ಜಮೀನಿನ ವಿಷಯವಾಗಿ ಹಲ್ಲೇ ಮಾಡಿ ದೌರ್ಜನ್ಯ ಎಸಗಿದ ಅಪರಾಧಿಗೆ ಶಿಕ್ಷೆ
ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಧೀಶರು, ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ. ಈ ಪ್ರಕರಣದಲ್ಲಿ ಬಹದ್ದೂರುಬಂಡಿ ಗ್ರಾಮದ ವಿರುಪಾಕ್ಷಪ್ಪ ತಂದೆ ಸಿದ್ದಪ್ಪ ಇತನ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ತ್ರೀವೇಣಿ ಈರಗಾರ ರವರು ಅಪರಾಧಿಗೆ 09 ತಿಂಗಳು ಜೈಲು ಶಿಕ್ಷೆ ಹಾಗೂ ರೂ. 1300 ಗಳ ದಂಡ ವಿಧಿಸಿ ದಿ: 17-02-2026 ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಭಾರತಿ ವಾಡೇಕರ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿನ ಕೊಪ್ಪಳ ಗ್ರಾಮೀಣ ಪೊಲೀಸರಾದ ಮಹೇಶಕುಮಾರ ಸಿಹೆಚ್ಸಿ-145, ರವಿಕುಮಾರ ಪಿಸಿ-557, ರಾಘವೇಂದ್ರ ಪಿಸಿ-600, ಶೇಕ್ಷಾವಲಿ ಹೆಚ್ಸಿ-122, ಕೆಂಚಪ್ಪ ಹೆಚ್ಸಿ-69 ಇವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Comments are closed.