ನಾಳೆ ಬನಶಂಕರಿ ದೇವಿ ರಥೋತ್ಸವ

Get real time updates directly on you device, subscribe now.

ಕೊಪ್ಪಳ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಜ.೩೦ ರಿಂದ ಫೆ.೦೨ ರವರೆಗೆ ಗ್ರಾಮದೇವತೆ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.೦೧ ರಂದು ಸಂಜೆ ೫.೪೫ ಕ್ಕೆ ರಥೋತ್ಸವ ಜರುಗಲಿದೆ.
ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಜ.೩೦ ರಂದು ಶ್ರೀದೇವಿಗೆ ಕಂಕಣಧಾರಣ ಕಾರ್ಯಕ್ರಮ, ಜ.೩೧ ರಂದು ಬೆಳಿಗ್ಗೆ ೬.೦೦ ರಿಂದ ೯.೩೦ ರವರೆಗೆ ದೇವಿಗೆ ಫಲಪೂಜಾ ಕಾರ್ಯಕ್ರಮ, ಫೆ.೦೧ ರಂದು ಬೆಳಿಗ್ಗೆ ಹೋಮ ಹವನ ಕಾರ್ಯಕ್ರಮ ಮತ್ತು ಮುತೈದೆಯರಿಂದ ಊಡಿ ತುಂಬುವ ಕಾರ್ಯಕ್ರಮ, ದೇವಿಗೆ ಪುಷ್ಪಾಲಂಕಾರ ಪೂಜೆ, ತೇರಿನ ಮುಂಬಾಗದಲ್ಲಿ ರಂಗೋಲಿ ಸ್ಪರ್ಧೆ, ನಂತರ ಮಧ್ಯಾಹ್ನ ೧೨ ಗಂಟೆಯಿಂದ ಕರಿಯಮ್ಮ ದೇವಸ್ಥಾನದ ಹತ್ತಿರ ಅನ್ನಸಂತರ್ಪಣೆ ನಡೆಯುವುದು, ಸಂಜೆ ೫.೪೫ ಗಂಟೆಗೆ ಮೈನಳ್ಳಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಅಮೃತ ಹಸ್ತದಿಂದ ಧ್ವಜಾರೋಹಣ ನಂತರ ಶ್ರೀದೇವಿಯ ರಥೋತ್ಸವ ಜರುಗಲಿದೆ. ರಾತ್ರಿ ೧೦ ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘದಿಂದ ರೈತ ಮನೆತನ ನಾಟಕ ಪ್ರದರ್ಶನ ಜರುಗಲಿದೆ. ಫೆ.೦೨ ರಂದು ಬೆಳಿಗ್ಗೆ ಶ್ರೀದೇವಿಗೆ ಶಾಕಾಂಬರಿ ಪೂಜಾ, ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಹೊಂಬೆಳಕು ರಸಮಂಜರಿ ಕಾರ್ಯಕ್ರಮ, ಮೊದಲಾದ ಕಾರ್ಯಕ್ರಮಗಳು ಜರುಗಲಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗ್ರಾಮಸ್ಥರು ಪ್ರಕಟಣೆಯ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!