ಎಸ್.ಡಿ. ಪಿ. ಐ. ಪಕ್ಷದ ಸಮಾವೇಶ ಹಾಗೂ SIR ಜನಜಾಗೃತಿ ಕಾರ್ಯಕ್ರಮ
.
ಕೊಪ್ಪಳ :
ಕೊಪ್ಪಳ ನಗರದಲ್ಲಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ (SDPI ) ಕೊಪ್ಪಳ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಪಕ್ಷದ ಸಮಾವೇಶ ಹಾಗೂ SIR ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ SDPI ಪಕ್ಷದ ರಾಜ್ಯದ ಪ್ರಧಾನ ಕಾರ್ಯದರ್ಶಿ ಯಾದ ರಂಜಾನ್ ಕಡಿವಾಳ್ ಅವರು ಮಾತನಾಡಿ SIR ಪ್ರಕ್ರಿಯೆ ಹಿಂಬಾಗಿಲ NRC ಯಾಗಿದ್ದು ಲಕ್ಷಾಂತರ ಮತದಾರರು ಮತದಾನದ ಹಕ್ಕಿನಿಂದ ವಂಚಿತರಗುವ ಭೀತಿ ಇದೆ ಎಂದರು. ಹಾಗೂ SIR ಮಪಿಂಗ್ ಹೇಗೆ ಮಾಡಿಸಬೇಕು ಎಂದು ತಿಳಿಸಿಕೊಟ್ಟರು. ಹಾಗೂ ಕೇಳುಗರ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಮತ್ತೊರ್ವ ಮುಖ್ಯ ಅತಿಥಿಯಾದ ಜಿಲ್ಲಾ ಸಮಿತಿಯ ಸದಸ್ಯರು ಅದ ಹುಜೂರ್ ಅಹ್ಮದ್ ಮಾತನಾಡಿ ಪಕ್ಷದ ಕಾರ್ಯವೈಖರಿ ತಿಳಿಸುತ್ತಾ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಸಹಕಾರ ನೀಡಬೇಕೆಂದು ಯಾಚಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಝಿ- ಉರ್-ರೆಹಮಾನ್, ಜಿಲ್ಲಾ ಸಮಿತಿಯ ಸದಸ್ಯರಾದ, ನಿಜಾಮುದ್ದಿನ್ ಮಾಳೆಕೊಪ್ಪ, ಇರ್ಫಾನ್, ಮೊಹಮ್ಮದ್ ಸಾದಿಕ್, ಆರ್ಷದ್, ಫಾರೂಕ್, SDTU ನ ಪೀರು, ವಿಮೆನ್ಸ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾಧ್ಯಕ್ಷೆ ಸುಹಾನಾ ನಾಜ್, ಹಾಗೂ WIM ನ ನೂರಾರು ಕಾರ್ಯಕರ್ತೆಯರು, ಹಾಗೂ ಭಾರಿ ಸಂಖ್ಯೆ ಯಲ್ಲಿ SDPI ನ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಇದೆ ರ್ಯಕ್ರಮದಲ್ಲಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಕಾರ್ಯವೈಖರಿಯನ್ನು ಮೆಚ್ಚಿ ನೂರಾರು ಜನ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಸಲೀಮ್ ಖಾದ್ರಿ ಅವರು ವಹಿಸಿದ್ದರು. ಸಲೀಮ್ ಖಾದ್ರಿ ಯವರು ಎಲ್ಲರಿಗೂ ಕಾರ್ಯಕ್ರಮ ಯಶಸ್ವಿ ಗೊಳಿಸಿದ್ದಕ್ಕೆ ಒಂದಾನರ್ಪಣೆ ಸಲ್ಲಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ