


ಗಂಗಾವತಿ: ಕಳೆದ ೨೫-೩೦ ವರ್ಷಗಳಿಂದ ಗಂಗಾವತಿ ನಗರದ ಜೈಭೀಮ್‌ನಗರದ ನಿವಾಸಿಗಳು ಯಾವುದೇ ಹಕ್ಕುಪತ್ರವಿಲ್ಲದೇ ಮೂಲಸೌಕರ್ಯಗಳಿಲ್ಲದೇ ನಿರ್ಲಕ್ಷö್ಯಕ್ಕೆ ಒಳಗಾಗಿದ್ದರು. ಈ ನಿವಾಸಿಗಳ ಗೋಳು ಮುಗಿಲುಮುಟ್ಟಿತ್ತು. ಅವರ ಪರವಾಗಿ ಕ್ರಾಂತಿಚಕ್ರ ಬಳಗ ಸಂಘಟನೆಯು ವಿವಿಧ ಸಂಘಟನೆಗಳೊAದಿಗೆ ಹಾಗೂ ಕೆಲವು ದಲಿತ ಮುಖಂಡರೊAದಿಗೆ ಈ ಹಿಂದೆಯೇ ಹೋರಾಟ ಮಾಡಿತ್ತು. ಆದರೆ ಈಗಿನ ನಗರಸಭೆ ಸದಸ್ಯ ಎಫ್. ರಾಘವೇಂದ್ರರವರ ಹೋರಾಟದ ಪರಿಶ್ರಮ ಜೈಭೀಮ್ ನಿವಾಸಿಗಳಿಗೆ ನ್ಯಾಯ ಒದಗಿಸಿದಂತಾಗಿದೆ. ಎಫ್. ರಾಘವೇಂದ್ರರವರ ಪ್ರಾಮಾಣಿಕ ಹೋರಾಟಕ್ಕೆ ಜಯ ಸಿಕ್ಕಿರುವುದು ಅತೀವ ಸಂತಸ ತಂದಿದೆ ಎಂದು ಕ್ರಾಂತಿಚಕ್ರ ಬಳಗದ ಅಧ್ಯಕ್ಷರಾದ ಭಾರಧ್ವಾಜ್ ಹರ್ಷ ವ್ಯಕ್ತಪಡಿಸಿದರು.
ಅವರು ಇಂದು ತಮ್ಮ ಕ್ರಾಂತಿಚಕ್ರ ಬಳಗ ಕಾರ್ಯಾಲಯದ ಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದರು. ಎಫ್. ರಾಘವೇಂದ್ರರವರು ಉತ್ತಮ ಜನನಾಯಕನಾಗಿದ್ದು, ಜೈಭೀಮ್ ನಗರದ ನಿವಾಸಿಗಳ ಪರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳು ಹಾಗೂ ಸಂಬAಧಪಟ್ಟ ಸಚಿವರ ಜೊತೆ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಸಹಕಾರದಿಂದ ಈ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ನಗರಸಭೆ ಚುನಾವಣೆಯಲ್ಲಿಯೂ ಜನರು ಅವರನ್ನು ಬೆಂಬಲಿಸುವAತೆ ಕರೆ ನೀಡಿದರು. ಮುಂದಿನ ಅವಧಿಯಲ್ಲಿಯೂ ಎಫ್. ರಾಘವೇಂದ್ರ ಅವರು ಸಾರ್ವಜನಿಕರ ಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಗಂಗಾವತಿ ನಗರಕ್ಕೆ ಮಾದರಿ ನಗರಸಭಾ ಸದಸ್ಯರಾಗಲಿ, ಅವರ ರಾಜಕೀಯ ಭವಿಷ್ಯ ಉಜ್ವಲವಾಗಿ ಬೆಳೆಯಲಿ ಎಂದು ಆಶಿಸಿದರು.