ಕೊಪ್ಪಳ ಭಾಗ್ಯನಗರ ಬಂದ್ ; ಮುಖಂಡರನ್ನು ಭೇಟಿ ಮಾಡಿದ ಜಂಟಿ ವೇದಿಕೆ ಸದಸ್ಯರು

Koppal Bhagyanagar bandh; Joint Forum members meet leaders

Get real time updates directly on you device, subscribe now.

Koppal Bhagyanagar bandh; Joint Forum members meet leaders

೧೧೪ ನೇ ದಿನ ಪೂರ್ಣಗೊಳಿಸಿದ ಬಲ್ಡೋಟ ವಿರೋಧಿ ಹೋರಾಟ
ಕೊಪ್ಪಳ: ಇಲ್ಲಿನ ನಗರಸಭೆ ಸಂಕೀರ್ಣದ ಮುಂದುಗಡೆ ನಡೆದಿರುವ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ದ ೧೧೪ ನೇ ದಿನ ಸಂಪನ್ನಗೊAಡಿತು. ಫೆ. ೨೪ ರಂದು ಕರೆದಿರುವ ಕೊಪ್ಪಳ ಭಾಗ್ಯನಗರ ಬಂದ್ ಕುರಿತು ಮನವರಿಕೆ ಮಾಡಿಕೊಡಲು ಮತ್ತು ಹೋರಾಟಕ್ಕೆ ಆಹ್ವಾನ ಮಾಡಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಸದಸ್ಯರು ವಿವಿಧ ಮುಖಂಡರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ಸರ್ವಪಕ್ಷಗಳ ಮುಖಂಡರನ್ನು ಕೊಪ್ಪಳ ಭಾಗ್ಯನಗರ ಬಂದ್ ಹೋರಾಟದ ಬೆಂಬಲಕ್ಕೆ ಬರಬೇಕೆಂದು ಕರಪತ್ರ ಕೊಟ್ಟು ಆಹ್ವಾನ ಕೊಡಲಾಯಿತು. ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು, ಸದರಿ ಹೋರಾಟ ಬೆಂಬಲಿಸಿ, ಸರ್ಕಾರದ ಹಂತದಲ್ಲಿ ಬೇಗ ಬಲ್ಡೋಟ ವಿಸ್ತರಣೆ ನಿಲುಗಡೆ ಆದೇಶ ಮಾಡಿಸಬೇಕು. ಶೀಘ್ರವೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಮಂತ್ರಿಗಳನ್ನು ಬಾಧಿತ ಹಳ್ಳಿಗಳಿಗೆ ಕರೆದುಕೊಂಡು ಬರಬೇಕು, ಬಸಾಪುರ ಕೆರೆ ಸಾರ್ವಜನಿಕರು, ಜಾನುವಾರುಗಳಿಗೆ ನೀರು ಕುಡಿಯಲು ಬಲ್ಡೋಟ ಅತಿಕ್ರಮಣವನ್ನು ತೆರವುಗೊಳಿಸಬೇಕು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿ ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ ಎರಡೂ ಸರ್ಕಾರ ಸೇರಿಸಿ ತಾವೆಲ್ಲ ಸೇರಿ ಬಾಧಿತ ಜನರ ಜೀವ ಉಳಿಸಿ ಎಂದು ಜಂಟಿ ಕ್ರಿಯಾ ವೇದಿಕೆ ಮೂಲಕ ಆಗ್ರಹಿಸಿದರು. ಅದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ, ಹೋರಾಟಕ್ಕೆ ಕೈಜೋಡಿಸತ್ತೇವೆ ಎಂದಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ,
ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿ ಆಮಂತ್ರಣ ಕೊಡಲಾಯಿತು. ವಿ.ಪ. ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ, ಬಿಜೆಪಿ ಮುಖಂಡರಾದ ಡಾ.ಬಬಸವರಾಜ ಕ್ಯಾವಟರ ಅವರಿಗೆ ಹೋರಾಟಕ್ಕೆ ಬೆಂಬಲಿಸಿ ಬರುವಂತೆ ಆಹ್ವಾನ ಕೊಡಲಾಯಿತು.
ತಂಡದಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ವಕೀಲರಾದ ರಾಜು ಬಾಕಳೆ, ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಪ್ರಕಾಶಕಿ ಮಾಲಾ ಬಡಿಗೇರ, ಸೌಮ್ಯ ನಾಲ್ವಾಡ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಈಶ್ವರ ಕೊರ್ಲಹಳ್ಳಿ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಪ್ರಕಾಶಕ ಡಿ.ಎಂ.ಬಡಿಗೇರ, ರಂಗ ನಿರ್ದೇಶಕ ಶರಣು ಶೆಟ್ಟರ್, ಕಾಶಪ್ಪ ಚಲುವಾದಿ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ.ಪಾಟೀಲ ಮುಂತಾದ ಪ್ರಮುಖರು ಇದ್ದರು. ೧೧೪ನೇ ದಿನದ ಧರಣಿಯನ್ನು ಮಹಾದೇವಪ್ಪ ಮಾವಿನಮಾಡು, ಶಿವಪ್ಪ ಜಲ್ಲಿ, ಗಂಗಮ್ಮ ಕೊಡೇಕಲ್, ಗವಿಸಿದ್ದಪ್ಪ ಹಲಿಗಿ, ಸುರೇಶ ಪೂಜಾರ, ಪ್ರಕಾಶ ಹೊಳೆಯಪ್ಪನನರ ಮುಂತಾದವರು ನಡೆಸಿದರು.

Get real time updates directly on you device, subscribe now.

Comments are closed.

error: Content is protected !!