ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ಹುತಾತ್ಮ ದಿನಾಚರಣೆ

Get real time updates directly on you device, subscribe now.

ಗಂಗಾವತಿ: ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹುತಾತ್ಮರ ದಿನವನ್ನು ಆಚರಿಸಲಾಯಿತು. ಮಹಾತ್ಮಾ ಗಾಂಧೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೇಶದ ಹುತಾತ್ಮರನ್ನು ಸ್ಮರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀ ಸೇರಿದಂತೆ ಅನೇಕರು ಹುತಾತ್ಮರಾಗಿದ್ದು ಅವರ ಸೇವೆ ಸ್ಮರಿಸಬೇಕು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ನೀಡಿದರು. ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಬಸವರಾಜ ಕರುಗಲ್ ಮಾತನಾಡಿದರು. ಈ ಸಂದರ್ಭದಲ್ಲಿ ಬೋಧಕ ಸಿಬ್ಬಂದಿ ನಿರ್ವಹಣಾ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಅಶ್ರಫ್ ಅಳ್ಳಳ್ಳಿ, ಸತೀಶ್ ಇಟಗಿ, ಮಾಲತಿ, ಪತ್ರಾಂಕಿತ ವ್ಯವಸ್ಥಾಪಕರಾದ ರಾಘಮ್ಮ ಸಿ., ಅಧೀಕ್ಷಕರಾದ ಶಾಮೀದ್.ಕೆ, ಪ್ರಥಮ ದರ್ಜೆ ಸಹಾಯಕರಾದ ಪ್ರತಿಭಾ ಮುದಗಲ್, ಬೋಧಕೇತರ ಸಿಬ್ಬಂದಿ ವೀರೇಶ್, ದುರ್ಗೇಶ್, ಮಡಿವಾಳಪ್ಪ, ಮಲ್ಲಿಕಾರ್ಜುನ, ನಾಗರಾಜ, ಸುಶೀಲಮ್ಮ, ಶರಣಮ್ಮ ಇತರರಿದ್ದರು. ವೆಂಕಟೇಶ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!