ಕೊಪ್ಪಳ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಪದಗ್ರಹಣ

Get real time updates directly on you device, subscribe now.

ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಕೈ ಮುಖಂಡರಿಂದ ಸನ್ಮಾನ

ಕೊಪ್ಪಳ : ಇಲ್ಲಿನ ಪಿ.ಎಲ್.ಡಿ ಬ್ಯಾಂಕ್ ಗೆ ನೂತನ ಅಧ್ಯಕ್ಷರಾಗಿ ಸಂಗನಗೌಡ ಬಿ.ಟಿ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಪರಶುರಾಮಪ್ಪ ಮತ್ತೂರು ಆಯ್ಕೆಯಾಗಿದ್ದು, ಗುರುವಾರದಂದು ಪಿ.ಎಲ್.ಡಿ ಬ್ಯಾಂಕಿನ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.

ನೂತನವಾಗಿ ಸಂಗನಗೌಡ ಅವರು, ಉಪಾಧ್ಯಕ್ಷರಾಗಿ ಪರಶುರಾಮಪ್ಪ ಅವರು ಪದಗ್ರಹಣ ಸ್ವೀಕರಿಸುತ್ತಿದ್ದಂತಯೇ ಗಂಗಾವತಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಗರಾದ ಅಮರೇಶ ಗೋನಾಳ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮನೋಹರಸ್ವಾಮಿ, ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಮಾರುತಿ ತೋಟಗಂಟಿ,ಡಿಸಿಸಿ ಸದಸ್ಗರಾದ ಗವಿಸಿದ್ದಯ್ಯ ಹಿರೇಮಠ, ಇರಕಲ್ ಗಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೀರೇಶ ಪಟ್ಟಣಶೆಟ್ಟಿ, ಕಾಂಗ್ರೇಸ್ ಮುಖಂಡರಾದ ಸಿದ್ದನಗೌಡ ಪಾಟೀಲ್, ಮಂಜುನಾಥ ನೆಲಜೇರಿ,ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಮರಿಯಪ್ಪ ಬಿನ್ನಿ,ಹನುಮಂತಪ್ಪ ಕಾಟಾಪುರ,ಬಾಳಪ್ಪ ಕಾಮನೂರು ಸೇರಿದಂತೆ ಮತ್ತಿತರರು ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.

Get real time updates directly on you device, subscribe now.

Comments are closed.

error: Content is protected !!