ಉಣ್ಣೆ ಮತ್ತು ಕೈಮಗ್ಗ ಗ್ರಾಮೀಣ ಪ್ರದೇಶದ ಆರ್ಥಿಕತೆಯ ಬೆನ್ನೆಲುಬು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ : ಇಂದು ಕೊಪ್ಪಳ ಮತಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಉಣ್ಣೆ ಮತ್ತು ಕೈಮಗ್ಗ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉಣ್ಣೆ ಮತ್ತು ಕೈಮಗ್ಗ ಕ್ಷೇತ್ರವು ನಮ್ಮ ದೇಶದ ವಿಶೇಷವಾಗಿ ನಮ್ಮ ರಾಜ್ಯದ ಸಂಪ್ರದಾಯಿಕ ಕಲೆ ಆಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆಯ ಬೆನ್ನೆಲುಬು ಆಗಿದೆ.ಕೈಮಗ್ಗ ನೇಯ್ಗೆಯನ್ನು ಪ್ರೋತ್ಸಾಹಿಸಲು ಸರ್ಕಾರ ಉಣ್ಣೆ,ಹತ್ತಿ ಹಾಗೂ ರೇಷ್ಮೆ ಕೈಮಗ್ಗಗಳನ್ನು ಖರೀದಿಸಲು ಫಲಾನುಭವಿಗಳಿಗೆ 50% ಮತ್ತು ಸಹಕಾರ ಸಂಘಗಳಿಗೆ 75% ಸಹಾಯಧನ ನೀಡುತ್ತಿದೆ ಎಂದರು.

ಈ ವೇಳೆ ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್,ಗುಡದಪ್ಪ ಹಲಿಗೇರಿ,ಶಂಕರಪ್ಪ ಅಂಗಡಿ. ದೇವಪ್ಪ ವದಗನಾಳ,ಅಶೋಕ ಹಲಿಗೇರಿ,ನಾಗರಾಜ ಓಜನಹಳ್ಳಿ, ಶರಣಪ್ಪ ಬಿನ್ನಾಳ, ಶಂಭುಲಿಂಗನಗೌಡ ಪಾಟೀಲ್, ಸುರೇಶ ಹಳ್ಳಿಕೇರಿ, ಕರಿಯಪ್ಪ ಹಳ್ಳಿಕೇರಿ, ಹನಮಂತಪ್ಪ ಅಬ್ಬಿಗೇರಿ, ಶರಣಪ್ಪ ಅಬ್ಬಿಗೇರಿ, ಶಂಕರ್ ಸಿಂದೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!