಿ ಗ್ರಾಮದ ಸಮಸ್ತ ಬಂಧುಗಳ ಸಹಾಯದಿಂದ ಯುವಕರ ಸಹಾಯದಿಂದ ಹಿರಿಯರ ಸಹಾಯದಿಂದ ಈ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು ಈ ಕಾರ್ಯಕ್ರಮದ ಮುಖ್ಯ ರುವಾರಿಗಳಾಗಿರುವಂತಹ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ರವರ ನಾಯಕತ್ವದಲ್ಲಿ ಕಾರ್ಯಕ್ರಮವು ಯಶಸ್ವಿಗೊಂಡಿತು
ಜೊತೆಗೆ ಈ ಕಾರ್ಯಕ್ರಮಕ್ಕೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಿಂದ ಆಗಮಿಸಿದ್ದ ತಜ್ಞ ವ್ಯದ್ಯರು ಗಳಾದ Dr Shubam – Cardiology
Dr Vikram – Urology
Dr Faiz. – Neurolog
Vikas – Echo Techತಂಡವು ಕೂಡ ಸಕ್ರಿಯವಾಗಿ,ಆಸಕ್ತಿಯಿಂದ, ಮತ್ತು ಪ್ರಾಮಾಣಿಕ ಕರ್ತವ್ಯವನ್ನು ನಿಭಾಯಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಒಂದು ಅತ್ಯುತ್ತಮ ಕಾರ್ಯಕ್ರಮ ವಾಗಿ ನೆರವೇರಲು ಕಾರಣೀಕರ್ತರಾದ್ರು ಹಾಗೂ ಗ್ರಾಮದ ಹಿರಿಯರಾದ ಹನುಮಂತಪ್ಪ,ಕರಿಯಣ್ಣ,ಪರಶುರಾಮ, ಮೂಕಪ್ಪ ಮತ್ತು ಶಾಲಾ ಮುಖ್ಯ ಗುರುಗಳಾದ ಮಂಜುನಾಥ್ ಹಾಗೂ ಸರ್ವೋದಯ ಸಂಸ್ಥೆಯೆಂದ ಶಂಕ್ರಪ್ಪ,ದೀಪಾ ಸುನಿಲ್, ಶಶಿಕುಮಾರ್, ಅಕ್ಕಮ್ಮ, ಯಂನೂರಪ್ಪ,ಮುಂತಾದವವ್ರು ಭಾಗವಹಿಸಿ ಶಿಬಿರವನ್ನು ಸಾರ್ಥಕ ಗೊಳಿಸಿದರು
Comments are closed.